ನೀವು ನಿಯಂತ್ರಿತ ಪ್ರಮಾಣದ ಆಲ್ಕೋಹಾಲ್ ಮತ್ತು ಕೆಲವೊಮ್ಮೆ ಆಲ್ಕೋಹಾಲ್ ಸೇವಿಸಿದರೆ, ಅದು ಆರೋಗ್ಯದ (Health) ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ. ಆದರೆ ಹೆಚ್ಚಾಗಿ ಸೇವನೆ ಮಾಡಿದರೆ ಇದರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಕೆಲವೊಂದು ಅಹಾರ ಸೇವಿಸಿದರೆ ಪರಿಣಾಮ ತುಂಬಾನೆ ಕೆಟ್ಟದಾಗಿರುತ್ತದೆ.
ಆಗಾಗ್ಗೆ ಜನರು ಸಂಜೆಯ ಪಾರ್ಟಿಗಳಲ್ಲಿ ಕುಡಿದ ನಂತರ ಊಟ ವನ್ನು ಸೇವಿಸುತ್ತಾರೆ. ರಾತ್ರಿ ಮಲಗುವ ಮುನ್ನ ಹಲವರು ಹಾಲು (drink milk) ಕೂಡ ಕುಡಿಯುತ್ತಾರೆ. ಮದ್ಯ ಕುಡಿದ ನಂತರ ತಪ್ಪಾಗಿ ಹಾಲು ಕುಡಿಯಬಾರದು. ಮದ್ಯ ಕುಡಿದ ಬಳಿಕ ಹಾಲು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.
ದೇಹದಲ್ಲಿ ಜೀರ್ಣಕಾರಿ(DIgesting) ಕಿಣ್ವಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವು ಏನನ್ನಾದರೂ ಸೇವಿಸಿದಾಗಲೆಲ್ಲಾ, ಜೀರ್ಣಕಾರಿ ಕಿಣ್ವಗಳು ಆಹಾರದೊಂದಿಗೆ ಅದನ್ನು ಜೀರ್ಣಿಸಿಕೊಳ್ಳಲು ಮತ್ತು ಪೋಷಿಸಲು ನಾವು ಸಹಾಯ ಮಾಡುತ್ತವೆ. ಆದರೆ ಆಲ್ಕೋಹಾಲ್ ಇದಕ್ಕೆ ಮಾರಕವಾಗಿದೆ.
ಆಲ್ಕೋಹಾಲ್ ಕುಡಿಯುವುದರಿಂದ ಆ ಜೀರ್ಣಕಾರಿ ಕಿಣ್ವಗಳಿಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಆಲ್ಕೋಹಾಲ್ ನಂತರ ಹಾಲು ಕುಡಿದರೆ ಹಾಲಿನಲ್ಲಿರುವ ಪೋಷಕಾಂಶಗಳ (nutrients) ಪೂರ್ಣ ಪ್ರಯೋಜನ ಸಿಗುವುದಿಲ್ಲ. ಇದರಿಂದ ಹೊಟ್ಟೆಯ ಸಮಸ್ಯೆ ಕಾಡಬಹುದು.
ಆಲ್ಕೋಹಾಲ್ ಹೊಟ್ಟೆಯಲ್ಲಿರುವ ಈ ಜೀರ್ಣ ಕೋಶಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಆಹಾರದಲ್ಲಿ ಇರುವ ಪೋಷಕಾಂಶಗಳು ಕೂಡ ನಾಶವಾಗಿ ಆರೋಗ್ಯಕ್ಕೆ ನಷ್ಟವಾಗುತ್ತದೆ. ಇದರಿಂದ ಸಾಲು ಸಾಲು ಆರೋಗ್ಯ ಸಮಸ್ಯೆಗಳು (Health issues) ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.
ಇನ್ನು ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಿದ್ದಾಗ, ಇತರ ಅನೇಕ ಸಮಸ್ಯೆಗಳು ಸ್ವಯಂಚಾಲಿತವಾಗಿ ಆರಂಭವಾಗುತ್ತವೆ. ಮದ್ಯಪಾನದಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯೂ ಉಂಟಾಗುತ್ತದೆ. ಇದು ನಂತರ ಗ್ಯಾಸ್ಟ್ರಿಕ್ ಅಥವಾ ಕರುಳಿನ ಹುಣ್ಣುಗಳನ್ನು ರೂಪಿಸಬಹುದು.
milk
ನಿಮಗೆ ಮಧುಮೇಹವಿದ್ದರೆ, ಅದು ನಿಮಗೆ ತುಂಬಾ ಅಪಾಯಕಾರಿ. ಹಾಲಿನಲ್ಲಿ L-tryptophan ಅಮೈನೋ ಆಮ್ಲಗಳು (amino acid) ಇವೆ. ಇದು ದೇಹವನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮತ್ತೊಂದೆಡೆ, ಆಲ್ಕೋಹಾಲ್ ನಿದ್ರೆಯನ್ನು ಹಾಳುಮಾಡುತ್ತದೆ, ಇದು ಒತ್ತಡಕ್ಕೂ ಕಾರಣವಾಗಬಹುದು. ಆದ್ದರಿಂದ ಮದ್ಯಪಾನವನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಆಲ್ಕೋಹಾಲ್ ನಂತರ ಹಾಲನ್ನು ಸೇವಿಸದಿರುವುದು ಉತ್ತಮ. ಇದರಿಂದ ಅನಾರೋಗ್ಯ ಉಂಟಾಗುವುದು ಸಹ ತಪ್ಪುತ್ತದೆ.