ಲೈಂಗಿಕ ಆಸಕ್ತಿ ಹೆಚ್ಚಿಸುವ ನುಗ್ಗೆ ಹೂವು ಆರೋಗ್ಯಕ್ಕೂ ಬೆಸ್ಟು

Suvarna News   | Asianet News
Published : Aug 28, 2021, 01:37 PM ISTUpdated : Aug 28, 2021, 02:18 PM IST

ನುಗ್ಗೆಕಾಯಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿ. ಸಾಮಾನ್ಯವಾಗಿ ನುಗ್ಗೆಕಾಯಿಯನ್ನು ಸಾಂಬಾರ್, ಪಲ್ಯ ಮಾಡಲು ಬಳಸಲಾಗುತ್ತದೆ. ನುಗ್ಗೆ ಸೊಪ್ಪನ್ನು ಕೂಡಾ ಸಾಂಬಾರ್, ಪಲ್ಯಗಳಲ್ಲಿ ಬಳಸುತ್ತಾರೆ. ಆದರೆ, ಹೂವುಗಳನ್ನು ಬಳಸುವುದು ಕಡಿಮೆ. ಹಾಗೆ ನೋಡುವುದಾದರೆ ನುಗ್ಗೆಕಾಯಿ, ನುಗ್ಗೆ ಸೊಪ್ಪು ಆರೋಗ್ಯಕ್ಕೆ  ಎಷ್ಟು ಒಳಿತೋ, ನುಗ್ಗೆ ಹೂವೂ ಅಷ್ಟೇ ಸಹಕಾರಿ.  ನುಗ್ಗೆ ಹೂವಿನಲ್ಲಿ  ಪೋಷಕಾಂಶಗಳು ಹೇರಳವಾಗಿ ಇರುತ್ತವೆ. 

PREV
111
ಲೈಂಗಿಕ ಆಸಕ್ತಿ  ಹೆಚ್ಚಿಸುವ ನುಗ್ಗೆ ಹೂವು ಆರೋಗ್ಯಕ್ಕೂ ಬೆಸ್ಟು

ನುಗ್ಗೆ ಹೂವಿನ ಆರೋಗ್ಯ ಪ್ರಯೋಜನಗಳಿವು
ನುಗ್ಗೆ ಹೂವು ದೇಹವನ್ನು ಸೋಂಕಿನಿಂದ ರಕ್ಷಿಸುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದರ ಹೊರತಾಗಿ, ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ಸ್ ಹೇರಳವಾಗಿವೆ. ಇದನ್ನು ಆರೋಗ್ಯಕ್ಕೆ ಬಹಳ ಉಪಯುಕ್ತ. ನುಗ್ಗೆ ಹೂಗಳನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದರಿಂದ ಮತ್ತೇನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೀವೂ ನೋಡಬಹುದು... 
 

211

ನುಗ್ಗೆ ಹೂವಿನಲ್ಲಿ ಅನೇಕ ರೀತಿಯ ವಿಟಮಿನ್ಸ್ ಕಂಡು ಬರುತ್ತವೆ. ಅವು ಯಾವುವೆಂದರೆ...   
ವಿಟಮಿನ್  ಎ , ವಿಟಮಿನ್ ಬಿ1, ವಿಟಮಿನ್ ಬಿ2 ಅಥವಾ ರಾಯಿಬೋಫ್ಲಾವಿನ್, ವಿಟಮಿನ್ ಬಿ3 ಅಥವಾ ನಿಯಾಸಿನ್, ವಿಟಮಿನ್ ಬಿ6, ಫೋಲೇಟ್ ಮತ್ತು ಆಸ್ಕೋರ್ಬಿಕ್ ಆಸಿಡ್, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಇವುಗಳು ಹೇರಳವಾಗಿ ಕಂಡು ಬರುತ್ತದೆ.

311

ಡ್ರಮ್ ಸ್ಟಿಕ್ ಹೂಗಳನ್ನು ಸೇವಿಸುವುದರಿಂದ, ದೇಹವು ಈ ಪ್ರಯೋಜನಗಳನ್ನು ಪಡೆಯುತ್ತೆ... 
ಚರ್ಮಕ್ಕೆ ಪ್ರಯೋಜನಕಾರಿ : 
ನುಗ್ಗೆ ಹೂವುಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾಗಿ ಈ  ಹೂವುಗಳನ್ನು ನಿತ್ಯ ಸೇವಿಸಬೇಕು. ಡ್ರಮ್ ಸ್ಟಿಕ್ ಹೂವುಗಳು ಚರ್ಮದ ಸೋಂಕು ನಿವಾರಣೆಗೆ ಪ್ರಯೋಜನಕಾರಿ. ಇದನ್ನು ಬೇರೆ ಬೇರೆ ರೀತಿಯ ಖಾದ್ಯಗಳಾಗಿ ತಯಾರಿಸಿ ಸೇವಿಸಬಹುದು. ಚರ್ಮದ ಪೋಷಣೆಗೆ ಇದು ನೆರವಾಗುತ್ತದೆ. 

411

ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು :
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ನುಗ್ಗೆ ಹೂವುಗಳು ತುಂಬಾ ಪ್ರಯೋಜನಕಾರಿ. ನುಗ್ಗೆ ಹೂವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಜೊತೆಗೆ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ. ಇದನ್ನು ದಾಲ್ ಜೊತೆ ಸೇರಿಸಿ ಪಲ್ಯ ಅಥವಾ ಸಾರು ಮಾಡಿಕೊಂಡು ರೊಟ್ಟಿ ಚಪಾತಿ ಜೊತೆ ಸೇವನೆ ಮಾಡಬಹುದು. 

511

ಮೂಳೆಗಳಿಗೆ ಪ್ರಯೋಜನಕಾರಿ : 
ನುಗ್ಗೆ ಹೂವುಗಳು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಂಧಿವಾತದ ಸಮಸ್ಯೆ ಇದ್ದರೆ, ಅದರ ಹೂವುಗಳನ್ನು ಸೇವಿಸಬೇಕು. ಇದನ್ನು ವಿವಿಧ ರೂಪದಲ್ಲಿ ಸವಿಯಬಹುದು. ಕೇವಲ ಚಹಾದ ರೂಪದಲ್ಲಿ ಮಾತ್ರ ಇದನ್ನು ಸೇವಿಸಬೇಕ ಎಂದೇನಿಲ್ಲ. ಸಬ್ಜಿ ಸಹ ಮಾಡಿ ರುಚಿಕರವಾಗಿ ಸವಿಯಬಹುದು. ಇದರಿಂದ ಮೂಳೆಗಳು ಸ್ಟ್ರಾಂಗ್ ಆಗೋದು ಖಂಡಿತಾ. 

611

ರಕ್ತದ ಒತ್ತಡ ನಿವಾರಣೆ
ಈ ಹೂಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶ ಇರುವ ಕಾರಣ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ. ಮಧುಮೇಹ ಸಮಸ್ಯೆ ಇರುವವರು ಕೂಡ ಇದನ್ನು ಅಚ್ಚುಕಟ್ಟಾಗಿ ಸೇವಿಸಬಹುದು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಸಾಮಾನ್ಯ ಶೀತ ಮತ್ತು ಸೋಂಕಿನ ಸಮಸ್ಯೆಯೂ ದೂರವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯದು. ಇದರಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನೀಮಿಯ ಇರುವವರಿಗೆ ಅತ್ಯಗತ್ಯ.

711

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : 
ನುಗ್ಗೆಕಾಯಿ ಹೂವುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಗಂಟಲು, ಎದೆ ಮತ್ತು ಚರ್ಮದ ಆಗಾಗ್ಗೆ ಸೋಂಕುಗಳಿಂದ ತಡೆಯುತ್ತದೆ. ನುಗ್ಗೆಕಾಯಿ ಏಷ್ಯಾದ ಅನೇಕ ಭಾಗಗಳಲ್ಲಿ ಕಂಡು ಬರುವ ಸಾಮಾನ್ಯ ತರಕಾರಿ. ಈ ತರಕಾರಿಗೆ ಹೆಚ್ಚು ಮೌಲ್ಯವಿದೆ, ಮುಖ್ಯವಾಗಿ ಅದರ ಬ್ಯಾಕ್ಟೀರಿಯಾ ವಿರೋಧಿ, ಔಷಧೀಯ ಮತ್ತು ಶುದ್ಧೀಕರಣ ಗುಣಲಕ್ಷಣಗಳಿಗೆ. ವಾಸ್ತವವಾಗಿ ನುಗ್ಗೆಕಾಯಿ ಗಿಡದ ಬಹುತೇಕ ಪ್ರತಿಯೊಂದು ಭಾಗವೂ ಕೆಲವು ಚಿಕಿತ್ಸಕ ಮೌಲ್ಯವನ್ನು ಹೊಂದಿದೆ.
 

811

ತೂಕ ಕಡಿಮೆ ಮಾಡುತ್ತದೆ : 
ತೂಕವನ್ನು ಕಡಿಮೆ ಮಾಡಲು ನುಗ್ಗೆ ಹೂವನ್ನು ಸೇವಿಸಿ. ಇದರಲ್ಲಿ ಕೊಬ್ಬಿನ ಪ್ರಮಾಣ ಒಂಚೂರೂ ಇರುವುದಿಲ್ಲ. ಅಲ್ಲದೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಆದ್ದರಿಂದ ಇದರ ಸೇವನೆಯು ತೂಕವನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ ನುಗ್ಗೆ ಹೂವಿನ ಚಹಾ ಮಾಡಿ ಸೇವಿಸಬಹುದು. ಇದು ಉತ್ತಮ ಆರೋಗ್ಯ ನೀಡುವ ಜೊತೆಗೆ ತೂಕ ಇಳಿಕೆ ಮಾಡಲು ಸಹ ಸಹಾಯಕವಾಗಿದೆ. 

911

ಕಾಮೋತ್ತೆಜನಕ್ಕೆ ಸಹಕಾರಿ : 
ಆಯುರ್ವೇದ ಪ್ರಕಾರ ನುಗ್ಗೆಕಾಯಿಯು ಪ್ರಬಲ ಕಾಮೋತ್ತೇಜನಕ ಗುಣ ಹೊಂದಿದೆ. ನುಗ್ಗೆಕಾಯಿ ಹೂವಿನಲ್ಲಿ ಇರುವಂತಹ ಟೆರಿಗೊಸ್ಪರ್ಮಿನ್ ಎನ್ನುವ ಅಂಶವು ವೀರ್ಯ ಹಾಗೂ ಅದರ ಜೀವಿತಾವಧಿ ಹೆಚ್ಚಿಸುವುದು. ಇದೇ ಅಂಶವು ವೀರ್ಯದ ಚಲನಶೀಲತೆ ಹಾಗೂ ಸಂತಾನೋತ್ಪತ್ತಿ ವೃದ್ಧಿಸುವುದು. ನುಗ್ಗೆ ವಯಾಗ್ರದಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಸೆಕ್ಸ್ ಪವರ್ ಹೆಚ್ಚಿಸಲು ನುಗ್ಗೆ ಹೂವನ್ನು ಸೇವನೆ ಮಾಡಬಹುದು. 

1011

ನುಗ್ಗೆಕಾಯಿ ಹೂವುಗಳನ್ನು ಹಾಲಿನಲ್ಲಿ ಕುದಿಸಿ ತೆಗೆದುಕೊಂಡಾಗ ಅದು ಅದ್ಭುತ ಶಕ್ತಿವರ್ಧಕವಾಗಿದೆ ಮತ್ತು ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಜೇನುತುಪ್ಪ ಮತ್ತು ಒಂದು ಚಮಚ ಎಳನೀರಿನೊಂದಿಗೆ ಒಂದು ಟೀ ಚಮಚ ತಾಜಾ ನುಗ್ಗೆಕಾಯಿ ಎಲೆ ರಸವು ಅತಿಸಾರ, ಕೊಲೈಟಿಸ್ ಅಥವಾ ಕಾಮಾಲೆಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಔಷಧಿಯಾಗಿದೆ. 

1111

ದಕ್ಷಿಣ ಭಾರತದಲ್ಲಿ, ನುಗ್ಗೆಕಾಯಿ ಹೂವಿನಿಂದ ತಾಜಾ ಚಟ್ನಿಯನ್ನು ತಯಾರಿಸುತ್ತಾರೆ. ಮತ್ತು ಬೇಳೆಗಳು ಮತ್ತು ಸಾಂಬಾರ್ ಗೆ ಸೇರಿಸಲಾಗುತ್ತದೆ. ಅವುಗಳನ್ನು ಸುವಾಸನೆಯ ಮತ್ತು ಮಸಾಲೆಯುಕ್ತ ಗ್ರೇವಿಗಳಿಗೆ ಸೇರಿಸಬಹುದು. ನುಗ್ಗೆಕಾಯಿ ಹೂವುಗಳು ಅಥವಾ ನುಗ್ಗೆಕಾಯಿ ಎಲೆಗಳನ್ನು ದೋಸಾ/ ಅಡೈ ಅಥವಾ ಪರೋಟಾದಲ್ಲಿ ಸೇರಿಸುವುದು ತುಂಬಾ ಸಾಮಾನ್ಯ. ಇದು ದೇಹಕ್ಕೆ ಅಗತ್ಯವಿರುವ ಖನಿಜ ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ತಾಜಾ ಮತ್ತು ಬಾಡದ ಹೂವುಗಳನ್ನು ಆಯ್ಕೆ ಮಾಡಿ.

click me!

Recommended Stories