ಬುದ್ಧ ಬೌಲ್ ಎಂದರೇನು? ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

First Published Feb 22, 2021, 1:46 PM IST

ಬುದ್ಧ ಬೌಲ್ ಬಗ್ಗೆ ಏನಾದರೂ ಮಾಹಿತಿ ಗೊತ್ತಿದೆಯೇ ನಿಮಗೆ? ಇದು ಸಂಪೂರ್ಣವಾಗಿ ಸಸ್ಯಾಹಾರ. ಅಕ್ಕಿ ತರಕಾರಿ ಸಸ್ಯದ ಪ್ರೋಟೀನುಗಳನ್ನು ಸೇವಿಸಲಾಗುತ್ತದೆ. ಈ ಬೌಲ್ ನಲ್ಲಿ ಸಂಪೂರ್ಣ ಧಾನ್ಯ ಅವರೆಕಾಳು ಮೊಳಕೆಕಾಳು  ಇತ್ಯಾದಿಗಳನ್ನು ಸೇರಿಸಬಹುದು. ಬುದ್ಧ ಬೌಲ್ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಮುಂದೆ ಓದಿ... 

ಕೊರೋನಾ ಅವಧಿಯಲ್ಲಿ ಆರೋಗ್ಯವಾಗಿರುವುದು ದೊಡ್ಡ ಸವಾಲು. ಸಮತೋಲಿತ ಆಹಾರ ಮತ್ತು ಸರಿಯಾದ ದಿನಚರಿಯನ್ನು ಹೊಂದಿಕೊಳ್ಳುವ ಅನಿವಾರ್ಯತೆ ಇದೆ. ತಜ್ಞರು ಹೇಳುವಂತೆ, ದಿನಚರಿಯಲ್ಲಿ ಬದಲಾವಣೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮೈಗ್ರೇನ್ ಥೈರಾಯಿಡ್, ಹೃದಯ ಸಂಬಂಧಿ ಕಾಯಿಲೆಗಳು ಸೇರಿವೆ.
undefined
ಬೊಜ್ಜು ಮತ್ತು ಮಧುಮೇಹ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕಾಗಿ ಜನರು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತಾರೆ. ಕರೋನಾ ಅವಧಿಯಲ್ಲಿ ಆರೋಗ್ಯವಾಗಿರಬೇಕು ಎಂದು ಬಯಸಿದರೆ ಬುದ್ಧ ಬೌಲ್ ಟ್ರೈ ಮಾಡಬಹುದು. ಈ ಕೆಳಗಿನ ಆಹಾರ ಕ್ರಮವು ಯಾವಾಗಲೂ ಆರೋಗ್ಯಕರವಾಗಿರುತ್ತದೆ. ಬುದ್ಧ ಬೌಲ್ ಎಂದರೇನು ಮತ್ತು ಅದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.
undefined
ಏನಿದು ಬುದ್ಧ ಬೌಲ್ಇದು ಸಂಪೂರ್ಣವಾಗಿ ಸಸ್ಯಾಹಾರ. ಅಕ್ಕಿ, ತರಕಾರಿ, ಸಸ್ಯದ ಪ್ರೋಟೀನುಗಳನ್ನು ಸೇವಿಸಲಾಗುತ್ತದೆ. ಈ ಬೌಲ್‌ನಲ್ಲಿ ಸಂಪೂರ್ಣ ಧಾನ್ಯಗಳು, ಅವರೆಕಾಳುಗಳು, ಮೊಳಕೆಕಾಳುಗಳು ಇತ್ಯಾದಿಗಳನ್ನು ಸೇರಿಸಬಹುದು.ಇತರೆ ತರಕಾರಿಗಳನ್ನು ಸೇರಿಸಬಹುದು.
undefined
ಬುದ್ಧ ಬೌಲ್ ಸಾಮಗ್ರಿ-ತರಕಾರಿಗಳಲ್ಲಿ ಕ್ಯಾರೆಟ್, ಬ್ರೊಕೋಲಿ, ಹೂಕೋಸು, ಸೌತೆಕಾಯಿ, ಟೊಮೆಟೊ ಮತ್ತು ಮೂಲಂಗಿಯ ಅಗತ್ಯವಿದೆ.-ಪ್ರೋಟೀನ್‌ಗಳಿಗೆ ಟೋಫು, ಚೀಸ್, ಬಟಾಣಿ, ಓಟ್ ಮೀಲ್ ಬೇಕು.
undefined
-ಕಾರ್ಬೋಹೈಡ್ರೇಟ್‌ಗಳಿಗೆ ಸಿಹಿ ಗೆಣಸು, ಬಾರ್ಲಿ, ಬ್ರೌನ್ ರೈಸ್ ಬೇಕು.-ಸಕ್ಕರೆಯಲ್ಲಿ ಸೇಬು, ಸ್ಟ್ರಾಬೆರಿ, ಪಪ್ಪಾಯ, ಮಾವು, ರಾಸ್ಪ್ ಬೆರ್ರಿ ಗಳು ಇರಬೇಕು.
undefined
-ಈ ವಿಧಾನಕ್ಕೆ ಸೌತೆಕಾಯಿ, ಕೆಂಪು ಮೆಣಸಿನಕಾಯಿ, ಎಳ್ಳು, ಚಿಯಾ ಬೀಜ ಮತ್ತು ಬೀಜಗಳು ಬೇಕು.-ಡ್ರೆಸ್ಸಿಂಗ್‌ಗೆ ಪೀಟ್ಸ್ ಸಾಸ್, ತುಳಸಿ ಮತ್ತು ಪುದಿನಾ ಎಲೆಗಳು ಬೇಕು.
undefined
ಬುದ್ಧ ಬೌಲ್ ಪ್ರಯೋಜನಗಳು-ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು, ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ.-ಬುದ್ಧ ಬೌಲ್ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
undefined
-ಇದು ಸಂಪೂರ್ಣವಾಗಿ ಹೈಡ್ರೇಟ್ ಆಹಾರ. ಇದು ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.-ಇದರ ಸೇವನೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
undefined
-ಇದರಲ್ಲಿ ವಯಸ್ಸಾಗುವಿಕೆ ವಿರೋಧಿ ಗುಣಗಳು ಇವೆ.-ಕರೋನ ಅವಧಿಯಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಬುದ್ಧ ಬೌಲ್ ಅನ್ನು ಬಳಸಬಹುದು.-ಇದು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
undefined
click me!