ಮುಂದೊಂದು ದಿನ ಗಾಳಿ ಸಿಗದೇ ಕಷ್ಟವಾಗಬಹುದು, ಇವತ್ತೇ ಗಿಡ ಬೆಳೆಸಿ

First Published | May 21, 2021, 7:16 PM IST

ಮನುಷ್ಯ ಪ್ರಾಣಿಗಳಿಗೆ ಬೇಕಾಗಿರುವುದು ಬೆಳಕು, ನೀರು, ಗಾಳಿ, ಆಹಾರ ಇದರಲ್ಲಿ ಮುಖ್ಯವಾಗಿ ಬೇಕಾಗಿರುವುದು ಗಾಳಿ. ಹೌದು,  ಆಕ್ಸಿಜನ್ (ಆಮ್ಲಜನಕ). ಮನುಷ್ಯ ತನ್ನ ಆಸೆ ಆಮಿಷಕ್ಕೆ ಒಳಗಾಗಿ ಲಕ್ಷಾನುಗಟ್ಟಲೆ ಮರಗಳನ್ನು ಕಡಿಯುತ್ತಿದ್ದಾನೆ. ಆದರೆ ಅದಕ್ಕೆ ಬದಲಾಗಿ ಯಾವ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಹೇಗಿದೆ ಎಂದರೆ ಹವಾಮಾನ ವೈಪರೀತ್ಯ ಉಂಟಾಗಿದೆ. ಹೀಗಾಗಿ ಭೂಮಿಯಲ್ಲಿ ಅಸಮತೋಲನ ಎದ್ದು ಕಾಡುತ್ತಿದೆ. ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲಿ. ಚಳಿ ಪ್ರದೇಶಗಳಲ್ಲಿ ಬೇಸಿಗೆಯಂತಾಗಿವೆ. ಧ್ರುವಗಳಲ್ಲಿ ಹಿಮ ಕರಗುತ್ತಿದೆ. ಹೀಗಾಗಿ ಈಗ ನಾವು ಎಚ್ಚೆತ್ತು ಕೊಳ್ಳಲೇ ಬೇಕಾಗಿದೆ. ಕಾಡು ಕಡಿದು ನಾಡು ಮಾಡಿದರೆ ಮನುಷ್ಯ ಕೊನೆಗೆ ಗಾಳಿ ಇಲ್ಲದೆ ಆ ನಾಡಿನಲ್ಲೂ ಬದುಕಲು ಅಸಾಧ್ಯ. 

ನಮ್ಮ ಚಿತ್ತ ಗಿಡ ನೆಡುವಲ್ಲಿ ಇರಬೇಕು. ಎಂತಹ ಗಿಡ ನೆಡಬೇಕು ಯಾವ ಗಿಡ ಹೆಚ್ಚು ಆಮ್ಲಜನಕವನ್ನು ಕೊಡುತ್ತದೆ. ಅವುಗಳ ಬೆಳವಣಿಗೆಗೆ ಒತ್ತುಕೊಡಬೇಕು. ಅತ್ಯಧಿಕ ಆಮ್ಲಜನಕವನ್ನು ಬಿಡುಗಡೆ ಮಾಡುವ ಮರಗಳು ಹಲವು. ಅವುಗಳಲ್ಲಿ ಮುಖ್ಯವಾಗಿ ಬೇಕಾಗಿರುವ ಮರಗಳು ಇವು.
ಅಶ್ವತ್ಥ ಮರ:ಇದನ್ನು ಬೋಧಿ ವೃಕ್ಷ ಎನ್ನುತ್ತಾರೆ. ಈ ಮರ ಹಿಂದುಗಳಿಗೆ ಬಹಳ ಪೂಜನೀಯವಾದದ್ದು. ಇದು 60 ರಿಂದ 80 ಅಡಿಎತ್ತರಕ್ಕೆ ಬೆಳೆಯುತ್ತದೆ. ಅತ್ಯಧಿಕ ಆಮ್ಲಜನಕ ಕೊಡುವ ಭಾರತದಲ್ಲಿ ಸಿಗುವ ಮರಗಳಲ್ಲಿ ಒಂದು. ಪರಿಸರದಲ್ಲಿನ ಗಾಳಿಯನ್ನು ಶುದ್ಧ ಮಾಡುತ್ತದೆ.
Tap to resize

ಆಲದ ಮರ : ಇದು ಭಾರತದ ರಾಷ್ಟ್ರೀಯ ಮರವೆಂದು ಹೆಗ್ಗಳಿಕೆ ಪಡೆದಿದೆ. ಇದು ಅತೀ ದೊಡ್ಡದಾಗಿ ಬೃಹದಾಕಾರವಾಗಿ ಬೆಳೆಯುವ ಮರ. ಅಲ್ಲದೆ ಅತ್ಯಧಿಕ ಆಮ್ಲಜನಕ ಕೊಡುವ ಮರಗಳಲ್ಲಿ ಪ್ರಮುಖವಾದುದು.
ಬೇವಿನ ಮರ : ಇದು ಕೂಡ ಪರಿಸರದಲ್ಲಿ ಇರುವ ಮಲಿನ ಗಾಳಿಯನ್ನು ಶುದ್ಧ ಮಾಡುತ್ತದೆ. ಇದು ಇಂಗಾಲದ ಡೈ ಆಕ್ಸೈಡ್, ಸಲ್ಫರ್ಆಕ್ಸೈಡ್, ನೈಟ್ರೋಜನ್ ಇಂತಹ ವಿಷಕಾರಿ ಅನಿಲವನ್ನು ವಾತಾವರಣದಿಂದ ಹೀರಿ ಆಮ್ಲಜನಕವನ್ನಾಗಿ ಬಿಡುಗಡೆ ಮಾಡುತ್ತದೆ.
ಇದು ಕೇವಲ ಆಮ್ಲಜನಕ ಕೊಡುವುದು ಮಾತ್ರವಲ್ಲದೆ ಔಷಧೀಯ ಗುಣವುಳ್ಳ ಮರ. ಇದನ್ನು ಮನೆಯ ಸುತ್ತ ಬೆಳೆದರೆ ಬಹಳ ಒಳ್ಳೆಯದು.
ಅಡಿಕೆಮರ:ಇದು ಜಗತ್ತಿನಲ್ಲಿ ಅತ್ಯಧಿಕ ಆಮ್ಲಜನಕವನ್ನು ತಯಾರಿಸುವ ಸಸ್ಯಗಳಲ್ಲಿ ಮೂರನೆಯ ಸ್ಥಾನ ಪಡೆದಿದೆ. ಇದು ಹಗಲು ಹೊತ್ತು ಅತ್ಯಧಿಕ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಆಮ್ಲಜನಕವನ್ನಾಗಿ ಪರಿವರ್ತಿಸುತ್ತದೆ. ಅಲ್ಲದೆ ಗಾಳಿಯಲ್ಲಿರುವ ಜೈಲಿನ್ ಮತ್ತು ಟೊಲಿವಿನ್(toluene) ಎಂಬ ವಿಷಕಾರಿ ಅನಿಲವನ್ನು ವಾತಾವರಣದಿಂದ ಹೀರುತ್ತದೆ. ಹಾಗಾಗಿ ಅಡಿಕೆ ಮರ ನೆಟ್ಟು ಬೆಳೆಸಿದರೆ ಶುದ್ಧ ಗಾಳಿ ಸಿಗುತ್ತದೆ. ಇದನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ.
ಅಶೋಕ ಮರ : ಇದನ್ನು ಪೌರಾಣಿಕವಾಗಿ ನೋಡಿದರೆ ಸೀತಾದೇವಿ ಲಂಕೆಯಲ್ಲಿಇದ್ದಾಗ ಅಶೋಕ ಮರದ ಕೆಳಗೆ ಇದ್ದಳು ಎನ್ನುತ್ತಾರೆ. ಹಾಗಾಗಿ ಸೀತಾ ಅಶೋಕ ಅಂತಲೂ ಕರೆಯುತ್ತಾರೆ. ಇದರ ಹೂವು ಬಹಳ ಸುಂದರವಾಗಿದ್ದು, ಪರಿಮಳದಿಂದ ಕೂಡಿದೆ. ಇದು ಚಿಕ್ಕದಾಗಿದ್ದು ಉದ್ದಕ್ಕೆ ಬೆಳೆಯುವ ಮರ ಇದನ್ನು ಮನೆಯ ಸುತ್ತಮುತ್ತ ಬೆಳೆಸೋದರಿಂದ ಸುಂದರವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಪರಿಸರವನ್ನು ಶುದ್ಧವಾಗಿ ಇಡುತ್ತದೆ. ಇದು ವಿಷಕಾರಿ ಅನಿಲವನ್ನು ಗಾಳಿಯಿಂದ ಹೀರಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ಕರಿಬೇವಿನ ಸೊಪ್ಪಿನ ಮರ : ಇದರ ಎಲೆಗಳಲ್ಲಿ ಸುವಾಸನೆ ಇದೆ. ಇದನ್ನು ಅಡಿಗೆಗಳಲ್ಲಿ ಒಗ್ಗರಣೆಗೆ ಬಳಸುತ್ತಾರೆ. ಇದು ಕೇವಲ ಅಡುಗೆಗೆ ಮಾತ್ರವಲ್ಲದೇ ಸುತ್ತಮುತ್ತಲಿನ ವಾತಾವರಣವನ್ನೂ ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ತಮ್ಮ ತಮ್ಮ ಕೈ ತೋಟಗಳಲ್ಲಿ ಬೆಳೆಸಿ
ಜಾಮೂನ್ ಅಥವಾ ಜಂಬೂ ನೇರಳೆ ಮರ : ಇದು 50 ರಿಂದ 100 ಫೀಟ್ ಎತ್ತರಕ್ಕೆ ಬೆಳೆಯುತ್ತದೆ. ಇದು ನೇರಳೆ ಬಣ್ಣದ ಹಣ್ಣುಗಳನ್ನು ಬಿಡುತ್ತದೆ. ಅಲ್ಲದೆ ಇದರ ಹೂವು ಪರಿಮಳದಿಂದ ಕೂಡಿದ್ದು ಇದು ವಾತಾವರಣದಲ್ಲಿ ವಿಷ ಅನಿಲಗಳಾದ ಸಲ್ಫರ್ ಆಕ್ಸೈಡ್ ಮತ್ತು ನೈಟ್ರೋಜನ್ ಅನ್ನು ಹೀರುತ್ತದೆ.
ಹೀಗೆ ಸಪ್ತ ಪರ್ಣಿ ಮರ, ಅರ್ಜುನ ಮರ ಗಳಂತ ಹಲವು ಮರಗಳು ಅತ್ಯಧಿಕ ಆಮ್ಲಜನಕ ಕೊಡುವ ಮರಗಳಾಗಿವೆ. ಹಾಗಾಗಿ ನಮ್ಮ ಪರಿಸರ ನಮ್ಮ ಕೈ ಯಲ್ಲಿ ಎಂಬ ಮಾತನ್ನು ಪಾಲಿಸಿದಲ್ಲಿ ಪರಿಸರ ನಮ್ಮನ್ನು ಕಾಪಾಡುತ್ತದೆ.

Latest Videos

click me!