ಈ ಮನೆಮದ್ದುಗಳಿಂದ ಡಾರ್ಕ್ ಸರ್ಕಲ್‌ಗೆ ಬಾಯ್‌ ಬಾಯ್‌ ಹೇಳಿ!

First Published Sep 10, 2020, 4:59 PM IST

ಕಣ್ಣಿನ ಕೆಳಗಿನ ಡಾರ್ಕ್‌ ಸರ್ಕಲ್‌ ಇಡೀ ಮುಖದ ಅಂದವನ್ನು ಹಾಳುಮಾಡುತ್ತದೆ. ಈ ಡಾರ್ಕ್‌ ಸರ್ಕಲ್‌ನಿಂದ ಮುಕ್ತಿ ಪಡೆಯಲು ಅಡುಗೆಮನೆಯಲ್ಲೇ ಇದೆ ಪರಿಹಾರಗಳು. ಮನೆಮದ್ದುನಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌.

ಮುಖದಲ್ಲಿ ಎದ್ದುಕಾಣುವ ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್‌ ಅಂದವನ್ನು ಹಾಳು ಮಾಡುವುದರ ಜೊತೆ ಪೆಷೇಂಟ್‌ ಲುಕ್‌ ನೀಡುತ್ತದೆ.
undefined
ಡಾರ್ಕ್ ಸರ್ಕಲ್‌ಗಳಿಗೆ ಕಾರಣಗಳು ಆನುವಂಶಿಕತೆಯ ಜೊತೆ ನಿದ್ರೆಯ ಕೊರತೆಯೂ ಹೌದು.
undefined
ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ನಿವಾರಿಸಲು ಕೆಲವು ಸರಳ ಮನೆಮದ್ದುಗಳು ಇಲ್ಲಿವೆ.
undefined
ಬಾದಾಮಿ ಎಣ್ಣೆ: ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯನ್ನು ಡಾರ್ಕ್ ಸರ್ಕಲ್‌ಗಳಿಗೆ ಬೆಸ್ಟ್‌. ಮಲಗುವ ಮೊದಲು ಸ್ವಲ್ಪ ಬಾದಾಮಿ ಎಣ್ಣೆಯನ್ನು ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ. ಮರುದಿನ ತಣ್ಣೀರಿನಿಂದ ತೊಳೆಯಿರಿ.
undefined
ಜೇನುತುಪ್ಪ:ಆಂಟಿಆಕ್ಸಿಡೆಂಟ್ ಭರಿತ ಜೇನುತುಪ್ಪವು ಡಾರ್ಕ್ ವಲಯಗಳನ್ನು ತೊಡೆದುಹಾಕಲು ಉತ್ತಮವಾಗಿದೆ . ಜೇನುತುಪ್ಪವನ್ನು ತೆಳುವಾಗಿ ಲೇಪಿಸಿ 10-15 ನಿಮಿಷಗಳ ಕಾಲದ ನಂತರ ತೊಳೆಯಿರಿ.
undefined
ಕೊಬ್ಬರಿ ಎಣ್ಣೆ: ದಕ್ಷಿಣ ಭಾರತದ ಎಲ್ಲಾ ಅಡಿಗೆಮನೆಗಳಲ್ಲಿರುವ ಕೊಬ್ಬರಿ ಎಣ್ಣೆ ತುಂಬಾ ಉಪಯೋಗಗಳನ್ನು ಹೊಂದಿದೆ. ವರ್ಜಿನ್ ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿದರೆ ಕಪ್ಪು ಕಲೆ ಕಡಿಮೆಯಾಗುವುದನ್ನು ನೋಡಬಹುದು.
undefined
ಅರಿಶಿನ: ಕರ್ಕ್ಯುಮಿನ್ ಅಂಶ ಹೊಂದಿರುವ ಅರಿಶಿನ ದಣಿದ ಕಣ್ಣುಗಳು ರಿಲಾಕ್ಸ್‌ ಆಗಲು ಹಾಗೂ ಡಾರ್ಕ್ ಸರ್ಕಲ್‌ ಲೈಟ್‌ ಆಗಲು ತುಂಬಾ ಉಪಯುಕ್ತವಾಗಿದೆ.
undefined
ಅರಿಶಿನವನ್ನು ಬಳಸುವುದರಲ್ಲಿ ಹಲವು ವಿಧಾನಗಳಿವೆ. ಅನಾನಸ್ ಜ್ಯೂಸ್, ನಿಂಬೆ ರಸ, ಪುದೀನಾ ಅಥವಾ ಮೊಸರು ಜೊತೆ ಬಳಸಬಹುದು. ಸ್ವಲ್ಪ ಕಡಲೆ ಹಿಟ್ಟು , ಸ್ವಲ್ಪ ಅರಿಶಿನ, ನಿಮ್ಮ ಆಯ್ಕೆಯ ರಸವನ್ನು ಸೇರಿಸಿ ಕಣ್ಣಿನ ಸುತ್ತ ಹಚ್ಚಿಕೊಂಡು ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ.
undefined
ವ್ಯಾಸಲೀನ್: ವ್ಯಾಸಲೀನ್ ಸಹ ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಬಳಸಬಹುದು. ವ್ಯಾಸಲೀನ್‌ಗೆ ಒಂದು ಹನಿ ನಿಂಬೆ ರಸವನ್ನು ಸೇರಿಸಿ ಮತ್ತು ಕಣ್ಣಿನ ಕೆಳಗೆ ಆಪ್ಲೈ ಮಾಡಿ. ಸುಮಾರು 45 ನಿಮಿಷಗಳ ಕಾಲದನಂತರ ತಣ್ಣೀರಿನಿಂದ ತೊಳೆಯಿರಿ.
undefined
ಇವುಗಳ ಜೊತೆ ರಾತ್ರಿ 7-8 ಗಂಟೆಯ ನಿದ್ರೆ ಸಹ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಅಗತ್ಯ.
undefined
click me!