ಇಮ್ಯುನಿಟಿ ಬೂಸ್ಟ್ ಮಾಡಲು ಏನೇನು ತಿನ್ನಬೇಕು? ಅರೋಗ್ಯ ಇಲಾಖೆ ಹೇಳೋದಿಷ್ಟು

First Published May 9, 2021, 6:07 PM IST

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ನಮ್ಮ ಇಮ್ಯೂನಿಟಿ ಬೂಸ್ಟ್ ಮಾಡುವುದು ತುಂಬಾ ಮುಖ್ಯವಾಗಿದೆ. ಕೊರೋನಾ ಸೋಂಕಿಗೆ ಒಳಗಾಗಿದ್ದರೆ ಉತ್ತಮ ಆಹಾರಗಳನ್ನು ಸೇವಿಸಬೇಕು. ಇದರಿಂದ ಉತ್ತಮ ಅರೋಗ್ಯ, ಎನರ್ಜಿ ಪಡೆಯಬಹುದು. ಅದಕ್ಕಾಗಿ ಭಾರತ ಸರ್ಕಾರ ಕೆಲವೊಂದು ಅರೋಗ್ಯ ಮಾಹಿತಿಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿಯಿರಿ.  

ಕೋವಿಡ್ ರೋಗಿಗಳು ಮುಖ್ಯವಾಗಿ ಮಸಲ್ಸ್, ಇಮ್ಯೂನಿಟಿ, ಮತ್ತು ಎನರ್ಜಿ ಲೆವೆಲ್ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
undefined
ಇಡೀ ಧಾನ್ಯಗಳಾದ ಗೋಧಿ, ರಾಗಿ ಮೊದಲಾದ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
undefined
ಪೌಷ್ಟಿಕ ಅಂಶ ಹೆಚ್ಚಿರುವಂತಹ ಚಿಕನ್, ಮೀನು, ಮೊಟ್ಟೆ, ಪನೀರ್, ಸೋಯಾ, ನಟ್ಸ್ ಮತ್ತು ಸೀಡ್ಸ್ ಹೆಚ್ಚಾಗಿ ಸೇವಿಸಿ.
undefined
ಅರೋಗ್ಯಕರ ಫಾಟ್ಸ್ ಗಳಾದ ವಾಲ್ನಟ್, ಬಾದಾಮಿ, ಆಲಿವ್ ಆಯಿಲ್, ಸಾಸಿವೆ ಎಣ್ಣೆ ಮೊದಲಾದವುಗಳನ್ನು ಹೆಚ್ಚಾಗಿ ಬಳಸಿ.
undefined
ರೆಗ್ಯುಲರ್ ಆಗಿ ಶಾರೀರಿಕ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ. ಉಸಿರಾಟದ ವ್ಯಾಯಾಮವನ್ನು ಮಾಡಿ.
undefined
ಪೌಷ್ಠಿಕಾಂಶದ ಮೂಲವಾಗಿರುವ ಬೇರೆ ಬೇರೆ ರೀತಿಯ ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಪ್ರತಿದಿನವೂ ಆಹಾರದಲ್ಲಿ ಸೇರಿಸಿ.
undefined
70% ಕೊಕೊವಾ ಹೊಂದಿರುವ ಸಣ್ಣ ಡಾರ್ಕ್ ಚಾಕಲೇಟ್ , ಒತ್ತಡ , ಆತಂಕದಿಂದ ಹೊರ ಬರಲು ಸಹಾಯ ಮಾಡುತ್ತದೆ.
undefined
ಇಮ್ಯೂನಿಟಿ ಬೂಸ್ಟ್ ಮಾಡಲು ಪ್ರತಿದಿನ ಒಂದು ಬಾರಿ ಅರಿಶಿನ ಬೆರೆಸಿದ ಹಾಲು ಸೇವಿಸಿ.
undefined
ಕೊರೋನಾ ಪಾಸಿಟಿವ್ ಆಗಿರುವವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣ ಎಂದರೆ ವಾಸನೆ ಮತ್ತು ಬಾಯಿಯ ರುಚಿ ಇಲ್ಲದಂತೆ ಆಗುತ್ತದೆ. ಇದಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡಬೇಡಿ.
undefined
ಕೊರೋನಾ ಸಮಯದಲ್ಲಿ ಸಾಫ್ಟ್ ಆಹಾರಗಳನ್ನು ಹೆಚ್ಚಾಗಿ ಸೇವಿಸಿ, ಜೀರ್ಣವಾಗದಂತಹ ಆಹಾರಗಳನ್ನು ಸೇವಿಸಬೇಡಿ. ನಿಮ್ಮ ಆಹಾರದಲ್ಲಿ ಆಮ್ ಚೂರ್ ಪುಡಿ ಸೇರಿಸಿ ತಿನ್ನಿ.
undefined
click me!