ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯ ಉಪಯೋಗಗಳು

First Published Sep 10, 2020, 5:25 PM IST

ಹಲವು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಹಲವು ಉಪಯೋಗಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ.  ಇದು ಅತ್ಯಂತ ಜನಪ್ರಿಯ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ.

ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಕ್ಯಾರೋಟಿನ್ ಮತ್ತು ವಿಟಮಿನ್ ಬಿ ಹೇರಳವಾರುವ ನೆಲ್ಲಿಕಾಯಿ ಆರೋಗ್ಯಕರ ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದೆ.
undefined
ಆಮ್ಲಾ ಕೇವಲ ರೋಗನಿರೋಧಕ ಹೆಚ್ಚಿಸುವುದಷ್ಟೇ ಅಲ್ಲ ದೇಹ, ಚರ್ಮ ಮತ್ತು ಕೂದಲುಗಳ ಮೇಲೆ ಹಲವು ವಿಧಗಳಲ್ಲಿ ಅದ್ಭುತ ಪರಿಣಾಮ ಬೀರುತ್ತದೆ.
undefined
ನೆಲ್ಲಿಕಾಯಿಯ ಕೆಲವು ಇಂಟರೆಸ್ಟಿಂಗ್‌ ಉಪಯೋಗಗಳು ಇಲ್ಲಿವೆ.
undefined
ಆರೋಗ್ಯ ತಜ್ಞರು ಮತ್ತು ಪೌಷ್ಟಿಕತಜ್ಞರ ಪ್ರಕಾರ, ಆಮ್ಲಾ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸ್ಟ್ರಾಂಗ್‌ ಮೆಟಬಾಲಿಸಂ ಅನ್ನು ನಿರ್ಮಿಸುತ್ತದೆ.
undefined
ಚಿಟಿಕೆ ಉಪ್ಪು ಹಾಗೂ ಪೇಪ್ಪರ್‌ ಜೊತೆ ಒಂದು ಗ್ಲಾಸ್‌ ನೆಲ್ಲಿಕಾಯಿ ರಸ ಕುಡಿದರೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆ ಸಹಾಯಮಾಡುವ ನೆಲ್ಲಿಕಾಯಿಯನ್ನು ಊಟಕ್ಕೆ ಮುಂಚಿತವಾಗಿ ಇದರ ರಸವನ್ನು ಸೇವಿಸುವುದರಿಂದ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ.
undefined
ವಿಟಮಿನ್ ಸಿ ಭರಿತ ನೆಲ್ಲಿಕಾಯಿ ಹಸಿಯಾಗಿ ಅಥವಾ ಅದರ ಪುಡಿಯನ್ನು ಜೇನುತುಪ್ಪದೊಂದಿಗೆ ತಿನ್ನುವುದರಿಂದ ಶೀತ, ಕೆಮ್ಮುದ ಜೊತೆ ಹಲವಾರು ಕಾಯಿಲೆಗಳನ್ನು ದೂರ ಇಡಲು ಸಹಾಯ ಮಾಡುತ್ತದೆ.
undefined
ತುಳಸಿ ಎಲೆಗಳು, ಜೇನುತುಪ್ಪ, ಶುಂಠಿ ಮತ್ತು ಹಸಿ ನೆಲ್ಲಿಕಾಯಿಯಿಂದ ಕಷಾಯ ಸಹ ಮನೆಯಲ್ಲಿ ತಯಾರಿಸಿಕೊಳ್ಳ ಬಹುದು. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬೆಸ್ಟ್‌ ಈ ಕಷಾಯ.
undefined
ಹುಣ್ಣುಗಳನ್ನು ಗುಣಪಡಿಸಲು, ಸ್ನಾಯು ನೋವು, ಹಲವಾರು ಕಾರಣಗಳಿಂದ ಉಂಟಾಗುವ ಕೀಲು ನೋವುಗಳಿಗೆ ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಒಂದು ಚಿಟಿಕೆ ಅರಿಶಿನದೊಂದಿಗೆ ಆಮ್ಲಾ ಜ್ಯೂಸ್ ಮತ್ತು ಜೇನುತುಪ್ಪವನ್ನು ಕುಡಿಯುವುದರಿಂದ ನೋವು ಗುಣವಾಗಲು ಸಹಾಯವಾಗುತ್ತದೆ.
undefined
ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನುವುದರಿಂದ ಪ್ರಯೋಜನಗಳು ಹೆಚ್ಚು. ಆದರೂ ಇದರ ಜ್ಯೂಸ್ ಅಥವಾ ಪೌಡರ್ ಸೇವಿಸುವುದರಿಂದ ಸಹ ಬಹಳ ಉಪಯೋಗಗಳು ಆಗುತ್ತವೆ. ವಾಸ್ತವವಾಗಿ, 1 ಟೀಸ್ಪೂನ್ ಬೆಲ್ಲದ ಪುಡಿಯೊಂದಿಗೆ ಒಂದು ಲೋಟ ನೆಲ್ಲಿಕಾಯಿ ಜ್ಯೂಸ್ ದೇಹಕ್ಕೆ ಅಗತ್ಯವಿರುವ ಕಬ್ಬಿಣದ ಅಂಶ ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ನೈಸರ್ಗಿಕ ಬ್ಲಡ್ ಪ್ಯೂರಿಫೈಯರ್ ಇದು.ಇದರ ಪುಡಿ ಮತ್ತು ಜೇನುತುಪ್ಪವನ್ನು ಸಹ ಸೇವಿಸಬಹುದು.
undefined
ಇದಲ್ಲದೆ, ನೆಲ್ಲಿಕಾಯಿ ಜ್ಯೂಸ್ ಬಾಡಿಯನ್ನು ಹೈಡ್ರೇಟ್‌ ಮಾಡುತ್ತದೆ.
undefined
ನೆಲ್ಲಿಕಾಯಿಯಲ್ಲಿರುವ ಕ್ಯಾರೋಟಿನ್ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಪ್ರತಿದಿನ ಇದನ್ನು ಸೇವಿಸುವುದರಿಂದ ಕಣ್ಣಿನ ಪೊರೆ ಸಮಸ್ಯೆಗಳನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
undefined
ಹಸಿ ನೆಲ್ಲಿಕಾಯಿ ಮಾಲಿನ್ಯದ ಉಂಟಾಗುವ ತುರಿಕೆ ಮತ್ತು ಕಣ್ಣು ಕೆಂಪಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಕೂದಲ ಬುಡವನ್ನು ಬಲಪಡಿಸಲು, ನೆರೆಯುವುದನ್ನು ನಿಧಾನಗೊಳಿಸಲು, ತಲೆಹೊಟ್ಟು ನಿವಾರಿಸಲು ಹಾಗೂ ಕೂದಲಿಗೆ ನೈಸರ್ಗಿಕ ಹೊಳೆಪು ನೀಡಲು ನೆಲ್ಲಿಕಾಯಿಯ ಸಾರಗಳು ಸಹಾಯ ಮಾಡುತ್ತವೆ.
undefined
ಏಗ್ಟೆ ಹೇರ್ ಮತ್ತು ಸ್ಕಿನ್ ಐಷಾರಾಮಿ ಸಂಸ್ಥಾಪಕ ಮತ್ತು ತಜ್ಞ ರೂಪಾಲಿ ಶರ್ಮಾರ ಪ್ರಕಾರ, 'ಆಮ್ಲಾ ತನ್ನ ಗುಣಪಡಿಸುವ ಶಕ್ತಿಗಳಿಗೆ ಹೆಸರುವಾಸಿಯಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಡ್ರೈ ಕೂದಲನ್ನು ನಯಗೊಳಿಸುತ್ತದೆ, ತಲೆಹೊಟ್ಟಿಗೆಗೆ ಚಿಕಿತ್ಸೆ ನೀಡುತ್ತದೆ, ಬೇರಿನಿಂದ ಕೂದಲನ್ನು ಬಲಪಡಿಸುತ್ತದೆ ಮತ್ತು ನೈಸರ್ಗಿಕವಾಗಿ ಕೂದಲನ್ನು ಬಿಳಿಯಾಗುವುದನ್ನು ತಡೆಯುತ್ತದೆ. ನೆಲ್ಲಿಕಾಯಿಯನ್ನು ಸೇವಿಸುವುದರ ಜೊತೆಗೆ ಆಪ್ಲೈ ಮಾಡುವುದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ' ಎನ್ನುತ್ತಾರೆ.
undefined
ವಾಸ್ತವವಾಗಿ, ಗೋರಂಟಿ ಜೊತೆ ನೆಲ್ಲಿಕಾಯಿ ಪುಡಿಯನ್ನು ಹಚ್ಚುವುದು ಅಥವಾ ಎಣ್ಣೆಯಲ್ಲಿ ನೆಲ್ಲಿಕಾಯಿಗಳನ್ನು ಸೇರಿಸುವುದು ಕೂದಲನನ್ನು ಸುಧಾರಿಸಲು ಸಹಾಯ ಮಾಡುತ್ತದೆ.
undefined
click me!