ನೆನಪಿನ ಶಕ್ತಿ ಕಡಿಮೆ ಆಗಿದ್ಯಾ? ಯೋಚನೆ ಬಿಡಿ ಇವುಗಳನ್ನು ಸೇವಿಸಿ

First Published Oct 17, 2021, 10:39 PM IST

ವಯಸ್ಸಾದಂತೆ ನೆನಪಿನ ಶಕ್ತಿ (memory power) ಕಡಿಮೆ ಆಗೋದು ಸಾಮಾನ್ಯ. ಆದರೆ ಅದು ಬೇಗನೆ ಆರಂಭವಾದರೆ ತುಂಬಾನೆ ಕಷ್ಟ. ಮರೆಗುಳಿತನವನ್ನು ಹೋಗಲಾಡಿಸಿ ನೆನಪಿನ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಮೆಮೊರಿ ಪವರ್ ಜಾಸ್ತಿ ಮಾಡಬಹುದಾಗಿದೆ.

ಅನೇಕರು ನೆನಪಿನ ಶಕ್ತಿ ಹೆಚ್ಚಿಸಲು ನಾನಾ ಸರ್ಕಸ್ ಮಾಡುತ್ತಾರೆ. ಇನ್ನು ಕೆಲವರು ಔಷಧಿಗಳ (medicine) ಮೊರೆ ಹೋಗುತ್ತಾರೆ. ಆದರೆ ಕೆಲವರಲ್ಲಿ ನೆನಪಿನ ಶಕ್ತಿ ಹೆಚ್ಚಿದ್ದರೆ ಇನ್ನು ಕೆಲವರಲ್ಲಿ ಮರೆವಿನ ಸಮಸ್ಯೆ ಕಾಡುತ್ತಿರುತ್ತದೆ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರ ಏನು? 

ಈ ಮರೆಗುಳಿತನವನ್ನು (memory loss) ಹೋಗಲಾಡಿಸಿ ನೆನಪಿನ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು, ಅದು ಹೇಗೆ ಗೊತ್ತಾ? ಔಷಧಿಗಳಿಂದ ಖಂಡಿತಾ ಅಲ್ಲ,. ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಮೆಮೊರಿ ಪವರ್ ಜಾಸ್ತಿಮಾಡಬಹುದಾಗಿದೆ. ಅಂತಹ ಆಹಾರಗಳು ಯಾವುವು ನೋಡೋಣ. 

ಕಾಳುಗಳು (sprouts) : ಮೊಳಕೆ ಬಂದ ಕಾಳುಗಳನ್ನು ತಿನ್ನುವುದರಿಂದ ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕಾಳುಗಳನ್ನು ಸೇವಿಸುದರಿಂದ ವಿಟಮಿನ್ ಇ ಸಿಗುತ್ತದೆ. ಆದುದರಿಂದ ಹೆಸರು, ಕಡ್ಲೆ ಮೊದಲಾದ ಕಾಳುಗಳನ್ನು ಮೊಳಕೆ ಬರೆಸಿ ಪ್ರತಿನಿತ್ಯ ಸೇವಿಸಿ. ಇದರಿಂದ ಮೆಮೊರಿ ಪವರ್ ಹೆಚ್ಚುತ್ತೆ. 

ಅವಕಾಡೊ (Avacado): ಆವಕಾಡೋಗಳು  ಹೆಚ್ಚಿನ ಜನ ಇಷ್ಟಪಟ್ಟು ಸೇವಿಸುವ ಹಣ್ಣಾಗಿದೆ. ಈ ಹಣ್ಣು ಮೆದುಳಿಗೆ ರಕ್ತ ಪೂರೈಕೆ ಮಾಡುತ್ತದೆ ಮತ್ತು ಆಮ್ಲಜನಕ ನೀಡುತ್ತದೆ. ಜೊತೆಗೆ ಮೆಮೊರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಬೆಣ್ಣೆ ಹಣ್ಣು ಅಥವಾ ಬಟರ್ ಫ್ರುಟ್ ಎಂದು ಸಹ ಕರೆಯಲಾಗುತ್ತದೆ. ಇದು ಆರೋಗ್ಯಕ್ಕೂ ಅತ್ಯುತ್ತಮ ಹಣ್ಣು. 

ವಾಲ್ನಟ್ (walnuts) : ವಾಲ್ನಟ್ಸ್ಳನ್ನು ಸೇವಿಸುದರಿಂದ ಡಿಎಚ್ಎ, ಒಮೆಗಾ-3 ಕೊಬ್ಬಿನಾಮ್ಲಗಳು ಸಿಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ.  ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಿ ಯಾವುದೇ ಅರಿವಿನ ಅಥವಾ ದೀರ್ಘಕಾಲದ ಕಾಯಿಲೆಗಳನ್ನು ದೂರ ಮಾಡಲು ಇದು ಸಹಕಾರಿ. 

ಸೊಪ್ಪುಗಳು (green vegetables) : ಪೋಲೆಟ್, ಕಬ್ಬಿಣ, ಕಾಲ್ಸಿಯಂ ಮತ್ತು ಮಿಟಮಿನ್ ಇ ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ಸೊಪ್ಪು ಆಹಾರ ಸೇವನೆ ಆರೋಗ್ಯಕ್ಕೂ ಉತ್ತಮವಾಗಿದೆ. ಪಾಲಕ್, ದಂಟು ಸೊಪ್ಪು, ಬಸಳೆ, ನುಗ್ಗೆ ಸೊಪ್ಪು, ಸಬ್ಸಿಗೆ ಸೊಪ್ಪು ಹೀಗೆ ಎಲ್ಲಾ ರೀತಿಯ ಸೊಪ್ಪು ತರಕಾರಿಗಳನ್ನು ಆಹಾರದಲ್ಲಿ ಸೇವಿಸಿ. 
 

ಹಣ್ಣುಗಳು (fruits) : ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಹಣ್ಣುಗಳ ಸೇವನೆ ಉತ್ತಮ. ಆರೋಗ್ಯ ವೃದ್ಧಿಗೂ ಇದರಿಂದ ಪ್ರಯೋಜನವಿದೆ. ಪ್ರತಿದಿನ ಒಂದು ಬೌಲ್ ನಷ್ಟು ವಿವಿಧ ರೀತಿಯ ಹಣ್ಣುಗಳನ್ನು ಸೇವಿಸಿ. ಆದರೆ ಮಿಕ್ಸ್ ಮಾಡಿ ಸೇವಿಸಬೇಡಿ. ಒಂದು ಬಾರಿಗೆ ಒಂದು ಹಣ್ಣು ಸೇವಿಸಲು ಪ್ರಯತ್ನಿಸಿ. ಇದು ಮೆಮೊರಿ ಪವರ್ ಹೆಚ್ಚಲು ಸಹಾಯ ಮಾಡುತ್ತೆ. 

ಪರೀಕ್ಷೆ ಸಮಯದಲ್ಲಿ ನೆನಪಿನ ಶಕ್ತಿ ಚೆನ್ನಾಗಿರಬೇಕೆಂದರೆ ನಿದ್ರೆ ಕೂಡ ಅವಶ್ಯಕ, ಸರಿಯಾಗಿ ನಿದ್ರೆ ಮಾಡಿ ಓದುತ್ತಾ ನಂತರ ಪರೀಕ್ಷೆ ಬರೆದರೆ (exam) ನೆನಪಿನಲ್ಲಿ ಉಳಿಯುತ್ತದೆ. ನಿದ್ರೆ ಇಲ್ಲದೆ ಇದ್ದರೆ ಓದಿದ್ದು ನೆನಪುಳಿಯುವುದಿಲ್ಲ. ಇದರ ಜೊತೆಗೆ ಸರಿಯಾದ ಆಹಾರ ಕ್ರಮವನ್ನು ಮೈಗೂಡಿಸಿಕೊಂಡಿರಬೇಕು. 

ಇತ್ತೀಚಿನ ದಿನಗಳಲ್ಲಿ ಹಿರಿಯರಿಗೆ ಮಾತ್ರವಲ್ಲ ಅನೇಕ ಜನರಲ್ಲಿ ಮರೆವಿನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅಂತಹ ಸಮಸ್ಯೆಗಳನ್ನು ಸರಿ ಪಡಿಸಲು ಸರಿಯಾದ ಮಾರ್ಗಗಳಿವೆ. ಹೆಚ್ಚಾಗಿ ಸೊಪ್ಪು ತರಕಾರಿ, ಬೀಜಗಳು, ಹಣ್ಣುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿದರೆ ಒಳಿತು.

click me!