
ಇತ್ತೀಚಿನ ದಿನಗಳಲ್ಲಂತೂ ಜನರಿಗೆ ಕೆಲಸದ ಒತ್ತಡವು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ಇದು ಮಾನಸಿಕ ಆರೋಗ್ಯ (mental health) ಮತ್ತು ಪ್ರಾಡಕ್ಟಿವಿಟಿ ಮೇಲೆ ಪರಿಣಾಮ ಬೀರುತ್ತದೆ. ಡೆಡ್ ಲೈನ್ ಗಳು, , ದೀರ್ಘವಾದ ವರ್ಕಿಂಗ್ ಹವರ್ ಮತ್ತು ನಿರಂತರ ಒತ್ತಡದ ನಡುವೆ, ಅತಿಯಾದ ಒತ್ತಡವನ್ನು ಅನುಭವಿಸುವುದು ಸುಲಭ. ಆದರೆ ಒತ್ತಡವನ್ನು ನಿರ್ವಹಿಸಲು ಮತ್ತು ಕೆಲಸದಲ್ಲಿ ನಮ್ಮ ಮಾನಸಿಕ ಯೋಗಕ್ಷೇಮವನ್ನು ಉತ್ತಮವಾಗಿ ನೋಡಿಕೊಳ್ಳೋದು ಹೇಗೆ? ಅದಕ್ಕೂ ಒಂದಷ್ಟು ಮಾರ್ಗಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಸ್ವಲ್ಪ ಧ್ಯಾನ ಮಾಡಿ
ಒತ್ತಡವನ್ನು ನಿರ್ವಹಿಸುವಲ್ಲಿ ಧ್ಯಾನವು (meditation) ಅತ್ಯಂತ ಪರಿಣಾಮಕಾರಿಯಾಗಿದೆ. ಧ್ಯಾನಕ್ಕಾಗಿ ದಿನಕ್ಕೆ ಕೇವಲ 10-15 ನಿಮಿಷಗಳನ್ನು ಮೀಸಲಿಡಿ. ಇದು ನಿಮ್ಮ ಮನಸ್ಸನ್ನು ನಿರಾಳಗೊಳಿಸಲು, ಏಕಾಗ್ರತೆಯನ್ನು ಸುಧಾರಿಸಲು ಹಾಗೂ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಆಳವಾದ ಉಸಿರಾಟ
ಒತ್ತಡವು ಹೆಚ್ಚಾದಾಗ, ನಿಮ್ಮ ಉಸಿರಾಟವು ಸ್ಪೀಡ್ ಆಗಿರುತ್ತೆ. ಇದರಿಂದ ಸರಿಯಾಗಿ ಉಸಿರಾಡಲು (deep breathing) ನಿಮಗೆ ಸಾಧ್ಯ ಆಗೋದಿಲ್ಲ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ನಿಮ್ಮ ಮನಸ್ಸನ್ನು ಮತ್ತೆ ಕೆಲಸದ ಕಡೆಗೆ ಕೇಂದ್ರೀಕರಿಸಲು ಸಹಾಯ ಮಾಡುತ್ತೆ. ಹಾಗಾಗಿ ನೀವು ಕೂಡ ಪ್ರತಿದಿನ 20 ನಿಮಿಷಗಳ ಕಾಲ ದೀರ್ಘವಾಗಿ ಉಸಿರಾಡೋದನ್ನು ಮರಿಬೇಡಿ.
ಹಗಲಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಿರಿ
ನೀವು ಇಡೀ ದಿನ ಕೆಲಸ ಮಾಡಿರೋದರಿಂದ ಆಯಾಸ ಆಗೋದು ಖಚಿತ. ಹಾಗಾಗಿ ಅಂತಹ ಸಂದರ್ಭದಲ್ಲಿ ಹಗಲಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಆದಾಗ್ಯೂ, ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಸುಡುವಿಕೆಗೆ ಕಾರಣವಾಗಬಹುದು. ಹಗಲಿನಲ್ಲಿ ಸ್ವಲ್ಪ ವಿರಾಮಗಳನ್ನು ತೆಗೆದುಕೊಳ್ಳುವುದು, ಅಂದ್ರೆ ಆಪೀಸಿನಲ್ಲೇ ಸ್ವಲ್ಪ ವಾಕಿಂಗ್, ಸ್ವಲ್ಪ ಸ್ಟ್ರೆಚಸ್ ಮಾಡೋದು ಇದನ್ನೆಲ್ಲಾ ಮಾಡಿ. ಇದರಿಂದ ನೀವು ಹೆಚ್ಚು ಪ್ರಾಡಕ್ಟಿವ್ ಆಗುತ್ತೀರಿ. ಹೆಚ್ಚು ಕೆಲಸ ಮಾಡಲು ಆಸಕ್ತಿ ಕೂಡ ಹೆಚ್ಚುತ್ತೆ.
ಇಲ್ಲ ಎಂದು ಹೇಳಲು ಕಲಿಯಿರಿ
ಅನೇಕ ಜನರು ಒತ್ತಡಕ್ಕೆ ಒಳಗಾಗಲು ಮುಖ್ಯ ಕಾರಣ ಅಂದ್ರೆ ಅವರು ಅತಿಯಾದ ಬದ್ಧತೆ ಹೊಂದಿರುವುದು. ಕೆಲವರು ಹೇಗಿರುತ್ತಾರೆ ಅಂದ್ರೆ ಯಾರಾದರೂ ಏನೇ ಕೆಲಸ ಕೊಟ್ಟರು ಸಹ ತಮಗೆ ಆಗದೇ ಇದ್ದರೂ ಕೂಡ ಯೆಸ್ ಎನ್ನುತ್ತಾರೆ. ಇದು ತಪ್ಪು ಕೆಲಸದಲ್ಲಿ ಹೆಲ್ತಿ ಬಾರ್ಡರ್ ಹಾಕಿಕೊಳ್ಳೋದು ಉತ್ತ, ಇಲ್ಲವಾದರೆ ಅತಿಯಾದ ಕೆಲಸದಿಂದಾಗಿ ನಿಮಗೆ ಒತ್ತಡ ಉಂಟಾಗಬಹುದು. ನಿಮಗೆ ಸಾಧ್ಯವೇ ಇಲ್ಲ ಎಂದು ಅನಿಸಿದಾಗ ನೋ (Say No) ಅನ್ನೋದನ್ನು ರೂಢಿಸಿಕೊಳ್ಳೋದನ್ನು ಕಲಿಯಿರಿ.
ದೈಹಿಕ ಚಟುವಟಿಕೆ ಮಾಡಿ
ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ವ್ಯಾಯಾಮವು (physical activity) ಅತ್ಯುತ್ತಮ ಮಾರ್ಗವಾಗಿದೆ. ದೈಹಿಕ ವ್ಯಾಯಾಮ, ಅದು ಬೆಳಿಗ್ಗೆ ವ್ಯಾಯಾಮ, ಮಧ್ಯಾಹ್ನದ ನಡಿಗೆ ಅಥವಾ ನಿಮ್ಮ ಮೇಜಿನ ಬಳಿ ಸಿಂಪಲ್ ಸ್ಟ್ರೆಚಿಂಗ್ ಮಾಡೋದು ದೇಹದಲ್ಲಿ ಗುಡ್ ಹಾರ್ಮೋನ್ಸ್ ಬಿಡುಗಡೆಯಾಗಲು ಸಹಾಯ ಮಾಡುತ್ತೆ. ನಿಯಮಿತ ವ್ಯಾಯಾಮವು ಆತಂಕ ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ,ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
ಕಾರ್ಯಗಳಿಗೆ ಆದ್ಯತೆ ನೀಡಿ
ಏಕಕಾಲದಲ್ಲಿ ಅನೇಕ ಅನೇಕ ಕೆಲಸ ಮಾಡೋದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಪ್ರಾಮುಖ್ಯತೆ ಮತ್ತು ಡೆಡ್ ಲೈನ್ ಇರುವ ಕಾರ್ಯಗಳಿಗೆ ಆದ್ಯತೆ ನೀಡಿ, ಮತ್ತು ಅವುಗಳನ್ನು ಸಣ್ಣ, ನಿರ್ವಹಿಸಬಹುದಾದ ಹಂತಗಳಾಗಿ ವಿಭಜಿಸಿ. ನಂತರ ನಿಮ್ಮ ಕೆಲಸಗಳನ್ನು ಹೇಗೆ ಮಾಡಿ ಮುಗಿಸಬಹುದು ಅನ್ನೋದನ್ನು ನೀವು ಲಿಸ್ಟ್ ಮಾಡಿ, ಅದೇ ಪ್ರಕಾರ ಕೆಲಸ ಮಾಡಿದ್ರೆ, ಖಂಡಿತವಾಗಿಯೂ ನಿಮ್ಮ ಕೆಲಸಗಳು ಯಾವುದೇ ಒತ್ತಡ ಇಲ್ಲದೇ ಮುಗಿಯುತ್ತೆ.
ಸಹೋದ್ಯೋಗಿಗಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸಿ
ಕೆಲಸದ ಸ್ಥಳದಲ್ಲಿ ನಿಮಗೆ ಸಹಾಯ ಮಾಡುವವರು ಸಿಕ್ಕಿದ್ರೆ, ಕೆಲಸ ಒತ್ತಡವಿಲ್ಲದೇ ಸಾಗುತ್ತೆ. ಹಾಗಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಸಮಯ ತೆಗೆದುಕೊಳ್ಳಿ. ನಿಮ್ಮ ಸಹೋದ್ಯೋಗಿ ಜೊತೆ ಉತ್ತಮ ಭಾಂದವ್ಯ ಹೊಂದಿದ್ರೆ, ಜೊತೆಯಾಗಿ ಮಾತನಾಡಲು, ತಮಾಷೆ ಮಾಡಲು, ಔಟಿಂಗ್ ಹೋಗಲು ಎಲ್ಲಾದಕ್ಕೂ ಇದು ಸಹಾಯ ಮಾಡುತ್ತೆ.