1. ಎಂಡೋಕ್ರೈನ್-ಡಿಸ್‌ರಪ್ಟಿಂಗ್ ಕಾಂಪೌಂಡ್ಸ್ (EDCs): ಇವು ನಮ್ಮ ದೇಹದ ಹಾರ್ಮೋನ್ ಗಳನ್ನ ಅಸಮತೋಲನಗೊಳಿಸುತ್ತವೆ. ಇದು ಸಂತಾನೋತ್ಪತ್ತಿ ಸಮಸ್ಯೆ, ಕ್ಯಾನ್ಸರ್ ಗೆ ಕಾರಣವಾಗಬಹುದು.
2. ಕಾರ್ಸಿನೋಜೆನ್ ಗಳು: ಇವು ನಮ್ಮ DNAವನ್ನ ಹಾನಿಗೊಳಿಸುತ್ತವೆ. ಅಥವಾ ಜೀವಕೋಶಗಳ ಕಾರ್ಯವನ್ನ ಹಾಳು ಮಾಡುತ್ತವೆ.
ಆದ್ರೆ ಬ್ರೆಸ್ಟ್ ಕ್ಯಾನ್ಸರ್ ಕೇವಲ ಹೇರ್ ಡೈ, ಸ್ಟ್ರೈಟ್ನರ್ ನಿಂದ ಮಾತ್ರ ಬರಲ್ಲ. ಬೇರೆ ಕಾರಣಗಳಿಂದಲೂ ಬರಬಹುದು. ಜೆನೆಟಿಕ್ಸ್, ತಡವಾಗಿ ಮುಟ್ಟು ನಿಲ್ಲೋದು, ಹಾರ್ಮೋನ್ ಗಳ ಅಂಶಗಳು, ಹಾರ್ಮೋನ್ ರಿಪ್ಲೇಸ್ ಮೆಂಟ್ ಥೆರಪಿ ಕೂಡ ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಮದ್ಯಪಾನ, ಧೂಮಪಾನ, ಕೆಟ್ಟ ಆಹಾರ ಪದ್ಧತಿ, ವ್ಯಾಯಾಮ ಇಲ್ಲದಿರೋದು ಕೂಡ ಈ ಅಪಾಯವನ್ನ ಹೆಚ್ಚಿಸುತ್ತೆ ಅಂತಾರೆ ಆರೋಗ್ಯ ತಜ್ಞರು.