ಹೂಸ ಬಿಡೋದು ಆರೋಗ್ಯಕರ, ಆದರೆ, ಹೆಚ್ಚಾದರೆ ಡಾಕ್ಟರ್‌ ಮೀಟ್ ಮಾಡ್ಬಿಡಿ!

First Published | Jul 22, 2022, 1:00 PM IST

ಹೂಸು ಬಿಡೋದು ಅಥವಾ ಗ್ಯಾಸ್ ಪಾಸ್ ಮಾಡೋದನ್ನು ಎಂದರೆ ಪ್ರತಿಯೊಬ್ಬರಿಗೂ ಅದೊಂದು ಮುಜುಗರದ ವಿಷಯವೇ ಸರಿ. ಆದರೆ ವಾಸ್ತವವಾಗಿ ಫಾರ್ಟಿಂಗ್ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಘಟನೆ. ಇದು ಜೀರ್ಣಾಂಗ ವ್ಯವಸ್ಥೆಯ ಉಪ ಉತ್ಪನ್ನ. ಇದಕ್ಕಾಗಿ ನೀವು ಮುಜುಗರ ಪಟ್ಟುಕೊಳ್ಳಬೇಕಾದ ಅಗತ್ಯವೇ ಇಲ್ಲ. ಯಾಕಂದ್ರೆ, ಫಾರ್ಟಿಂಗ್ ಆರೋಗ್ಯಕರ ಮತ್ತು ನಿಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು.

ಗ್ಯಾಸ್ ಪಾಸ್ (gas pass)ಮಾಡೋದು ಸುಮ್ನೆ ಅಲ್ಲ, ನಮ್ಮ ದೇಹವು ಆಹಾರವನ್ನು ವಿಭಜಿಸುವ ಮತ್ತು ಸಂಸ್ಕರಿಸುವ ಭಾಗವಾಗಿ ಗ್ಯಾಸ್ ಉತ್ಪಾದಿಸುತ್ತದೆ. ತಿನ್ನುವಾಗ, ಅಗಿಯುವಾಗ ಅಥವಾ ನುಂಗುವಾಗ ನೀವು ಗಾಳಿಯನ್ನು ಸಹ ನುಂಗುತ್ತೀರಿ. ಈ ಎಲ್ಲಾ ಅನಿಲ ಮತ್ತು ಗಾಳಿಯು ಜೀರ್ಣಾಂಗವ್ಯೂಹದಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲಿ ಸ್ವಲ್ಪ ಭಾಗವನ್ನು ನಮ್ಮ ದೇಹವು ಸ್ವಾಭಾವಿಕವಾಗಿ ಹೀರಿಕೊಳ್ಳುತ್ತೆ, ಆದರೆ ಉಳಿದ ಗ್ಯಾಸ್ ಹೊಟ್ಟೆಯಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ. ಇದನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ದೇಹದಿಂದ ಹೊರಕ್ಕೆ ಬಿಡುಗಡೆ ಮಾಡಲೇಬೇಕಾಗುತ್ತದೆ. ಇದನ್ನೇ ನಾವು ಬರ್ಪಿಂಗ್ ಅಂದ್ರೆ ತೇಗುವ ಮೂಲಕ ಅಥವ ಹೂಸು ಬಿಡುವ ಮೂಲಕ ಹೊರ ಹಾಕುತ್ತೇವೆ. 

ಒಂದು ವೇಳೆ ನೀವು ಮುಜುಗರದಿಂದಲೋ ಅಥವಾ ಏನೋ ಒಂದು ಕಾರಣದಿಂದ ಹೂಸು ಬಿಡೋದನ್ನು (farting) ತಡೆದರೆ, ಅದ್ರಿಂದ ನೀವು ಹೊಟ್ಟೆ ಉಬ್ಬರದಂತಹ ಅಹಿತಕರ, ನೋವಿನ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಇಲ್ಲಿ ನಿಮಗೆ ಫಾರ್ಟಿಂಗ್ ಏಕೆ ಒಳ್ಳೆಯದು ಅನ್ನೋದ್ರ ಬಗ್ಗೆ, ಎಷ್ಟು ಸರಿ ಹೂಸು ಬಿಡೋದು ಉತ್ತಮ ಅನ್ನೋದ್ರ ಬಗ್ಗೆಯೂ ಮಾಹಿತಿ ನೀಡಲಾಗಿದೆ.

Tap to resize

ಹೂಸು ಬಿಡೋದ್ರ ಪ್ರಯೋಜನಗಳು

ಫಾರ್ಟಿಂಗ್ ಎಂಬುದು ನಿಮ್ಮ ದೇಹವು ವಿಶೇಷವಾಗಿ ನಿಮ್ಮ ಜೀರ್ಣಾಂಗವ್ಯೂಹ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದರ ಸಂಕೇತವಾಗಿದೆ. ಫಾರ್ಟಿಂಗ್ ಆರೋಗ್ಯಕರ ದೇಹದ ಪ್ರಯೋಜನವಾಗಿದೆ. ಇಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ, ಅದರ ಬಗ್ಗೆ ತಿಳಿದುಕೊಳ್ಳೋಣ. 
 

ನಿಮ್ಮ ಆಹಾರವು ಸಮತೋಲಿತವಾಗಿದೆಯೇ ಎಂದು ನಿಮಗೆ ತಿಳಿಸುತ್ತದೆ

ತೆಳ್ಳಗಿನ ಪ್ರೋಟೀನ್ಸ್, ತರಕಾರಿಗಳು, ಹಣ್ಣು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಆಹಾರವನ್ನು ಸಮತೋಲಿತ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಇವುಗಳು ಗ್ಯಾಸ್ ಉತ್ಪಾದಿಸುತ್ತದೆ. ನೀವು ಹೂಸು ಬಿಡುತ್ತಿದ್ದೀರಿ ಅಂದ್ರೆ ನಿಮ್ಮ ಆಹಾರ ಸಮತೋಲಿತವಾಗಿದೆ (Balanced Food) ಎಂದು ಅರ್ಥವಾಗುತ್ತೆ.

ನೀವು ಸರಳ ಕಾರ್ಬೋಹೈಡ್ರೇಟ್ ಗಳ ಆಹಾರವನ್ನು ಮಾತ್ರ ಸೇವಿಸಿದರೆ, ಹೆಚ್ಚು ಗ್ಯಾಸ್ ಉಂಟಾಗುತ್ತದೆ. ಆದಾಗ್ಯೂ, ಅದು ಇತರ ಕಾರಣಗಳಿಗಾಗಿ ಅನಾರೋಗ್ಯಕರ. ಸಮತೋಲಿತ ಆಹಾರವು ನಿಮ್ಮ ದೇಹಕ್ಕೆ ಮತ್ತು ವಿಶೇಷವಾಗಿ ನಿಮ್ಮ ಕರುಳಿಗೆ ಆರೋಗ್ಯಕರವಾಗಿರುತ್ತದೆ, ಅದು ಹೊಟ್ಟೆಯುಬ್ಬರಿಕೆಯನ್ನು ಉಂಟುಮಾಡಿದರೂ ಸಹ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. 
 

ಕಿಬ್ಬೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ

ನೀವು ಆಹಾರವನ್ನು ತಿನ್ನುವಾಗ, ಅಗಿಯುವಾಗ, ನುಂಗುವಾಗ ಮತ್ತು ಸಂಸ್ಕರಿಸುವಾಗ, ನಿಮ್ಮ ಜೀರ್ಣಾಂಗವ್ಯೂಹದಲ್ಲಿ ಗ್ಯಾಸ್ ಸಂಗ್ರಹವಾಗುತ್ತದೆ. ಹೊಟ್ಟೆಯಲ್ಲಿ ಸಾಕಷ್ಟು ಗ್ಯಾಸ್ ಸಂಗ್ರಹವಾದರೆ, ಅದು ಅಂತಿಮವಾಗಿ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಆದರೆ ಫಾರ್ಟಿಂಗ್ ಆ ಅನಿಲ ಮತ್ತು ಅದರೊಂದಿಗೆ ಹೊಟ್ಟೆಯಲ್ಲಿನ ನೋವು ಅಥವಾ ಒತ್ತಡವನ್ನು ತೆಗೆದುಹಾಕುತ್ತದೆ.

ಕರುಳಿನ ಆರೋಗ್ಯವನ್ನು ಸುಧಾರಿಸುತ್ತೆ

ಕೆಲವೊಮ್ಮೆ, ನೀವು ಇತರರೊಂದಿಗೆ ಕೋಣೆಯಲ್ಲಿದ್ದಾಗ ಮುಜುಗರ ಪಡುವ ಸ್ಥಿತಿ ಬಾರದಿರಲಿ ಎಂದು ಹೊಟ್ಟೆ ಉಬ್ಬರವನ್ನು ಅಂದ್ರೆ ಗ್ಯಾಸ್ ಪಾಸ್ ಮಾಡೋದನ್ನು ತಡೆಯಲು ಪ್ರಯತ್ನಿಸುತ್ತೀರಿ. ಆದರೆ ಆಗಾಗ್ಗೆ ಗ್ಯಾಸ್ ಹಿಡಿದಿಟ್ಟುಕೊಳ್ಳುವುದು ನಿಜವಾಗಿಯೂ ಕರುಳನ್ನು ಕೆರಳಿಸಬಹುದು. ಇದು ಹೆಮೊರಾಯ್ಡ್ ಗಳನ್ನು ಕಿರಿಕಿರಿಗೊಳಿಸಬಹುದು. ಗ್ಯಾಸ್ ಪಾಸ್ ಮಾಡೋದು ಯಾವಾಗಲೂ ಅದನ್ನು ಹಿಡಿದಿಟ್ಟುಕೊಳ್ಳುವುದಕ್ಕಿಂತ ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಹೂಸು ಬಿಡಲು ನಾಚಿಗೆ ಬೇಡ. 

ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ

ಜೀರ್ಣಾಂಗವ್ಯೂಹದಲ್ಲಿ ಅತಿಯಾದ ಗ್ಯಾಸ್ ಇದ್ದರೆ, ಅದರಿಂದ ಹೊಟ್ಟೆ ಉಬ್ಬರ (gastric) ಅಥವಾ ಊತ ಮತ್ತು ಹೊಟ್ಟೆ ತುಂಬಿದ ಭಾವನೆಗೆ ಕಾರಣವಾಗಬಹುದು. ಇದು ಅಹಿತಕರವಾಗಿರಬಹುದು, ಆದರೆ ಇದು ಅಪಾಯಕಾರಿ ಆಗೋದು ತುಂಬಾನೆ ಕಡಿಮೆ. ಗ್ಯಾಸ್ ಪಾಸ್ ಮಾಡೋ ಪ್ರಚೋದನೆ ಉಂಟಾದಾಗಲೆಲ್ಲಾ ಅದನ್ನು ಬಿಟ್ಟರೆ ಹೊಟ್ಟೆ ಉಬ್ಬರ ಮತ್ತು ಅದರೊಂದಿಗೆ ಯಾವುದೇ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಹಾರ ಅಲರ್ಜಿಗಳು ಅಥವಾ ಅಸಹಿಷ್ಣುತೆಗಳನ್ನು ಗುರುತಿಸುತ್ತೆ

ಅಲರ್ಜಿ ಇರುವ ಆಹಾರವನ್ನು ನೀವು ಸೇವಿಸಿದಾಗ, ಜೀರ್ಣಾಂಗವ್ಯೂಹವು ಅಸಮಾಧಾನಗೊಂಡಿದೆ ಎಂದು ನಿಮಗೆ ತಿಳಿಸಲು ನಿಮ್ಮ ದೇಹವು ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ರೋಗಲಕ್ಷಣಗಳಲ್ಲಿ ಅತಿಸಾರ, ವಾಕರಿಕೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಪಾಸ್ ಮಾಡೋದು ಸೇರಿರಬಹುದು. ಕೆಲವು ಆಹಾರಗಳನ್ನು ಸೇವಿಸಿದ ನಂತರ ನೀವು ನಿಯಮಿತವಾಗಿ ಹೆಚ್ಚುವರಿ ಗ್ಯಾಸ್ ಪಾಸ್ ಮಾಡ್ತಿದ್ರೆ, ಯಾವುದೋ ಆಹಾರದಿಂದ ತೊಂದರೆಯಾಗಿದೆ ಎಂದು ಅರ್ಥ.
 

ಆರೋಗ್ಯಕರ ಕರುಳು

 ಹೆಚ್ಚಾಗಿ ಹೂಸು ಬಿಡೋದು ಆರೋಗ್ಯಕರ ಕರುಳನ್ನು ಸೂಚಿಸುತ್ತದೆ. ಉತ್ತಮ ಕರುಳಿನ ಆರೋಗ್ಯ ಮತ್ತು ಬೆಳೆಯುತ್ತಿರುವ ಬ್ಯಾಕ್ಟೀರಿಯಾ ಪರಿಣಾಮವಾಗಿ ಹೆಚ್ಚು ಗ್ಯಾಸ್ ಉತ್ಪಾದಿಸುತ್ತದೆ. ಏಕೆಂದರೆ ಈ ಬ್ಯಾಕ್ಟೀರಿಯಾ ಹೊಟ್ಟೆ ಮತ್ತು ಕರುಳಿನಲ್ಲಿರುವ ಆಹಾರವನ್ನು ಸುಲಭವಾಗಿ ತಿನ್ನಬಹುದು ಮತ್ತು ವಿಭಜಿಸಬಹುದು. ಇದರಿಂದ ಹೆಚ್ಚು ಗ್ಯಾಸ್ ಉತ್ಪತ್ತಿಯಾಗುತ್ತೆ. ಇದು ಕೆಟ್ಟದೇನಲ್ಲಾ, ಜೀರ್ಣಾಂಗವ್ಯೂಹದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಿಮಗೆ ಹೇಳುವ ಒಂದು ಸಂಕೇತವಾಗಿದೆ.

ಆರೋಗ್ಯದ ಅಲಾರಂ

ಹೆಚ್ಚುವರಿ ಗ್ಯಾಸ್ ಪಾಸ್ ಮಾಡೋದು ಅಥವಾ ವಿಪರೀತ ಹೊಟ್ಟೆಯುಬ್ಬರದ ವಾಸನೆಗಳು ಸಂಭಾವ್ಯ ವೈದ್ಯಕೀಯ ಸ್ಥಿತಿ ಅಥವಾ ಸಮಸ್ಯೆಯ ಚಿಹ್ನೆಗಳಾಗಿರಬಹುದು. ಇದು ನಿಮ್ಮ ದೇಹಕ್ಕೆ ಯಾವ ರೀತಿಯ ಸಮಸ್ಯೆ ಭಾಧಿಸಿದೆ ಅನ್ನೋದನ್ನು ಸಹ ತಿಳಿಸುತ್ತದೆ. ಅಪರೂಪವಾಗಿ, ಇದು ಕರುಳಿನ ಕ್ಯಾನ್ಸರ್ ನಂತಹ ಹೆಚ್ಚು ಗಂಭೀರ ಸಮಸ್ಯೆಯ ಸಂಕೇತವಾಗಿದೆ.

ಎಷ್ಟು ಬಾರಿ ಫಾರ್ಟಿಂಗ್ ಮಾಡೋದು ಸಾಮಾನ್ಯವಾಗಿದೆ?

ಸರಾಸರಿ ವ್ಯಕ್ತಿಯು ಪ್ರತಿದಿನ 14 ರಿಂದ 23 ಬಾರಿ ಹೂಸು ಬಿಡುತ್ತಾನಂತೆ. ನೀವು ಏನು ತಿನ್ನುತ್ತೀರಿ ಮತ್ತು ನಿಮ್ಮ ಜೀವನಶೈಲಿಯನ್ನು (lifestyle) ಅವಲಂಬಿಸಿ ನೀವು ಸ್ವಲ್ಪ ಕಡಿಮೆ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಪಾಸ್ ಮಾಡಬಹುದು. ಕೆಲವೊಮ್ಮೆ ಹೂಸು ವಾಸನೆ ರಹಿತವಾಗಿರುತ್ತೆ, ಇನ್ನೂ ಕೆಲವೊಮ್ಮೆ ತುಂಬಾನೆ ವಾಸನೆಯಿಂದ ಕೂಡಿರುತ್ತೆ. ಇವೆರಡೂ ಸಹ ಉತ್ತಮವಾಗಿದೆ. 
 

ಅತಿಯಾದ ಫಾರ್ಟಿಂಗ್ ಅಂದ್ರೆ ದಿನಕ್ಕೆ 25 ಕ್ಕೂ ಹೆಚ್ಚು ಬಾರಿ ಫಾರ್ಟಿಂಗ್ ಮಾಡುತ್ತಿರುವ ಬಗ್ಗೆ ಗಮನ ಹರಿಸಬೇಕು. ನೀವು ಹೂಸುಗಳ ಸಂಖ್ಯೆಯ ಮೇಲೆ ನಿಗಾ ಇಡದಿದ್ದರೂ, ನಿಮ್ಮ ಗುದನಾಳದಲ್ಲಿನ ಹೆಚ್ಚುವರಿ ಒತ್ತಡವನ್ನು (stress) ನೀವು ಎಷ್ಟು ಬಾರಿ ಗಮನಿಸುತ್ತೀರಿ ಎಂಬುದರ ಮೂಲಕ ಹೆಚ್ಚು ಬಾರಿ ಗ್ಯಾಸ್ ಪಾಸ್ ಆಗುತ್ತಿದೆಯೇ ಅನ್ನೋದನ್ನು ನೀವು ಪರೀಕ್ಷಿಸಬಹುದು.

ಅತಿಯಾದ ಫಾರ್ಟಿಂಗ್ ಅಂದ್ರೆ ದಿನಕ್ಕೆ 25 ಕ್ಕೂ ಹೆಚ್ಚು ಬಾರಿ ಫಾರ್ಟಿಂಗ್ ಮಾಡುತ್ತಿರುವ ಬಗ್ಗೆ ಗಮನ ಹರಿಸಬೇಕು. ನೀವು ಹೂಸುಗಳ ಸಂಖ್ಯೆಯ ಮೇಲೆ ನಿಗಾ ಇಡದಿದ್ದರೂ, ನಿಮ್ಮ ಗುದನಾಳದಲ್ಲಿನ ಹೆಚ್ಚುವರಿ ಒತ್ತಡವನ್ನು ನೀವು ಎಷ್ಟು ಬಾರಿ ಗಮನಿಸುತ್ತೀರಿ ಎಂಬುದರ ಮೂಲಕ ಹೆಚ್ಚು ಬಾರಿ ಗ್ಯಾಸ್ ಪಾಸ್ ಆಗುತ್ತಿದೆಯೇ ಅನ್ನೋದನ್ನು ನೀವು ಪರೀಕ್ಷಿಸಬಹುದು.

ವೈದ್ಯರನ್ನು ಯಾವಾಗ ನೋಡಬೇಕು?

ಕೆಲವೊಮ್ಮೆ ನಿಯಮಿತಕ್ಕಿಂತ ಹೆಚ್ಚು ಗ್ಯಾಸ್ ಪಾಸ್ ಮಾಡುತ್ತೀರಿ ಎಂದು ನಿಮಗೆ ಅನಿಸಿದರೆ ಅಥವಾ ನೀವು ಹಾಗೆ ಮಾಡುವಾಗ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ ಆ ಸಂದರ್ಭದಲ್ಲಿ ವೈದ್ಯರನ್ನು ಕಾಣೋದು ಉತ್ತಮ ಪರಿಹಾರವಾಗಿದೆ. 

Latest Videos

click me!