ಪಾಯಸ ಮಾತ್ರವಲ್ಲ, ಗಸಗಸೆಯ ಎಲ್ಲ ಖಾದ್ಯವೂ ಆರೋಗ್ಯಕ್ಕೆ ಬೆಸ್ಟ್

First Published Jul 1, 2021, 9:20 AM IST

ನೀವು ಎಂದಾದರೂ ಗಸಗಸೆ ಬೀಜಗಳನ್ನು ತಿಂದಿದ್ದೀರಾ? ಇದರಿಂದ ಹಲವು ರೀತಿಯ ಖಾದ್ಯಗಳನ್ನು ಮನೆಗಳಲ್ಲಿ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಗಸಗಸೆ ಬೀಜಗಳು ಯಾವುದೇ ಖಾದ್ಯದ ರುಚಿಯನ್ನು ಹೆಚ್ಚಿಸಬಲ್ಲ ಆಹಾರವಾಗಿದೆ. ವಾಸ್ತವವಾಗಿ, ಗಸಗಸೆ ಬೀಜಗಳು  ಒಂದು ರೀತಿಯ ಎಣ್ಣೆಕಾಳುಗಳಾಗಿವೆ. ಗಸಗಸೆ ಬೀಜಗಳ ವೈಜ್ಞಾನಿಕ ಹೆಸರು ಪೆಪೆವರ್ ಸೋನ್ನಿಫೆರಾಮ್. ಇದನ್ನು ಬಹಳ ಹಿಂದಿನಿಂದಲೂ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಗಸಗಸೆ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

ಗಸಗಸೆ ಬೀಜದಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
undefined
ಗಸಗಸೆ ಬೀಜಗಳು ವಿಶೇಷವಾಗಿ ಮಲಬದ್ಧತೆಯಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಗಸಗಸೆ ಬೀಜಗಳ ದೈಹಿಕ ಪ್ರಯೋಜನಗಳ ಬಗ್ಗೆಇಲ್ಲಿದೆ ಮಾಹಿತಿ...
undefined
ಗಸಗಸೆ ಬೀಜಗಳ ಪ್ರಯೋಜನಗಳು:ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :ಗಸಗಸೆ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗಸಗಸೆ ಬೀಜಗಳಲ್ಲಿ ಇರುವ ಕಬ್ಬಿಣ, ವಿಟಮಿನ್ ಮತ್ತು ಸತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಕೆಲಸ ಮಾಡುತ್ತದೆ. ರೋಗ ನಿರೋಧಕ ವ್ಯವಸ್ಥೆಯ ಪ್ರಬಲತೆಯು ದೇಹವನ್ನು ವಿವಿಧ ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ.
undefined
ಶಕ್ತಿಯನ್ನು ಹೆಚ್ಚಿಸುತ್ತೆ :ಗಸಗಸೆ ಬೀಜಗಳಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್ ಗಳಿವೆ. ಇದು ದೇಹದಲ್ಲಿ ಕರಗುವ ಮೂಲಕ ಶಕ್ತಿಯನ್ನು ಒದಗಿಸುತ್ತದೆ. ಇದು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
undefined
ಬಾಯಿ ಹುಣ್ಣು ಸಮಸ್ಯೆ ದೂರ :ಬೇಸಿಗೆ ಕಾಲದಲ್ಲಿ ಅನೇಕರಿಗೆ ಬಾಯಿ ಹುಣ್ಣಿನ ಸಮಸ್ಯೆ ಕಂಡುಬರುವುದು. ಬಾಯಿ ಹುಣ್ಣು ನಿವಾರಿಸಲು ಗಸಗಸೆ ಬೀಜಗಳನ್ನು ಬಳಸಬಹುದು
undefined
ಗಸಗಸೆ ಬೀಜಗಳು ತಣ್ಣಗಿರುತ್ತವೆ, ಆದ್ದರಿಂದ ಇದು ಹೊಟ್ಟೆಯ ಶಾಖವನ್ನು ಶಮನಗೊಳಿಸಲು ಮತ್ತು ಬಾಯಿ ಹುಣ್ಣುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
undefined
ಮಲಬದ್ಧತೆ ನಿವಾರಣೆ :ಗಸಗಸೆ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳು ನಿವಾರಣೆವಾಗುತ್ತೆ.
undefined
ಬಲವಾದ ಮೂಳೆ :ಗಸಗಸೆ ಬೀಜಗಳನ್ನು ತಿನ್ನುವುದರಿಂದ ದುರ್ಬಲ ಮೂಳೆಗಳು ಬಲಗೊಳ್ಳುತ್ತವೆ. ಗಸಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ, ಸತು ಮತ್ತು ತಾಮ್ರದಂತಹ ಪೋಷಕಾಂಶಗಳು ಹೇರಳವಾಗಿವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
undefined
ಸ್ಮರಣೆ ಶಕ್ತಿ ಹೆಚ್ಚಿಸುತ್ತದೆ:ಗಸಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ತಾಮ್ರ ಸಮೃದ್ಧವಾಗಿದೆ. ಅವೆಲ್ಲವೂ ಮೆದುಳಿಗೆ ಅಗತ್ಯವೆಂದು ಪರಿಗಣಿಸಲಾಗಿದೆ. ಗಸಗಸೆ ಬೀಜಗಳ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
undefined
click me!