ಸೋಂಕು ಎಂದರೆ ಬ್ಯಾಕ್ಟೀರಿಯಾ, ವೈರಸ್ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿಗಳಂತಹ ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ದೇಹದ ಮೇಲೆ ಉಂಟಾಗುವ ಖಾಯಿಲೆಗಳು. ಕೆಲವು ಆಹಾರಗಳು ಸೋಂಕು ತಡೆಗಟ್ಟಲು ಅಥವಾ ಹೋರಾಡಲು ಸಹಾಯ ಮಾಡುವ ವಿರೋಧಿ ಸೂಕ್ಷ್ಮಜೀವಿಯ ಗುಣಲಕ್ಷಣಗಳನ್ನು ಹೊಂದಿವೆ.
ಚರ್ಮದ ಸೋಂಕುಗಳ ವಿರುದ್ಧ ಹೋರಾಡಲು ಅಥವಾ ತಡೆಯಲು ಸಹಾಯ ಮಾಡುವ ವಿಭಿನ್ನ ಆಹಾರಗಳನ್ನು ಪಟ್ಟಿ ಮಾಡಿದ್ದೇವೆ. ಅವುಗಳನ್ನು ನೀವು ಟ್ರೈ ಮಾಡಬಹುದು. (ಗಮನಿಸಿ: ಎಲ್ಲಾ ಚರ್ಮದ ಸೋಂಕುಗಳಿಗೆ ನೈಸರ್ಗಿಕ ಪರಿಹಾರಗಳು ಕಾರ್ಯನಿರ್ವಹಿಸುವುದಿಲ್ಲ. ಕೆಲವರಿಗೆ ಔಷಧಿಗಳ ಅಗತ್ಯವಿರಬಹುದು ಮತ್ತು ಆದ್ದರಿಂದ ವೈದ್ಯರ ಸಲಹೆಯನ್ನು ಪಡೆಯುವುದು ಬಹಳ ಮುಖ್ಯ.)
ಎಲೆಕೋಸು: ಈ ಹಸಿರು ತರಕಾರಿಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಅದು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಡಿತ, ಗೀರುಗಳು, ಹುಣ್ಣುಗಳು ಮತ್ತು ಸೋಂಕಿತ ಗಾಯಗಳನ್ನು ಗುಣಪಡಿಸಲು ಎಲೆಕೋಸು ಎಲೆಗಳನ್ನು ಪೌಲ್ಟಿಸ್ಗಳಾಗಿ ವರ್ಷಗಳಿಂದ ಬಳಸಲಾಗುತ್ತದೆ.
ಕಾಲ್ಬೆರಳ ಉಗುರುಗಳಿಂದ ಕೀವು ತೆಗೆದುಹಾಕಲು ಮತ್ತು ಸೋಂಕನ್ನು ತೊಡೆದುಹಾಕಲು ಎಲೆಕೋಸು ಎಲೆಗಳನ್ನು ಬಳಸಬಹುದು. ಇದನ್ನು ಹಿಂದಿನಿಂದ ಬಳಸಿಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದೆ.
ತೆಂಗಿನ ಎಣ್ಣೆ: ಇದು ಕ್ಯಾಂಡಿಡಾ ಎಂಬ ಯೀಸ್ಟ್ನಿಂದ ಉಂಟಾಗುವ ರಿಂಗ್ವರ್ಮ್ ಮತ್ತು ಇತರ ಶಿಲೀಂಧ್ರಗಳ ಸೋಂಕಿಗೆ ಪರಿಣಾಮಕಾರಿ ಮನೆಮದ್ದು. ತೆಂಗಿನ ಎಣ್ಣೆಯಲ್ಲಿ ಹೆಚ್ಚಿನ ಮಟ್ಟದ ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವು ಚರ್ಮವನ್ನು ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ರಕ್ಷಿಸುತ್ತದೆ ಮತ್ತು ಸೇವಿಸಿದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ: ತಾಜಾ ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಅಮೈನೊ ಆಮ್ಲವಿದೆ, ಇದು ಆಂಟಿಫಂಗಲ್, ಆಂಟಿವೈರಲ್ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಆಲಿಸಿನ್ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಹುದು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ತಾಜಾ ಬೆಳ್ಳುಳ್ಳಿಯನ್ನು ತಿನ್ನುವುದು ಜೀರ್ಣಾಂಗದಿಂದ ಯೀಸ್ಟ್, ಶಿಲೀಂಧ್ರ ಮತ್ತು ಹುಳುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಚರ್ಮದ ಸೋಂಕುಗಳಿಗೆ,ಶಿಲೀಂಧ್ರಗಳ ಸೋಂಕು ಮತ್ತು ಕಾರ್ನ್ಗಳಂತಹ ಸೋಂಕಿಗೆ ಬೆಳ್ಳುಳ್ಳಿ ಸುರಕ್ಷಿತ ಔಷಧವಾಗಿದೆ.
ಜೇನುತುಪ್ಪ: ಮೆಥಿಸಿಲಿನ್-ನಿರೋಧಕ ಸ್ಟ್ಯಾಫಿಲೋಕೊಕಸ್ ಔರೆಸ್ (ಎಮ್ಆರ್ಎಸ್ಎ) ಮತ್ತು ವ್ಯಾಂಕೊಮೈಸಿನ್-ನಿರೋಧಕ ಎಂಟರೊಕೊಕಿಸಿ (ವಿಆರ್ಇ) ನಂತಹ ಗಾಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾದ ಮೇಲೆ ಜೇನುತುಪ್ಪದ ಆಂಟಿ ಬ್ಯಾಕ್ಟೀರಿಯಲ್ ಪರಿಣಾಮವನ್ನು ಅಧ್ಯಯನಗಳು ತೋರಿಸಿವೆ.ಹುಳುಗಳ ಕಡಿತ ಮತ್ತು ಬಾವುಗಳಿಗೆ ಇದನ್ನು ಹಚ್ಚಬಹುದು ಎಂದು ಹೇಳಲಾಗುತ್ತದೆ. ಗಾಯಗಳ ಸೋಂಕು ನಿವಾರಿಸಲು ನೀವು ಬೆಳ್ಳುಳ್ಳಿಯನ್ನು ಶುಂಠಿಯೊಂದಿಗೆ ಬೆರೆಸಬಹುದು.
ಅರಿಶಿನ: ಈ ಸಾಮಾನ್ಯ ಅಡುಗೆ ವಸ್ತುವು ಮೊಡವೆಗಳು, ಬ್ರೇಕ್ ಔಟ್ಗಳು, ಎಸ್ಜಿಮಾ ಮತ್ತು ಅಟೊಪಿಕ್ ಡರ್ಮಟೈಟಿಸ್ ಸೇರಿದಂತೆ ವಿವಿಧ ರೀತಿಯ ಚರ್ಮದ ಪರಿಸ್ಥಿತಿಗಳಿಗೆ ಅತ್ಯುತ್ತಮವಾದ ನೈಸರ್ಗಿಕ ಪರಿಹಾರವಾಗಿದೆ
ಅರಿಶಿನ ಉರಿಯೂತ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಉತ್ತಮ ಪರಿಹಾರವಾಗಿದೆ. ಕಡಿತ ಮತ್ತು ಸುಟ್ಟಗಾಯಗಳ ಸೋಂಕುನಿವಾರಕಗೊಳಿಸಲು ಅರಿಶಿನವನ್ನು ಸೇವಿಸಬಹುದು ಅಥವಾ ಸಮಸ್ಯೆಯಾದ ಜಾಗದ ಮೇಲೆ ಲೇಪಿಸಬಹುದು.