ನೀವು ಕೂಡ ರೀಲ್ಸ್ ಗೆ ಅಡಿಕ್ಟ್ ಆಗಿದ್ದೀರಾ? ಈ ರೀತಿಯಾಗಿ ಸಮಸ್ಯೆ ನಿವಾರಿಸಿ…

First Published | Feb 27, 2024, 3:05 PM IST

ನೀವೂ ಸಹ ರೀಲ್ ಗಳನ್ನು ನೋಡೋದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದೀರಾ? ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಈ ಸಮಸ್ಯೆಯನ್ನು ನಿವಾರಿಸಿ. ಇಲ್ಲಾಂದ್ರೆ ನಿಮ್ಮ ಜೀವನವೇ ವ್ಯರ್ಥವಾಗುತ್ತೆ. 
 

ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾಕ್ಕೆ (social media) ಸಿಕ್ಕಾಪಟ್ಟೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಅದರಲ್ಲೂ ರೀಲ್ಸ್ ನೋಡುತ್ತಾ, ದಿನಪೂರ್ತಿ ಕಳೆಯೋದಕ್ಕೂ ಹೇಸೋದಿಲ್ಲ ಜನ. ಹೀಗೆ ರೀಲ್ಸ್ ನೋಡುತ್ತಾ, ತಮ್ಮ ಅತ್ಯಮೂಲ್ಯ ಸಮಯದ ಜೊತೆಗೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಈ ಸಮಸ್ಯೆಯನ್ನು ನಿವಾರಿಸೋದು ಹೇಗೆ ನೋಡೋಣ. 
 

ಜಾಗರೂಕರಾಗಿರಿ
ನೀವು ಸಮಯಕ್ಕೆ ಸರಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಸ್ಕ್ರಾಲ್ (scroling reels) ಮಾಡುವ ಅಭ್ಯಾಸವನ್ನು ಸುಧಾರಿಸದಿದ್ದರೆ, ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಸಮಯವೂ ವ್ಯರ್ಥವಾಗುವುದು. 

Tap to resize

ಅಪ್ಲಿಕೇಶನ್ ಲಾಕ್ ಮಾಡಿ
ನೀವು ರೀಲ್ಸ್ ನೋಡುವ ಯಾವುದೇ ಅಪ್ಲಿಕೇಶನ್‌ನಲ್ಲಿ (application), ಆ ಅಪ್ಲಿಕೇಶನ್ ಅನ್ನು ಲಾಕ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆ ಮಾಡುವುದರಿಂದ ನಿಮಗೆ ಕಡಿಮೆ ರೀಲ್ಸ್ ಸ್ಕ್ರಾಲ್ ಮಾಡಲು ಅನುವು ಮಾಡಿಕೊಡುತ್ತದೆ.

ಟೈಮರ್ ಸೆಟ್ ಮಾಡಿ 
ಟೈಮರ್ ಹೊಂದಿಸುವ ಮೂಲಕ ರೀಲ್ಸ್ ಸ್ಕ್ರಾಲ್ ಮಾಡಲು ಪ್ರಾರಂಭಿಸಿ. ಇದರಿಂದ ಇಂತಿಷ್ಟು ಸಮಯ ಆಗೋವಾಗ ಮೊಬೈಲ್ ಸ್ಕ್ರೀನ್ ಆಫ್ ಆಗುತ್ತೆ. ಈ ವಿಧಾನದ ಸಹಾಯದಿಂದ, ನಿಮ್ಮ ವ್ಯಸನವನ್ನು ನಿಧಾನವಾಗಿ ಕಡಿಮೆ ಮಾಡಬಹು

ರೀಲ್ಸ್ ಬಿಟ್ಟು ಇದನ್ನ ಆರಂಭಿಸಿ
ಟೈಮ್ ಪಾಸ್ ಮಾಡಲು ರಿಲಾಕ್ಸ್ ಆಗಲು ನೀವು ರೀಲ್ಸ್ ನೋಡುತ್ತಿದ್ದರೆ, ಇನ್ನು ಮುಂದೆ ನೀವು ಆ ಸಮಯದಲ್ಲಿ ವಾಕಿಂಗ್ ಅಥವಾ ಪುಸ್ತಕ ಓದುವಿಕೆಯನ್ನು (reeding books) ನಿಮ್ಮ ದಿನಚರಿಯ ಒಂದು ಭಾಗವನ್ನಾಗಿ ಮಾಡಬಹುದು. 

ಕಾಲ್ ಮಾಡಿ ಮಾತನಾಡಿ
ರೀಲ್ಸ್ ನೋಡುವ ಅಭ್ಯಾಸ ಸುಧಾರಿಸಲು, ನೀವು ದೀರ್ಘಾವಧಿಯ ವಿಷಯದ ಮೇಲೆ ಗಮನ ಹರಿಸಬೇಕು. ಅಥವಾ ಈ ವ್ಯಸನವನ್ನು ತೊಡೆದು ಹಾಕಲು, ನೀವು ಮೊಬೈಲ್‌ನಲ್ಲಿ ಟೆಕ್ಸ್ಟ್ ಮಾಡುವ ಬದಲು ಕಾಲ್ ಮಾಡಿ ಮಾತನಾಡಿ. 

ಸಮಯದ ಮಿತಿ
ಫೋನ್ ಬಳಸಲು ಸಮಯ ಮಿತಿ ನಿಗದಿಪಡಿಸಿ ಮತ್ತು ಸಕಾರಾತ್ಮಕ ಪರಿಣಾಮವನ್ನು ನೀವೇ ನೋಡಿ. ನೀವು ಒಂದು ತಿಂಗಳಾದ್ಯಂತ ಈ ಸಲಹೆ ಅನುಸರಿಸುವ ಮೂಲಕ ರೀಲ್ ಗಳನ್ನು(reel addiction) ನೋಡುವ ಚಟಕ್ಕೆ ಗುಡ್ ಬೈ ಹೇಳಿ.

ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ
ರೀಲ್ಸ್ ಸ್ಕ್ರಾಲ್ ಮಾಡುವ ಅಭ್ಯಾಸ ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ (mental health) ಹಾನಿಕಾರಕ. ಹಾಗಾಗಿ ನೀವು ಇಲ್ಲಿ ತಿಳಿಸಿದ ನಿಯಮಗಳನ್ನು ಪಾಲಿಸುವ ಮೂಲಕ ಸಮಸ್ಯೆಗೆ ಗುಡ್ ಬೈ ಹೇಳಿ. 

Latest Videos

click me!