BP & Heart Attack: ಬಿಪಿ ಎಷ್ಟು ಹೆಚ್ಚಾದ್ರೆ ಹೃದಯಾಘಾತ ಆಗೋ ಸಾಧ್ಯತೆ ಇದೆ?

Published : May 31, 2025, 05:57 PM IST

ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತ ಸಂಭವಿಸಬಹುದು ಅನ್ನೋದು ನಿಮಗೆ ಗೊತ್ತೇ ಇದೆ. ಆದರೆ ರಕ್ತದೊತ್ತಡ ಎಷ್ಟು ಹೆಚ್ಚಳವಾದರೆ ಹೃದಯಾಘಾತ ಉಂಟಾಗುತ್ತದೆ ಅನ್ನೋದು ನಿಮಗೆ ಗೊತ್ತೇ?

PREV
17

ಆಹಾರ ಕ್ರಮದ ಸರಿಯಾಗಿರದೇ ಇದ್ದರೆ, ಮತ್ತು ಕಳಪೆ ಜೀವನಶೈಲಿಯಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಂತೂ ಜನರು ಹೃದಯಾಘಾತಕ್ಕೆ (heart attack) ಗುರಿಯಾಗುತ್ತಿದ್ದಾರೆ.

27

ಅಧಿಕ ರಕ್ತದೊತ್ತಡದಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು (health issues) ಕಾಡೋದಕ್ಕೆ ಶುರುವಾಗುತ್ತೆ. ಇತರ ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ವೇಗವಾಗಿ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡವೇ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ.

37

ರಕ್ತದೊತ್ತಡವು (blood pressure) ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಿಮಗೆ ಗೊತ್ತೆ ಇದೆ. ಆದರೆ ರಕ್ತದೊತ್ತಡ ಎಷ್ಟು ಹೆಚ್ಚಾದರೆ ಅದರಿಂದ ಹೃದಯಾಘಾತ ಬರುತ್ತೆ ಅನ್ನೋದು ಗೊತ್ತಾ? ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

47

ಆರೋಗ್ಯ ತಜ್ಞರ ಪ್ರಕಾರ, ಹೆಚ್ಚಿನ ರೋಗಿಗಳು ಅಧಿಕ ರಕ್ತದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಾರೆ. ರಕ್ತದೊತ್ತಡ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ, ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

57

ತಜ್ಞರ ಪ್ರಕಾರ, ರಕ್ತದೊತ್ತಡದ ವ್ಯಾಪ್ತಿಯು 140/90 mmHg ಗಿಂತ ಹೆಚ್ಚಾದರೆ, ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಇಲ್ಲವಾದರೆ ನಿಮಗೂ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ.

67

ನೀವು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಉತ್ತಮ. ಆಗಾಗ ನಿಮ್ಮ ಆರೋಗ್ಯ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ರಕ್ತದೊತ್ತಡ ಹೆಚ್ಚಾದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನೀವು ಅದನ್ನು ಕಡೆಗಣಿಸಿದ್ರೆ ಜೀವ ಹೋಗುವ ಚಾನ್ಸ್ ಇದೆ.

77

ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಿಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿಯ (lifestyle) ಕಡೆಗೆ ಗಮನ ಹರಿಸಿ. ಆರೋಗ್ಯಯುತ ಆಹಾರ ಸೇವಿಸಿ, ವರ್ಕೌಟ್ ಮಾಡಿ, ಒತ್ತಡ ರಹಿತ ಜೀವನ ನಡೆಸಿ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ.

Read more Photos on
click me!

Recommended Stories