Health Resolutions 2022: ಆರೋಗ್ಯಕರವಾಗಿ ತೂಕ ಇಳಿಸಲು ಈ ದಿನಚರಿ ಪಾಲಿಸಿ

First Published | Jan 2, 2022, 3:15 PM IST

ಹೊಸ ವರ್ಷದ ರೆಸಲ್ಯೂಶನ್‌ನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮೊದಲಿರುತ್ತದೆ. ಸರಿಯಾದ ದೇಹ ತೂಕ ನಿರ್ವಹಣೆ ಕೂಡಾ ಆರೋಗ್ಯ ಕಾಪಾಡುವಲ್ಲಿ ಸಹಕಾರಿ. ಹಾಗಿದ್ರೆ  ಆರೋಗ್ಯಕಾರಿಯಾಗಿ ಬೊಜ್ಜು ಇಳಿಸುವುದು ಹೇಗೆ ನಾವು ಹೇಳ್ತೀವಿ ಕೇಳಿ.

ಬಹುತೇಕ ಎಲ್ಲರೂ ಜನವರಿ 1ರಂದು ಒಂದಿಷ್ಟು ಗುರಿಗಳನ್ನು ತಮಗಾಗಿ ಹಾಕಿಕೊಳ್ಳುತ್ತಾರೆ. ಇಡೀ ವರ್ಷ ಈ ಗುರಿ ಸಾಧನೆಗಾಗಿ ಹಾದಿ ಸವೆಸಲು ತೀರ್ಮಾನಿಸುತ್ತಾರೆ. ಇದರಲ್ಲಿ ಬಹುತೇಕರು ತೂಕ ಕರಗಿಸಿ ಫಿಟ್ ಆಗುವ ರೆಸಲ್ಯೂಶನ್ ಮಾಡಿಕೊಂಡಿರುತ್ತಾರೆ.

ಆದರೆ ಹೊಸ ವರ್ಷಕ್ಕೆ ಕೈಗೊಂಡ ಈ ನಿರ್ಣಯವು ಒಂದು ವಾರವೂ ಕೆಲಸ ಮಾಡುವುದಿಲ್ಲ ಮತ್ತು ಸ್ವಲ್ಪ ದಿನಕ್ಕೇ ದಣಿದು ಬಿಡುತ್ತೀರಿ. ನೀವು ಫಿಟ್ನೆಸ್ (fitness) ಬಗ್ಗೆ ಗುರಿ ಹಾಕಿಕೊಂಡಿದ್ದರೆ ಈ ಹೊಸ ವರ್ಷದಲ್ಲಿ ಅದನ್ನು ಹೇಗೆ ಪೂರ್ಣಗೊಳಿಸಬಹುದು ಎಂದು ತಿಳಿಯಿರಿ ...

Tap to resize

ಗುರಿಯನ್ನು ನಿರ್ಧರಿಸಿ 

ಈಗ ನೀವು ನಿಮ್ಮ ಹೊಸ ವರ್ಷದ ನಿರ್ಣಯದಲ್ಲಿ ಫಿಟ್ನೆಸ್ ಅನ್ನು ಮುಂಚೂಣಿಯಲ್ಲಿಇರಿಸಿದ್ದೀರಿ. ಈ ವರ್ಷದ ಮೊದಲ 5 ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬೇಕು ಎಂಬುದಕ್ಕೊಂದು ಗುರಿ ಹಾಕಿಕೊಳ್ಳಿ. ಸಾಧಿಸಲು ಸಾಧ್ಯವಾಗದಂಥ ನಿರೀಕ್ಷೆಯ ಭಾರ ಹೊತ್ತುಕೊಳ್ಳಬೇಡಿ.

ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ

ತಾಲೀಮಿಗೆ ಉತ್ತಮ ಸಮಯವನ್ನು ಬೆಳಿಗ್ಗೆ ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 4  ರಿಂದ 5 ಗಂಟೆಯ  ನಡುವೆ ನಾವು ಎದ್ದೇಳಬೇಕು. ಸಮಯ ಸಾಲದೆಂಬ ಸಬೂಬು ಹೇಳುವವರು ನಿದ್ರೆಯ ಸಮಯದಲ್ಲೇ ಸಮಯ ಹೊಂದಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಕಸರತ್ತಿನ ಬಳಿಕ ನಮ್ಮ ದೇಹದಲ್ಲಿ ಎಂಡಾರ್ಫಿನ್ ಗಳನ್ನು (endorphin) ಬಿಡುಗಡೆಯಾಗುತ್ತದೆ. ಇದರಿಂದ ದಿನವಿಡೀ ತಾಜಾತನ ಅನುಭವಿಸಬಹುದು.

ನಿಧಾನವಾಗಿ ನಿಮ್ಮ ಗುರಿಯತ್ತ ಚಲಿಸಿ

ತೂಕ ಕಳೆದುಕೊಳ್ಳುವುದು ಅಥವಾ ಫಿಟ್ ಆಗುವುದು 1 ದಿನ ಅಥವಾ 1 ವಾರದ ಕೆಲಸವಲ್ಲ, ಅದನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ, ನಾವು ನಿಗದಿಪಡಿಸಿದ ಗುರಿಯನ್ನು ಕ್ರಮೇಣ ಸಾಧಿಸಬಹುದು. ಉದಾಹರಣೆಗೆ 1 ತಿಂಗಳಲ್ಲಿ 3 ರಿಂದ 4 ಕೆ.ಜಿ ತೂಕ ಕಳೆದುಕೊಳ್ಳಲು ಸಾಧ್ಯವಿದೆ. ಅದೇ 15 ದಿನಗಳಲ್ಲಿ 10 ಕಿಲೋಗಳನ್ನು ಕಳೆದುಕೊಳ್ಳಲು ಬಯಸಿದರೆ, ಅದು ತುಂಬಾ ಕಷ್ಟ ಮತ್ತು ಅದು ನಿಮ್ಮ ದೇಹವನ್ನು ಹಾನಿಗೊಳಿಸುತ್ತದೆ.

ಆಹಾರದ ಬಗ್ಗೆ ವಿಶೇಷ ಗಮನ ಇರಿಸಿ

ಫಿಟ್ನೆಸ್ ಎಂದರೆ ನೀವು ಜಿಮ್ ನಲ್ಲಿ ಗಂಟೆಗಳ ಕಾಲ ವ್ಯಾಯಾಮ ಮಾಡುವುದೊಂದೇ ಅಲ್ಲ,   ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಇದಕ್ಕಾಗಿ, ಸಿಹಿತಿಂಡಿಗಳು, ಜಂಕ್ ಫುಡ್ (junk food), ಎಣ್ಣೆಯುಕ್ತ ಆಹಾರ ಸೇವಿಸಬೇಡಿ. ನಿಮ್ಮ ದಿನಚರಿಯಲ್ಲಿ ಬೀಜಗಳು, ಓಟ್ಸ್, ಹಣ್ಣುಗಳು, ಹಾಲು-ಚೀಸ್, ಆರೋಗ್ಯಕರ ಮಾಂಸ, ಹಸಿರು ತರಕಾರಿಗಳಂತಹ ಆರೋಗ್ಯಕರ ವಸ್ತುಗಳನ್ನು ಸೇರಿಸಿ.

ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಿ

ಕೆಲವೊಮ್ಮೆ ನಾವು ತೂಕ  ಕಳೆದುಕೊಳ್ಳಲು (weight loss)ಬಯಸುತ್ತೇವೆ ಆದರೆ ನಾವು ಫಲಿತಾಂಶಗಳನ್ನು ತ್ವರಿತವಾಗಿ ನೋಡದಿದ್ದಾಗ, ಖಿನ್ನತೆಗೆ ಒಳಗಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಯಶಸ್ಸನ್ನು ಸಾಧಿಸುವುದು ಕಷ್ಟವಲ್ಲ ಎಂದು ನೀವು ನಿಮ್ಮನ್ನು ಪ್ರೇರೇಪಿಸಿ. ಇದಕ್ಕಾಗಿ ನೀವು ಕನ್ನಡಿಯ ಮುಂದೆ ನಿಂತು ನಿಮ್ಮನ್ನು ನೀವೇ ನೋಡಿ ಮತ್ತು ನೀವು ಏನು ಮಾಡಬೇಕೆಂದು ನಿಮ್ಮ ಗುರಿಯನ್ನು ನೆನಪಿಸಿ.  

ವಾರದಲ್ಲಿ 1 ದಿನ ಸರಿಯಾದ ವಿಶ್ರಾಂತಿ ಮಾಡಿ

ಫಿಟ್ನೆಸ್ ಸಾಧನೆ (fitness resolution)ಎಂದರೆ ದೇಹಕ್ಕೆ ವಿಶ್ರಾಂತಿಯೇ ಕೊಡದೆ ಇರುವುದಲ್ಲ.  ಸದೃಢವಾಗಿರಲು, ನಾವು ವಾರದಲ್ಲಿ ಒಂದು ಅಥವಾ ಎರಡು ದಿನ ವಿಶ್ರಾಂತಿ ಪಡೆಯಬೇಕಾಗುತ್ತದೆ, ಏಕೆಂದರೆ ಇದು ನಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಮ್ಮನ್ನು ಆಯಾಸಗೊಳಿಸುವುದಿಲ್ಲ.

8 ಗಂಟೆಗಳ ನಿದ್ರೆಯನ್ನು ಪಡೆಯಲು ಮರೆಯದಿರಿ

ಬೆಳಗ್ಗೆ ಬೇಗ ಎದ್ದು ವರ್ಕ್ ಔಟ್ ಆದಾಗ ರಾತ್ರಿ ಬೇಗ ನಿದ್ದೆ ಮಾಡಬೇಕು. ಇಲ್ಲದಿದ್ದರೆ, ನಿಮ್ಮ ನಿದ್ರೆ ಪೂರ್ಣವಾಗುವುದಿಲ್ಲ, ಅಥವಾ ನೀವು ಸರಿಯಾಗಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಾಗೆ ಕಡಿಮೆಯಾದ ನಿದ್ದೆಯನ್ನು ರಾತ್ರಿ ಬೇಗ ಮಲಗುವ ಅಭ್ಯಾಸದಿಂದ ಹೊಂದಿಸಬಹುದು. ರಾತ್ರಿ 7ರೊಳಗೆ ಊಟ ಮಾಡಿ. ರಾತ್ರಿ 9ರ ವೇಳೆಗೆ ಮಲಗಿ. ಇದರಿಂದ ನೀವು 8 ಗಂಟೆಗಳ ನಿದ್ರೆಯನ್ನು ಪಡೆಯಬಹುದು.

Latest Videos

click me!