ಹೃದಯ ಆರೋಗ್ಯದಿಂದಿರಲು ಕಡಲೆಕಾಯಿ ಸೇರಿ ಈ ಆಹಾರ ಸೇವಿಸಿ

First Published Sep 10, 2021, 1:22 PM IST

ಹೃದಯ ನಮ್ಮ ದೇಹದ ಅತ್ಯಂತ ಪ್ರಮುಖ ಭಾಗವಾಗಿದೆ. ಆರೋಗ್ಯಕರ ದೇಹದ ರಹಸ್ಯ ಆರೋಗ್ಯಕರ ಹೃದಯ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರವು ಹೆಚ್ಚು ಹೃದ್ರೋಗಗಳಿಗೆ ಕಾರಣವಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವಾರಿವೆ. 

ಹೌದು, ನೀವು ನಿಮ್ಮ ಹೃದಯದ ಬಗ್ಗೆ ಕಾಳಜಿ ವಹಿಸಲು ಬಯಸಿದರೆ,  ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಹೃದಯವನ್ನು ರಕ್ಷಿಸಬಹುದು. ಇಲ್ಲಿ, ಹೃದಯದ ಸಮಸ್ಯೆ ತಪ್ಪಿಸಲು ದಿನಚರಿಯಲ್ಲಿ ನೀವು ಸೇರಿಸುವ 7 ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳನ್ನು ಪ್ರತಿದಿನ ಸೇವಿಸಿ ಉತ್ತಮ ಹೃದಯದ ಅರೋಗ್ಯ ಕಾಪಾಡಿ. 

ಕಡಲೆಕಾಯಿ: ಶಕ್ತಿ, ಪ್ರೋಟೀನ್ ಮತ್ತು ಉತ್ತಮ ಕೊಬ್ಬುಗಳನ್ನು ಹೊಂದುವುದರ ಜೊತೆಗೆ, ಕಡಲೆಕಾಯಿಯನ್ನು ಹೃದಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಊಟದ ನಂತರ ಕಡಲೆಕಾಯಿ ತಿನ್ನುವುದರಿಂದ ಹೃದಯ ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೆರ್ರಿ : ಬ್ಲೂಬೆರಿಗಳು ಮತ್ತು ಕ್ರ್ಯಾನ್ ಬೆರಿಗಳಂತಹ ಬೆರ್ರಿಗಳು ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮತ್ತು ಹೃದಯ ಸಮಸ್ಯೆಗಳು ಸೇರಿದಂತೆ ಅನೇಕ ರೋಗಗಳನ್ನು ತಡೆಯುತ್ತವೆ ಎಂದು ತಿಳಿದುಬಂದಿದೆ. ವೈದ್ಯರ ಪ್ರಕಾರ, ಕ್ರ್ಯಾನ್ಬೆರಿಗಳನ್ನು ಅತ್ಯುತ್ತಮ ಆರೋಗ್ಯ ವರ್ಧಕ ಪಾಲಿಫಿನಾಲ್ ಗಳು (ಉತ್ಕರ್ಷಣ ನಿರೋಧಕಗಳು) ಎಂದು ಪರಿಗಣಿಸಲಾಗಿದೆ.

ಕಿತ್ತಳೆ: ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅವು  ರೋಗನಿರೋಧಕತೆಗೆ ಪ್ರಯೋಜನಕಾರಿ. ವಿಶೇಷವಾಗಿ ಕಿತ್ತಳೆಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ನಮ್ಮ ಹೃದಯವು ಸಾಮಾನ್ಯವಾಗಿ ಕೆಲಸ ಮಾಡಲು ಸಹಾಯ ಮಾಡುವ ಎಲೆಕ್ಟ್ರೋಲೈಟ್ ಆಗಿದೆ. ಸಿಟ್ರಸ್ ಹಣ್ಣುಗಳ ಸೇವನೆಯಿಂದ ಬೊಜ್ಜು ಸಂಬಂಧಿ ಕಾಯಿಲೆಗಳು ಮತ್ತು ಹೃದ್ರೋಗಗಳನ್ನು ತಡೆಯಲು ನೆರವಾಗುತ್ತದೆ.

ಕಲ್ಲಂಗಡಿ: ಕಲ್ಲಂಗಡಿ ಹಣ್ಣು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಅಮೆರಿಕದ ಅಧ್ಯಯನವು ಕಂಡುಹಿಡಿದಿದೆ. ಇದು ಹಾನಿಕಾರಕ ಕೊಲೆಸ್ಟ್ರಾಲ್ ರೂಪುಗೊಳ್ಳುವುದನ್ನು ತಡೆಯುತ್ತದೆ. ಕಲ್ಲಂಗಡಿ ಎಲ್ ಡಿಎಲ್ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಅರ್ಧದಷ್ಟು ಮಾಡುತ್ತದೆ, ಇದು ಅಪಧಮನಿಗಳು ಮತ್ತು ಹೃದ್ರೋಗಗಳನ್ನು ತಡೆಯುತ್ತದೆ.

ಓಟ್ಸ್: ಓಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಪಧಮನಿಗಳಲ್ಲಿ ಕೊಬ್ಬಿನ ಪಟ್ಟೆಗಳು ರೂಪುಗೊಳ್ಳುವುದನ್ನು ತಡೆಯುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಆದುದರಿಂದ ಉಪಾಹಾರದಲ್ಲಿ ದಿನದಲ್ಲಿ ಒಂದು ಬಾರಿ ಓಟ್ಸ್ ಸೇವನೆ ಮಾಡುವುದು ಉತ್ತಮ. 

ಎಳನೀರು: ಎಳನೀರು ಹೃದಯಕ್ಕೆ ಬಹಳ ಮುಖ್ಯ ಮತ್ತು ನಮ್ಮನ್ನು ಹೈಡ್ರೇಟ್ ಆಗಿ ಇರಿಸುವುದು. ನಿರ್ಜಲೀಕರಣವು  ಹೃದಯವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಸಕ್ಕರೆ ರಹಿತ ಹಣ್ಣಿನ ರಸ, ಎಳನೀರು, ನಿಂಬೆ ಪಾನಕ, ತರಕಾರಿ ರಸ, ಮಜ್ಜಿಗೆ ಮುಂತಾದ ಕ್ಯಾಲೋರಿ ರಹಿತ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ  ಸ್ನಾಯುಗಳು ಬಹಳ ಸುಲಭವಾಗಿ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.

ಮೀನು: ಸಾಲ್ಮನ್, ಮ್ಯಾಕೆರೆಲ್, ಟ್ರೌಟ್, ಸಾರ್ಡಿನ್ ಮತ್ತು ಇತರ ಮೀನುಗಳಲ್ಲಿ ಹೆಚ್ಚಿನ ಒಮೆಗಾ 3 ಕೊಬ್ಬಿನಾಮ್ಲಗಳಿವೆ, ಅವು ಹೃದಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿ ಅಲ್ಲದೆ ಇದ್ದರೂ, ಇದನ್ನು ನಿಯಮಿತವಾಗಿ ಸೇವಿಸುತ್ತಿರಿ. ಇದರಿಂದ ಹೃದಯದ ಉತ್ತಮವಾಗಿರುತ್ತದೆ. ಜೊತೆಗೆ ಅರೋಗ್ಯವೂ ಉತ್ತಮವಾಗಿರುತ್ತದೆ. 

click me!