ಇನ್‌ಫೆಕ್ಷನ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಆ್ಯಂಟಿ ಆಕ್ಸಿಡೆಂಟ್ಸ್, ಬಿಟಾ ಕೆರೋಟಿನ್ ಮತ್ತು ವಿಟಮಿನ್ ಸಿ ತುಂಬಿದ ಪಾಲಕ್ ಸೊಪ್ಪು.
ವಿಟಮಿನ್ ಸಿ ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತಂತೆ. ಎಲ್ಲಾ ಸಿಟ್ರಸ್‌ಯುಕ್ತ ಹಣ್ಣುಗಳಲ್ಲಿ ವಿಟಮನ್ ಸಿ ಇರುತ್ತೆ. ನಿಂಬೆ, ಕಿತ್ತಳೆ, ಮೂಸಂಬಿ, ದ್ರಾಕ್ಷಿ ಹೆಚ್ಚುತಿನ್ನಿ.
ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್ ಇ ಇಮ್ಯೂನ್ ಸಿಸ್ಟ್‌ಮ್ ಸರಿಯಾಗಿ ಕೆಲಸ ಮಾಡಲು ಉಪಯುಕ್ತ. ಬಟರ್‌ಫ್ಟೂಟಿನಲ್ಲಿ ವಿಟಮಿನ್ ಇ ಹೆಚ್ಚಿರುವ ಮತ್ತೊಂದು ಅಪ್ಷನ್.
ಅಗತ್ಯ ಪೋಷಕಾಂಶಗಳು ತುಂಬಿರುವ ಹಣ್ಣು ಕಿವೀ. ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿದರೆ, ಇತರ ಪೋಷಕಾಂಶಗಳು ದೇಹದ ಉಳಿದ ಭಾಗಗಳ ಕಾರ್ಯನಿರ್ವಹಣೆಗೆ ಬೆಸ್ಟ್.
ಗಂಟಲು ನೋವು ಮತ್ತು ಇತರೆ ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡುವ ಗುಣ ಶುಂಠಿಗಿದೆ.
ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ವಿಟಮಿನ್ ಸಿ ಜೊತೆ ಪೊಟ್ಯಾಷಿಯಂ, ಬಿ ವಿಟಮಿನ್ ಮತ್ತು ಫೋಲೇಟ್ ಇರುವ ಪಪ್ಪಾಯಿ ಹಣ್ಣು ಒಟ್ಟಾರೆ ಆರೋಗ್ಯಕ್ಕೆ ಹೆಲ್ಪ್‌ಫುಲ್.
ನಾವು ಅನಾದಿ ಕಾಲದಿಂದಲೂ ತಿನ್ನುತ್ತಾ ಬಂದಿರುವ ಮೊಸರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸ್ವಾಭಾವಿಕವಾಗಿ ರೋಗದ ವಿರುದ್ಧ ಹೋರಾಡುವ ಗುಣ ಇದೆ.
ಆ್ಯಂಟಿಆಕ್ಸಿಡೆಂಟ್ ಹೆಚ್ಚು ಇರುವ ಗ್ರೀನ್‌ಟೀ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ.
ನಮ್ಮ ಪ್ರತಿಯೊಂಜೂ ಅಡುಗೆಯಲ್ಲಿಯೂ ಬಳಸುವ ಅರಿಶಿನ ನ್ಯಾಚುರಲ್ ಆ್ಯಂಟಿಬಯೋಟಿಕ್. ತುಳಿಸಿ, ಬಾದಾಮಿ, ಕೊಬ್ಬರಿ ಎಣ್ಣೆ, ಬೆರ್ರಿ ಹಣ್ಣುಗಳು ಇಮ್ಯೂನಿಟಿ ಹೆಚ್ಚಿಸುವ ಸೂಪರ್ ಫುಡ್‌ಗಳು.