ದೇಹವನ್ನು ಸಂಪೂರ್ಣವಾಗಿ ಸದೃಢಗೊಳಿಸಲು ದೈಹಿಕ ಜೊತೆಗೆ ಮಾನಸಿಕ ಆರೋಗ್ಯವೂ (mental health) ಬಹಳ ಮುಖ್ಯ. ಏಕೆಂದರೆ, ಯಾವುದೇ ಕೆಲಸವನ್ನು ಮಾಡಲು ದೇಹದಷ್ಟೇ ಮುಖ್ಯ ಮನಸ್ಸು. ಮೆದುಳು ಸ್ನಾಯುಗಳಿಗೆ ಸಂಕೇತಗಳನ್ನು ಕಳುಹಿಸಿದಾಗ ಮಾತ್ರ ಸ್ನಾಯುಗಳು ಕೆಲಸ ಮಾಡುತ್ತದೆ. ಆದರೆ ಒತ್ತಡ ಮತ್ತು ಗಡಿಬಿಡಿಯ ಜೀವನಶೈಲಿ ಮೆದುಳಿನ ಸಾಮರ್ಥ್ಯದಲ್ಲಿ ಇಳಿಕೆಗೆ ಕಾರಣವಾಗುತ್ತದೆ.