ಪ್ರಾಣಿಗಳ ಈ ಅಭ್ಯಾಸ ಫಾಲೋ ಮಾಡಿದ್ರೆ ಆಯಸ್ಸು ಗಟ್ಟಿಯಾಗುತ್ತಂತೆ!

Suvarna News   | Asianet News
Published : Oct 15, 2020, 02:51 PM IST

ಏನು ಪ್ರಾಣಿಗಳ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕೆ? ಏನಪ್ಪಾ ಹೇಳ್ತಿದ್ದಾರೆ ಇವರು ಎಂದು ಅಂದುಕೊಳ್ಳಬೇಡಿ.  ಮನುಷ್ಯರು ಇಂದು ತಮ್ಮ ಜೀವನಶೈಲಿಯನ್ನು ಬದಲಾಯಿಸಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತದೆ ಅನ್ನೋದರ ಮೇಲೆ ಗಮನ ಹರಿಸೋದಿಲ್ಲ. ಆದರೆ ಪ್ರಾಣಿಗಳ ಕೆಲವೊಂದು ಹವ್ಯಾಸಗಳು ನಿಮ್ಮನ್ನು ದೀರ್ಘಕಾಲ ಆರೋಗ್ಯವಂತರನ್ನಾಗಿಸಲು ಸಹಾಯ ಮಾಡುತ್ತದೆ. 

PREV
19
ಪ್ರಾಣಿಗಳ ಈ ಅಭ್ಯಾಸ ಫಾಲೋ ಮಾಡಿದ್ರೆ ಆಯಸ್ಸು ಗಟ್ಟಿಯಾಗುತ್ತಂತೆ!

ಇಲ್ಲಿ ಪ್ರಾಣಿಗಳ ಕೆಲವೊಂದು ಅಭ್ಯಾಸಗಳ ಬಗ್ಗೆ ನೀಡಲಾಗಿದೆ. ನೀವು ಅವುಗಳನ್ನು ಗಮನಿಸಿ ಅದರಂತೆ ನಡೆದುಕೊಂಡರೆ ನೀವು ಯಾವಾಗಲೂ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತೆ...

29

ಹಸಿ ಆಹಾರ : ಪ್ರಾಣಿಗಳು ಯಾವತ್ತೂ ಆಹಾರವನ್ನು ಬೇಯಿಸಿ ತಿನ್ನೋದಿಲ್ಲ. ಅಲ್ಲದೆ ಅದನ್ನು ಟೇಸ್ಟಿಯಾಗಿಸಲು ಮಸಾಲೆ ಪದಾರ್ಥ ಮತ್ತು ಕೆಮಿಕಲ್‌ ಬಳಕೆ ಮಾಡೋದಿಲ್ಲ.

39

ನಾವು ಕೂಡ ನಮ್ಮ ಡಯಟ್‌ನಲ್ಲಿ ಹೆಚ್ಚಾಗಿ ಹಸಿ ಆಹಾರ ಪದಾರ್ಥಗಳನ್ನು ಸೇರಿಸಬೇಕು. ಹಣ್ಣುಗಳು, ಹಸಿರು ತರಕಾರಿ, ಸಲಾಡ್‌, ಡ್ರೈಫ್ರುಟ್ಸ್‌ ಹೆಚ್ಚಾಗಿ ಸೇರಿಸಿ. ಇದರಿಂದ ದೇಹಕ್ಕೆ ಬೇಕಾದ ನ್ಯೂಟ್ರೀಯಂಟ್ಸ್‌ ದೊರೆಯುತ್ತದೆ.

49

ಪ್ರಕೃತಿಯ ಜೊತೆಗೆ ಸಂಬಂಧ : ಪ್ರಾಣಿಗಳು ಯಾವಾಗಲೂ ಪ್ರಕೃತಿಯ ಜೊತೆಯಾಗಿ ಬೆಳೆಯಲು ಇಷ್ಟಪಡುತ್ತಾರೆ. ಇಲ್ಲಿ ಅವುಗಳಿಗೆ ತಂಪಾದ ಹಾಗೂ ಶುದ್ಧವಾದ ಗಾಳಿ ಸಿಗುತ್ತದೆ. ಅಲ್ಲದೆ ಅವುಗಳು ಇದರಿಂದಾಗಿ ತುಂಬಾ ಸಮಯದವರೆಗೂ ಆರೋಗ್ಯದಿಂದಿರಲು ಸಹಾಯವಾಗುತ್ತದೆ.

59

ಓಪನ್‌ ಆಗಿರುವ , ಹೆಚ್ಚು ಗಾಳಿ, ಬೆಳಕು ಇರುವ ತಾಣದಲ್ಲಿ ನಿಮ್ಮ ಸಮಯವನ್ನು ಕಳೆಯಿರಿ. ಮನೆಯ ಕಿಟಕಿನ್ನು ಓಪನ್‌ ಆಗಿಟ್ಟು ಮಲಗಿ. ಹೀಗೆ ಮಾಡುವುದರಿಂದ ಅಸ್ಥಮಾ, ಟಿಬಿ, ಸೈನೋಸಾಟಿಸ್‌ ಮೊದಲಾದ ಸಮಸ್ಯೆಗಳಿಂದ ನೀವು ರಕ್ಷಣೆ ಪಡೆಯಬಹುದು.

69

ಎಕ್ಸರ್‌ಸೈಜ್‌ : ನಾಯಿ ಮತ್ತು ಬೆಕ್ಕು ಬೆಳಗ್ಗೆ ಎದ್ದ ತಕ್ಷಣ ಕೈ ಕಾಲುಗಳನ್ನು ಉದ್ದಕ್ಕೆ ಚಾಚಿ ಸ್ಟ್ರೆಚಿಂಗ್‌ ಮಾಡೋದನ್ನು  ನಾವು ನೋಡಿದ್ದೇವೆ. ಇದರಿಂದ ಮಸಲ್ಸ್‌ ಆರೋಗ್ಯದಿಂದ ಕೂಡಿರುತ್ತದೆ. ಅಲ್ಲದೆ ಪ್ರಾಣಿ ಪಕ್ಷಿಗಳು ಯಾವಾಗಲೂ ನಡೆದಾಡುತ್ತಿರುತ್ತದೆ. ಆದುದರಿಂದ ಅವುಗಳಿಗೆ ನ್ಯಾಚುರಲ್‌ ಆಗಿ ವ್ಯಾಯಾಮ ಸಿಗುತ್ತದೆ.

79

ಮುಂಜಾನೆ ಎದ್ದು ಸ್ಟ್ರೆಚಿಂಗ್‌ ಎಕ್ಸರ್‌ಸೈಜ್‌ ಮಾಡಿ. ಜೊತೆಗೆ ಹೆಚ್ಚು ಹೆಚ್ಚು ನಡೆಯೋದನ್ನು ರೂಢಿ ಮಾಡಿಕೊಳ್ಳಿ. ದಿನಪೂರ್ತಿ ಫಿಜಿಕಲ್‌ ಆಗಿ ಆಕ್ಟೀವ್‌ ಆಗಿರಿ.

89

ಸ್ಟ್ರೆಸ್‌ ಫ್ರೀ ಲೈಫ್‌ : ಪ್ರಾಣಿಗಳು ತಮ್ಮ ಜೀವನದ ಬಗ್ಗೆ ಹೆಚ್ಚು ಸ್ಟ್ರೆಸ್‌ ಮಾಡಿಕೊಳ್ಳೋದಿಲ್ಲ. ಅವುಗಳು ತಮ್ಮ ಜೀವನವನ್ನು ಓಪನ್‌ ಆಗಿ - ಪೂರ್ತಿ ಎಂಜಾಯ್‌ ಮಾಡಿಕೊಂಡು ನಡೆಸಿಕೊಂಡು ಹೋಗುತ್ತಾರೆ.

99

ಸಣ್ಣ ಸಣ್ಣ ಮಾತುಗಳಿಗೆ ಟೆನ್ಶನ್‌ ಮತ್ತು ಸ್ಟ್ರೆಸ್‌‌ ತೆಗೆದುಕೊಳ್ಳುವುದು ಸರಿಯಲ್ಲ. ಇದರಿಂದ ದೇಹದಲ್ಲಿ ಬ್ಲಡ್‌ ಸರ್ಕ್ಯುಲೇಶನ್‌ ಸರಿಯಾಗಿ ಆಗೋದಿಲ್ಲ. ಇದರಿಂದ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ, ಅಲ್ಲದೆ ಬಿಪಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

click me!

Recommended Stories