ಅಬ್ಬಬ್ಬಾ ಲವಂಗ ಎಣ್ಣೆಯಿಂದ ಇಷ್ಟೆಲ್ಲಾ ಲಾಭಗಳುಂಟಾ?

First Published Dec 10, 2020, 3:55 PM IST

ಒಳ್ಳೆಯದು ಸಣ್ಣ ಪ್ಯಾಕೇಜ್ ಗಳಲ್ಲಿ ಬರುತ್ತದೆ. ಲವಂಗದ ವಿಷಯಕ್ಕೆ ಬಂದಾಗ ಇದು ಖಂಡಿತವಾಗಿ ನಿಜ. ಈ ಆರೋಗ್ಯಕರ ಘಟಕಾಂಶವು ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧದ ಒಂದು ಭಾಗ. ಭಕ್ಷ್ಯಗಳ ಸ್ವಾದ, ಸುಹಾಸನೆ ಹೆಚ್ಚಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ, ಆದರೆ ಈ ಸಣ್ಣ ವಸ್ತುವಿಗೆ ಅಗಾಧವಾದ ಆರೋಗ್ಯಕರ ಲಾಭವಿದೆ. ಏಕೆಂದರೆ ಇದು ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ನಂಜುನಿರೋಧಕ, ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 
 

ಅರೋಮಾಥೆರಪಿಯಲ್ಲಿ ಲವಂಗ ಎಣ್ಣೆ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಬಳಸಲಾಗುವ ಪರಿಹಾರವಾಗಿದೆ. ನಿಮ್ಮ ಆಹಾರದಲ್ಲಿ ಲವಂಗ ಎಣ್ಣೆಯನ್ನು ಸೇರಿಸುವುದರ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಇದರಿಂದ ಹಲವಾರು ಲಾಭಗಳಿವೆ.
undefined
ಲವಂಗ ಎಣ್ಣೆಯಲ್ಲಿರುವ ಸೂಕ್ಷ್ಮಾಣುಜೀವಿ ಗುಣಲಕ್ಷಣಗಳು ಮತ್ತು ಯುಜೆನಾಲ್ ಹಲ್ಲಿನ ಕುಳಿಗಳನ್ನು ತಡೆಗಟ್ಟಲು ಮತ್ತು ಬಾಯಿಯ ನೋವನ್ನು ನಿವಾರಿಸಲು ಒಂದು ಪರಿಪೂರ್ಣ ಮನೆಮದ್ದು. ಇದು ಹಲ್ಲುನೋವು, ನೋಯುತ್ತಿರುವ ವಸಡುಗಳು ಮತ್ತು ಬಾಯಿ ಹುಣ್ಣುಗಳನ್ನು ನಿವಾರಿಸುತ್ತದೆ. ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಕೆಲವು ಹನಿ ಎಣ್ಣೆಯನ್ನು ಬೆರೆಸಿ ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎರಡು ಬಾರಿ ಕುಡಿಯಿರಿ.
undefined
ಈ ಎಣ್ಣೆಯಲ್ಲಿರುವ ಯುಜೆನಾಲ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಲವಂಗ ಎಣ್ಣೆಯಲ್ಲಿನ ಆಂಟಿ ಇಂಪ್ಲಾಮೇಟರಿ ಗುಣಲಕ್ಷಣಗಳು ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
undefined
ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಶೀತ ಮತ್ತು ಜ್ವರ ಮುಂತಾದ ಕಾಯಿಲೆಗಳು ಮತ್ತು ಸೋಂಕುಗಳನ್ನು ದೂರವಿಡಲು ಬಲವಾದ ರೋಗನಿರೋಧಕ ಶಕ್ತಿ ಸಹಾಯ ಮಾಡುತ್ತದೆ
undefined
ಲವಂಗ ಎಣ್ಣೆಯು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ ಮತ್ತು ಆಂಟಿ ಇನ್‌ಫ್ಲೇಮಟರಿಗುಣಗಳನ್ನು ಹೊಂದಿರುತ್ತದೆ ಅದು ಉರಿಯೂತವನ್ನು ಸರಾಗಗೊಳಿಸುತ್ತದೆ ಮತ್ತು ತಲೆನೋವಿನಿಂದ ತ್ವರಿತ ಪರಿಹಾರ ನೀಡುತ್ತದೆ. 4 ಹನಿ ಲವಂಗ ಎಣ್ಣೆಯನ್ನು ಉಪ್ಪಿನಲ್ಲಿ ಬೆರೆಸಿ ಹಣೆಯ ಮೇಲೆ ಹಚ್ಚಿ. ಇದು ತಲೆನೋವಿಗೆ ಉತ್ತಮ ಪರಿಹಾರ.
undefined
ಯಾವುದೇ ಜೀರ್ಣಕ್ರಿಯೆ ಸಮಸ್ಯೆಗಳನ್ನು ಎದುರಿಸುತ್ತಿರುವಿರಾ? ಸಾಂಪ್ರದಾಯಿಕವಾಗಿ, ಲವಂಗ ಎಣ್ಣೆಯನ್ನು ಹೊಟ್ಟೆ ನೋವಿನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಸರಾಗಗೊಳಿಸುವ ಮತ್ತು ಕೆಮ್ಮು ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಬಳಸಲಾಗುತ್ತದೆ. ಲವಂಗ ಎಣ್ಣೆಯನ್ನು ಉಗುರು ಬಿಸಿ ನೀರಿನೊಂದಿಗೆ ಬೆರೆಸಿ ಸೇವಿಸುವುದು ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
undefined
ವಾಕರಿಕೆ ವಾಂತಿ ಮೊದಲಾದ ಸಮಸ್ಯೆ ಇದೆಯೇ? ಇದು ಹೆಚ್ಚಾಗಿ ಆಸಿಡ್ ರಿಫ್ಲಕ್ಸ್ ಮತ್ತು ಅತಿಯಾಗಿ ತಿನ್ನುವುದರೊಂದಿಗೆ ಸಂಬಂಧ ಹೊಂದಿದೆ. ಲವಂಗ ಎಣ್ಣೆಯ ಬಲವಾದ ಸುವಾಸನೆಯು ವಾಕರಿಕೆ ಮತ್ತು ಮಾರ್ನಿಂಗ್ ಸಿಕ್ಕ್ನೆಸ್ಸ್ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದನ್ನು ದಿಂಬುಗಳ ಮೇಲೆ ಹಚ್ಚಿ ಅದರ ಮೇಲೆ ಮಲಗಿಕೊಳ್ಳಿ.
undefined
ಒತ್ತಡವು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನೀವು ಮನೆಯಲ್ಲಿಯೇ ಒತ್ತಡದೊಂದಿಗೆ ಹೋರಾಡಲು ಸಾಧ್ಯವಾದರೆ ಅದು ಉತ್ತಮವಲ್ಲವೇ?
undefined
ಇದಕ್ಕೆ ಲವಂಗ ಎಣ್ಣೆಯ ಉತ್ತೇಜಕ ಗುಣಗಳು ಸಹಾಯ ಮಾಡುತ್ತವೆ. ಇದು ಮಾನಸಿಕ ಬಳಲಿಕೆ, ಒತ್ತಡ ಮತ್ತು ಆತಂಕದಿಂದ ಪರಿಹಾರವನ್ನು ನೀಡುತ್ತದೆ. ಕಾರ್ಟಿಸೋಲ್ ಮಟ್ಟವನ್ನು ನಿರ್ವಹಿಸಲು ಇದನ್ನು ನಿಮ್ಮ ಆಹಾರದ ಒಂದು ಭಾಗವಾಗಿ ಮಾಡಿ ಮತ್ತು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ.
undefined
ಮಧುಮೇಹವು ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಆರೋಗ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಇನ್ಸುಲಿನ್ ತಯಾರಿಸುವ ಮೇದೋಜ್ಜೀರಕ ಗ್ರಂಥಿಯ ಕೋಶಗಳ ಮೇಲೆ ದಾಳಿ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಇನ್ಸುಲಿನ್ ಇಲ್ಲದಂತಾಗುತ್ತದೆ. ಲವಂಗ ಎಣ್ಣೆ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
undefined
ಮೊಡವೆಗಳಂತಹ ಯಾವುದೇ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಲವಂಗ ಎಣ್ಣೆ ಸಹಾಯ ಮಾಡುತ್ತದೆ. ನಿಮ್ಮ ಕ್ರೀಮ್ ನೊಂದಿಗೆ ಲವಂಗದ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನಿಮ್ಮ ಚರ್ಮಕ್ಕೆ ಉತ್ತಮ ಪರಿಹಾರ ನೀಡುತ್ತದೆ.
undefined
ಇದು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ನಿಮಗೆ ಯುವ ಚರ್ಮವನ್ನು ನೀಡಲು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಸುಂದರವಾದ ಸ್ಕಿನ್ ನಿಮ್ಮದಾಗುತ್ತದೆ.
undefined
click me!