ರಕ್ತದಲ್ಲಿನ ಸಕ್ಕರೆ ಮಟ್ಟಗಳು: ಹೈಪರ್ ಗ್ಲೈಸೀಮಿಯಾವನ್ನು ನಿಯಂತ್ರಿಸಲು ತಕ್ಷಣದ ಪ್ರಯತ್ನವನ್ನು ಮಾಡದಿದ್ದರೆ, ಅದು ಮಧುಮೇಹ ಕೀಟೋಅಸಿಡೋಸಿಸ್ ಗೆ ಕಾರಣವಾಗಬಹುದು. ಈ ಪರಿಸ್ಥಿತಿ ಮಾರಕವಾಗಬಹುದು. ಹೈಪರ್ ಗ್ಲೈಸೀಮಿಯಾದ ರೋಗಲಕ್ಷಣಗಳಲ್ಲಿ ವಾಂತಿ, ವಾಕರಿಕೆ, ಕೆಟ್ಟ ಉಸಿರು, ಗೊಂದಲ, ಉಸಿರುಕಟ್ಟುವಿಕೆ, ಒಣ ಬಾಯಿ, ಕಿಬ್ಬೊಟ್ಟೆ ನೋವು ಇತ್ಯಾದಿಗಳು ಇರಬಹುದು.