ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಆರೋಗ್ಯವಾಗಿಡಲು (Mentally Healthy) ಮನರಂಜನೆಯು ತುಂಬಾನೆ ಮುಖ್ಯ ನಿಜಾ. ಆದರೆ ಇದು ನಿಗದಿತ ಸಮಯವನ್ನು ಸಹ ಹೊಂದಿರಬೇಕು, ಇದರಿಂದ ಅದು ನಿಮ್ಮ ಇತರ ಚಟುವಟಿಕೆಗಳು ಮತ್ತು ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಆದರೆ ಒಟಿಟಿ ಪ್ಲಾಟ್ಫಾರ್ಮ್ (OTT Platform) ಮನರಂಜನೆಯ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಹಿಂದೆ, ಜನರು ಚಲನಚಿತ್ರಗಳನ್ನು ನೋಡಲು ಮನೆಯಿಂದ ಹೊರಗೆ ಹೋಗುತ್ತಿದ್ದರು, ಈಗ ಮನೆಯ ನಾಲ್ಕು ಗೋಡೆಗಳಲ್ಲಿ ಎಲ್ಲಾ ರೀತಿಯ ಮನರಂಜನೆ ನಿಮಗಾಗಿ ಲಭ್ಯವಿದೆ. ಹೀಗಿರೋವಾಗ, ಜನ ಯೋಚಿಸದೆ ಹೆಚ್ಚು ಹೆಚ್ಚು ಸಮಯ ಸ್ಕ್ರೀನ್ ಮುಂದೆ ಅದೆಷ್ಟೋ ಸೀರೀಸ್, ಸಿನಿಮಾಗಳನ್ನು ನೋಡುತ್ತಾ ಕಳೆಯುತ್ತಾರೆ.