ದಾಳಿಂಬೆ ಸಿಪ್ಪೆ ಬಿಸಾಕ್ಬೇಡಿ! ಚಹಾ ಮಾಡಿ ಆರೋಗ್ಯದ ಮೇಲೆ ಜಾದೂ ನೋಡಿ

First Published | Dec 12, 2022, 2:27 PM IST

ದಾಳಿಂಬೆ ಸಿಪ್ಪೆಯಿಂದ ಮಾಡಿದ ಚಹಾದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಜನರು ದಾಳಿಂಬೆ ತಿಂದ ನಂತರ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಮುಂದಿನ ಬಾರಿ ಇದನ್ನು ಮಾಡುವ ಮೊದಲು ನೀವು ಒಮ್ಮೆ ಇಲ್ಲಿ ಓದಿ.

ಒಂದು ದಾಳಿಂಬೆ (Pomegrante) ನೂರು ರೋಗ ಗುಣಪಡಿಸಬಹುದು ಎಂಬ ಮಾತಿದೆ. ಹೌದು, ದಾಳಿಂಬೆಯಲ್ಲಿರುವ ಅನೇಕ ಅಗತ್ಯ ಪೋಷಕಾಂಶಗಳು ಸೂಪರ್ ಫುಡ್ಸ್ ಪಟ್ಟಿಯಲ್ಲಿದು ಸೇರಿದೆ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ, ಒಬ್ಬ ವ್ಯಕ್ತಿ ಚರ್ಮಕ್ಕೆ (Skin) ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ದೇಹದಲ್ಲಿನ ಸಂಪೂರ್ಣ ಕಬ್ಬಿಣದ ಕೊರತೆಯನ್ನು ಸರಿಪಡಿಸಬಹುದು. ದಾಳಿಂಬೆಯಲ್ಲಿ ಸಾಕಷ್ಟು ನಾರಿನಂಶ, ಜಿಂಕ್ (Zinc), ಪೊಟ್ಯಾಸಿಯಮ್ (Potassium), ಕಬ್ಬಿಣ (Iron) ಮತ್ತು ಒಮೆಗಾ 6 ಇದೆ. ಇದು ವ್ಯಕ್ತಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ತರುತ್ತೆ.

ದಾಳಿಂಬೆ ಸಿಪ್ಪೆಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ಬ್ಯಾಕ್ಟೀರಿಯಾ (Bacteria )ಮತ್ತು ಇತರ ಸೋಂಕುಗಳನ್ನು (Infection) ತಡೆಯಲು ಸಹಾಯ ಮಾಡುತ್ತೆ. ದಾಳಿಂಬೆ ಸಿಪ್ಪೆ ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತವೆ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತವೆ. 

Tap to resize

ದಾಳಿಂಬೆ ಸಿಪ್ಪೆಯು ಚರ್ಮಕ್ಕೆ (Skin) ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಚರ್ಮ ಡ್ರೈ ಆಗಿರಲಿ, ಎಣ್ಣೆಯುಕ್ತವಾಗಿರಲಿ, ಮೃದುವಾಗಿರಲಿ, ದಾಳಿಂಬೆ ಸಿಪ್ಪೆ ಪ್ರತಿ ಚರ್ಮಕ್ಕೂ ಪ್ರಯೋಜನಕಾರಿ. ಹೌದು, ದಾಳಿಂಬೆ ಸಿಪ್ಪೆಗಳಿಂದ ಒಂದು ಕಪ್ ಆರೋಗ್ಯಕರ ಚಹಾ ಹೇಗೆ ತಯಾರಿಸೋದು ಮತ್ತು ಅದನ್ನು ಕುಡಿಯೋದರಿಂದ ಒಬ್ಬ ವ್ಯಕ್ತಿ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ. 

ದಾಳಿಂಬೆ ಸಿಪ್ಪೆಯ (Pomegranate peel ) ಪುಡಿಯನ್ನು ತಯಾರಿಸೋದು ಹೇಗೆ?

ದಾಳಿಂಬೆ ಸಿಪ್ಪೆಗಳನ್ನು ಒಂದು ಬಾಣಲೆಯಲ್ಲಿ ಹಾಕಿ ಮತ್ತು ಅವುಗಳನ್ನು ಓವನ್‌ನಲ್ಲಿ 350 ಡಿಗ್ರಿಯಲ್ಲಿ 20 ನಿಮಿಷ ಬೇಕ್ ಮಾಡಿ. ಸಿಪ್ಪೆಗಳು ಒಣಗಿದ ನಂತರ, ಅವುಗಳನ್ನು ರುಬ್ಬಿ ಪುಡಿ ಮಾಡಿ. ನೀವು ಬಯಸಿದರೆ, ದಾಳಿಂಬೆ ಸಿಪ್ಪೆಗಳನ್ನು ಒಣಗಿಸಬಹುದು ಮತ್ತು ಅವುಗಳ ಸಣ್ಣ ತುಂಡುಗಳನ್ನು ಸೇವಿಸಬಹುದು.

ದಾಳಿಂಬೆ ಸಿಪ್ಪೆ ಚಹಾ(Pomogranate peel tea ) ತಯಾರಿಸೋದು ಹೇಗೆ ಎಂದು ಇಲ್ಲಿದೆ ನೋಡಿ:

ದಾಳಿಂಬೆ ಸಿಪ್ಪೆ ಚಹಾ ತಯಾರಿಸಲು, ಮೊದಲನೆಯದಾಗಿ, ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಒಂದು ಟೀಸ್ಪೂನ್ ದಾಳಿಂಬೆ ಸಿಪ್ಪೆ ಪುಡಿಯನ್ನು ಬೆರೆಸಿ ಮತ್ತು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ಚಹಾದ ರುಚಿಯನ್ನು ಹೆಚ್ಚಿಸಲು  ಈ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸಹ ಸೇರಿಸಬಹುದು.

ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯುವುದರ ಪ್ರಯೋಜನಗಳು

ಚರ್ಮದ ಸಮಸ್ಯೆಗಳಿಗೆ ಸಹಾಯಕಾರಿ-
ದಾಳಿಂಬೆ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್ ಗಳು ಹೆಚ್ಚಾಗಿವೆ, ಇದು ಹೈಪರ್ ಪಿಗ್ಮೆಂಟೇಶನ್ (ಚರ್ಮದ ಕಪ್ಪು ಕಲೆಗಳು) ಚಿಕಿತ್ಸೆಗೆ ಸಹಾಯ ಮಾಡುತ್ತೆ.

ಹೃದಯದ(Heart) ಆರೋಗ್ಯ ಕಾಪಾಡುತ್ತೆ-

ದಾಳಿಂಬೆ ಸಿಪ್ಪೆ ಹೃದಯ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತೆ. ದಾಳಿಂಬೆ ಸಿಪ್ಪೆ ರಸವು ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತೆ, ಇದು ಅಧಿಕ ತೂಕ (Over Weight) ಮತ್ತು ಸ್ಥೂಲಕಾಯದ ಜನರಲ್ಲಿ ಕೊಲೆಸ್ಟ್ರಾಲ್ (Cholestarol) ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ಸುಧಾರಿಸುತ್ತೆ.

ಮಧುಮೇಹ(Diabetes) ನಿಯಂತ್ರಿಸಲು ಸಹಕಾರಿ

ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್ ಗಳಿವೆ, ಅವು ಆಂಟಿ-ಆಕ್ಸಿಡೇಟಿವ್ ಚಟುವಟಿಕೆಯನ್ನು ಹೊಂದಿವೆ. ದಾಳಿಂಬೆ ಸಿಪ್ಪೆಗಳಲ್ಲಿನ ಎಲಾಜಿಕ್ ಆಮ್ಲ ಮತ್ತು ಪಿಕ್ಲುಜಿನ್ ಗುಣಲಕ್ಷಣಗಳು ಆಹಾರ ಸೇವಿಸಿದ ನಂತರ ದೇಹದಲ್ಲಿ ಹೆಚ್ಚಾಗುವ ಗ್ಲುಕೋಸ್ ಸ್ಪೈಕ್ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಅವು ಮಧುಮೇಹ ನಿಯಂತ್ರಿಸುವಲ್ಲಿ ಸಹಾಯಕ.  

ಬಾಯಿಯ ಆರೋಗ್ಯ (Oral Health)

ದಾಳಿಂಬೆ ಸಿಪ್ಪೆ ಹಲ್ಲುಗಳಲ್ಲಿ ಪ್ಲೇಕ್ ರಚನೆ ತಡೆಯಲು ಸಹಾಯ ಮಾಡುತ್ತೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಹಲ್ಲು ಮತ್ತು ಒಸಡು ರೋಗಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತೆ.

ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತೊಡೆದುಹಾಕುತ್ತೆ-(high blood pressure)

ಈ ಚಹಾ ಹೆಚ್ಚಿನ ರಕ್ತದೊತ್ತಡದ ಸಮಸ್ಯೆಯನ್ನು (High Blood Pressure) ದೊಡ್ಡ ಪ್ರಮಾಣದಲ್ಲಿ ತೊಡೆದುಹಾಕುತ್ತೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಮುಖ್ಯ ಕಾರಣವಾಗಿದೆ. ಉರಿಯೂತ ನಿವಾರಕ ಪದಾರ್ಥಗಳಾದ ದಾಳಿಂಬೆ ರಸವು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಉಪಯುಕ್ತವಾಗಿದೆ.

ತೂಕ (Weight) ಇಳಿಸಿಕೊಳ್ಳಲು ಸಹ ಸಹಾಯಕ-

ದಾಳಿಂಬೆ ಸಿಪ್ಪೆಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದರಲ್ಲಿರುವ ಫೈಬರ್ (Fiber) ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಹಾಗಾಗಿ, ತೂಕ ಇಳಿಸಿಕೊಳ್ಳಲು ನೀವು ಈ ಚಹಾ ಕುಡಿಯಬಹುದು. ದಾಳಿಂಬೆ ಸಿಪ್ಪೆಗಳಿಂದ ತಯಾರಿಸಿದ ಚಹಾವನ್ನು ನೀವು ನಿಯಮಿತವಾಗಿ ಕುಡಿದರೆ, ಆಗ ಪ್ರತಿರಕ್ಷಣಾ ವ್ಯವಸ್ಥೆಯು ಸಹ ಬಲವಾಗಿರುತ್ತೆ, ಇದರಿಂದ ನೀವು ಅನೇಕ ರೀತಿಯ ರೋಗಗಳನ್ನು ತಪ್ಪಿಸಬಹುದು.

ದಾಳಿಂಬೆ ಸಿಪ್ಪೆಯ ಪ್ರಯೋಜನಗಳು

ಗಂಟಲು ನೋವು,(sore throat)ಕೆಮ್ಮು ಇತ್ಯಾದಿಗಳ ಸಮಸ್ಯೆ ಇದ್ದರೆ, ದಾಳಿಂಬೆ ಸಿಪ್ಪೆಯಲ್ಲಿರುವ ಆಂಟಿಮೈಕ್ರೋಬಿಯಲ್ ಅಂಶಗಳು ಬ್ಯಾಕ್ಟೀರಿಯಾ, ಸೋಂಕನ್ನು ಕಡಿಮೆ ಮಾಡುತ್ತವೆ.
ಮೂತ್ರವಿಸರ್ಜನೆ, ಯುಟಿಐ (UTI), ಮೂತ್ರವಿಸರ್ಜನೆಯಲ್ಲಿ ಕಿರಿಕಿರಿ ಹೊಂದಿರುವ ಜನರು, ದಾಳಿಂಬೆ ಸಿಪ್ಪೆಗಳಿಂದ ತಯಾರಿಸಿದ ಚಹಾ ಅಥವಾ ಕಷಾಯ ಕುಡೀಯೋದರಿಂದ ಸಮಸ್ಯೆ ನಿವಾರಣೆಯಾಗುತ್ತೆ.

ದಾಳಿಂಬೆ ಸಿಪ್ಪೆಗಳು ಸೂಕ್ಷ್ಮ ಗೆರೆ, ಸುಕ್ಕು, ವಯಸ್ಸಾಗುವಿಕೆಯ ಚಿಹ್ನೆಗಳು, ಒಣ ಚರ್ಮ ಮುಂತಾದ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ದಾಳಿಂಬೆ ಸಿಪ್ಪೆಗಳಿಂದ ತಯಾರಿಸಿದ ಪೇಸ್ಟ್  ಚರ್ಮದ ಮೇಲೆ ಹಚ್ಚಬಹುದು. ಇದರಿಂದ ಸುಂದರ, ಸಾಫ್ಟ್ ಆಗಿರುವ ಚರ್ಮ ನಿಮ್ಮದಾಗುತ್ತೆ. 
 

Latest Videos

click me!