ಜೀರಿಗೆಯ ಈ ಐದೂ ಅಡ್ಡ ಪರಿಣಾಮಗಳ ಬಗ್ಗೆ ಗೊತ್ತು ಮಾಡಿಕೊಳ್ಳಿ

First Published Dec 22, 2020, 3:26 PM IST

ಜೀರಿಗೆಯನ್ನು ಭಾರತೀಯ ಆಹಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅನೇಕ ಭಕ್ಷ್ಯಗಳಲ್ಲಿ ಜೀರಿಗೆ, ಅದರಲ್ಲೂ ವಿಶೇಷವಾಗಿ ಮೆಡಿಟರೇನಿಯನ್ ಮತ್ತು ನೈಋತ್ಯ ಏಷ್ಯದ ಸ್ಥಳೀಯ ಪ್ರದೇಶಗಳ ಆಹಾರಗಳಲ್ಲಿ  ಇದನ್ನು ಬಳಸಲಾಗುತ್ತದೆ. ಜೀರಿಗೆಯು ತನ್ನ ವಿಶಿಷ್ಟ ರುಚಿಯನ್ನು ಚಿಲ್ಲಿ (ಮೆಕ್ಸಿಕೋ/ದಕ್ಷಿಣ ಟೆಕ್ಸಾಸ್ ನಲ್ಲಿ ಮಸಾಲೆಯುಕ್ತ ಮಾಂಸವನ್ನು ಬೇಯಿಸುವಾಗ), ತಮಾಲೇಸ್ (ಒಂದು ಮೆಸೋಅಮೆರಿಕನ್ ಭಕ್ಷ್ಯ) ಮತ್ತು ವಿವಿಧ ಭಾರತೀಯ ಕರಿಗಳನ್ನು ಬಳಸಲಾಗುತ್ತದೆ.  ಇದರ ಸ್ವಾದವು ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ. 

ಭಾರತದಲ್ಲಿ ಜೀರಿಗೆಯನ್ನು ಒಗ್ಗರಣೆ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಜ್ಜಿಗೆ, ಸಲಾಡ್, ಪಲ್ಯಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿಪರಿಮಳವನ್ನು ಬಿಡುಗಡೆ ಮಾಡುವವರೆಗೆ ಹುರಿಯುತ್ತಾರೆ. ಜೀರಿಗೆಯನ್ನು ಅರೋಗ್ಯ ವೃದ್ಧಿಯಲ್ಲಿ ಸಹ ವ್ಯಾಪಕವಾಗಿ ಬಳಸಲಾಗಿದ್ದರೂ, ಅದರ ಕೆಲವು ಸಂಭಾವ್ಯ ಅಡ್ಡ ಪರಿಣಾಮಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ.
undefined
ಎದೆಯುರಿ: ಜೀರಿಗೆಯಲ್ಲಿ ಗ್ಯಾಸ್ ರಿಲೀವಿಂಗ್ ಗುಣಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಇವು ಎದೆಯುರಿಯನ್ನು ಉಂಟುಮಾಡಬಹುದು, ಇದು ಅತ್ಯಂತ ಸಾಮಾನ್ಯವಾದ ಜೀರ್ಣಕಾರಿ ಸಮಸ್ಯೆಯಾಗಿದೆ.
undefined
ಜೀರಿಗೆ ಕಾಳುಗಳು ಹೆಚ್ಚು ಗ್ಯಾಸ್ ಅನ್ನು ಜಠರಗರುಳಿನ ನಾಳದಿಂದ ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಇದು ಎದೆಯುರಿಗೆ ಕಾರಣವಾಗುತ್ತದೆ.
undefined
ಯಕೃತ್ತಿನ ಹಾನಿ: ಜೀರಿಗೆಯಲ್ಲಿರುವ ಎಣ್ಣೆಯು ಹೆಚ್ಚು ಅಸ್ಥಿರವಾಗಿದ್ದು, ಇದು ಯಕೃತ್ ಅಥವಾ ಮೂತ್ರಪಿಂಡಕ್ಕೆ ಹಾನಿ ಉಂಟು ಮಾಡಬಹುದು. ಇದಕ್ಕೆ ಮುಖ್ಯವಾಗಿ ಬೀಜಗಳ ಹೆಚ್ಚಿನ ಪ್ರಮಾಣ ಸೇವನೆಯೇ ಕಾರಣ. ಆದ್ದರಿಂದ ಮಿತ ಪ್ರಮಾಣದಲ್ಲಿ ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ.
undefined
ಬೆಲ್ಚಿಂಗ್ : ಜೀರಿಗೆ ಯ ಬೀಜದ ಪರಿಣಾಮವು ಜಠರಗರುಳಿನಲ್ಲಿ ಗ್ಯಾಸ್ ಉತ್ಪತ್ತಿಯನ್ನು ತಡೆಗಟ್ಟಲು ಅಥವಾ ಹೆಚ್ಚಿನ ಗ್ಯಾಸ್ ಹೊರಹಾಕಲು ಅನುಕೂಲಮಾಡಿಕೊಡುವ ಉದ್ದೇಶವನ್ನು ಹೊಂದಿರುವ ಮೂಲಿಕೆ. ಇದು ಅತಿಯಾದ ಬೆಲ್ಚಿಂಗ್ ಗೆ ಕಾರಣವಾಗಬಹುದು.
undefined
ಹೊಟ್ಟೆ ಮತ್ತು ಕರುಳುಗಳಲ್ಲಿ ಹೆಚ್ಚುವರಿ ಉಬ್ಬರ ಮತ್ತು ಗ್ಯಾಸ್ ಅನ್ನು ಒಳಗೊಂಡಿದ್ದರೆ, ಹೊಟ್ಟೆಯಲ್ಲಿರುವುದನ್ನು ಬಾಯಿಯ ಮೂಲಕ ಹೊರಹಾಕುವುದನ್ನು ಬೆಲ್ಚಿಂಗ್ ಎಂದು ವ್ಯಾಖ್ಯಾನಿಸಬಹುದು. ಕೆಲವೊಮ್ಮೆ, ಬೆಲ್ಚಿಂಗ್ ಕೆಟ್ಟ ವಾಸನೆ ಮತ್ತು ವಿಶಿಷ್ಟ ಶಬ್ದವನ್ನು ಹೊಂದಿರಬಹುದು.
undefined
ಮಾದಕ ದ್ರವ್ಯ ಪರಿಣಾಮ : ಜೀರಿಗೆಯಲ್ಲಿ ಮಾದಕ ದ್ರವ್ಯದ ಗುಣಗಳಿವೆ, ಆದ್ದರಿಂದ ಅವುಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು. ಜೀರಿಗೆಯ ಅಡ್ಡ ಪರಿಣಾಮಗಳೆಂದರೆ, ಮಾನಸಿಕವಾಗಿ ಮೂಡಿ, ಜಡತ್ವ ಮತ್ತು ವಾಕರಿಕೆ ಮೊದಲಾದ ಸಮಸ್ಯೆಗಳು ಅತಿಯಾಗಿ ಸೇವಿಸುವುದರಿಂದ ಉಂಟಾಗಬಹುದು.
undefined
ರಕ್ತದಲ್ಲಿನ ಸಕ್ಕರೆ ಮಟ್ಟಕಡಿಮೆ : ಹೆಚ್ಚಿನ ಪ್ರಮಾಣದಲ್ಲಿ ಜೀರಿಗೆ ಯನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಲು ಯೋಜಿಸಿದರೆ, ಇದು ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಅಗತ್ಯವಾಗಿರುತ್ತದೆ.
undefined
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ಶಸ್ತ್ರಚಿಕಿತ್ಸೆಯ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಶಸ್ತ್ರಚಿಕಿತ್ಸೆಯ ಕನಿಷ್ಠ 2 ವಾರಗಳ ಮೊದಲು ಜೀರಿಗೆ ಸೇವಿಸುವುದನ್ನು ನಿಲ್ಲಿಸಲು ವೈದ್ಯರು ಸಲಹೆ ನೀಡಬಹುದು.
undefined
click me!