ಚಳಿಗಾಲ ಶುರುವಾಯಿತೆಂದರೆ ಆರೋಗ್ಯ ಸಮಸ್ಯೆ ಗಳು ಪ್ರಾರಂಭವಾಗುತ್ತದೆ . ಅದರಲ್ಲಿ ಸರ್ವೆ ಸಾಮಾನ್ಯ ವಾಗಿ ಶೀತ, ನೆಗಡಿ ,ಕೆಮ್ಮು ಶುರುವಾಗುತ್ತದೆ. ಆರಂಭದಲ್ಲೇ ಇದನ್ನು ಗುಣ ಪಡಿಸಲು ಔಷಧಿ ಗುಣವಿರುವ ದೊಡ್ಡಪತ್ರೆ ಸಹಾಯ ಮಾಡುತ್ತದೆ .
ಇದನ್ನು ಸಾಂಬಾರ ಬಳ್ಳಿ , ಕರ್ಪುರವಳ್ಳಿ ಅಂತಲೂ ಕರೆಯುತ್ತಾರೆ . ಇದರ ಎಲೆಯು ದಪ್ಪಗಿದ್ದು ಹೃದಯದ ಆಕಾರ ದಲ್ಲಿದ್ದು , ಒಂದು ರೀತಿಯ ಒಗರು ಮತ್ತು ಪರಿಮಳದಿಂದಿದೆ .ಇದರ ವೈಜಾನಿಕ ಹೆಸರು ಪ್ಲೆಕ್ಟ್ರಾತುಸ್ ಅಂಬೋಯಿನಿಕಸ್. ಇದರ ಮೂಲ ಪಶ್ಚಿಮ ಹಾಗೂ ದಕ್ಷಿಣ ಆಫ್ರಿಕಾ , ಭಾರತ ಅಂತಲೂ ಹೇಳುತ್ತಾರೆ .
ಇದನ್ನು ಮನೆ ಮದ್ದಾಗಿ ಆಡುಗೆಯಲ್ಲಿ ಬಳಸುತ್ತಾರೆ ಇದನ್ನು ಬೇರೇ ಬೇರೇ ಪ್ರಾಂತ್ಯಗಳಲ್ಲಿ ಬೇರೇ ಬೇರೇ ಹೆಸರು ಗಳಿಂದ ಕರೆಯುತ್ತಾರೆ . ಕ್ಯೂಬನ್ ಒರಿಗ್ಯಾನೋ , ಮೆಕ್ಸಿಕನ್ ಮಿಂಟ್ , ಇಂಡಿಯನ್ ಬೋರಾಗೆ , ಸ್ಪ್ಯಾನಿಷ್ ಥಂಯ್ಮ್ ಪಣೀಕೋರಾಕ್ ಅಂತಲೂ ಕರೆಯುತ್ತಾರೆ .
ನೀರಿನ ಅಂಶ ಹೆಚ್ಚು ಇರುವ ಈ ಗಿಡವನ್ನು ಮನೆಯ ಒಳಗೆ ಅಥವಾ ಹೊರಗೆ ಕುಂಡಗಳಲ್ಲಿ ಬೆಳೆಸಬಹುದು . ಇದಕ್ಕೆ ಹೆಚ್ಚು ನೀರಿನ ಹಾಗೂ ಬೆಳಕಿನ ಅವಶ್ಯಕತೆ ಇಲ್ಲ . ಇದನ್ನು ನಮ್ಮ ಆಹಾರದಲ್ಲಿ ಬಳಸುತ್ತಿದ್ದರೆ ಆರೋಗ್ಯ ವರ್ದಿಸುತ್ತದೆ .
ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಇಳಿಯುತ್ತದೆ. ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ.
ದೊಡ್ಡಪತ್ರೆ ಎಲೆಯಿಂದ ತಂಬುಳ್ಳಿ , ಚಟ್ನಿ ,ಬಜ್ಜಿ ,ಸಾರು , ಕಾಷಾಯ ಮಾಡಿ ಸೇವಿಸಬಹುದು. ಶೀತ, ನೆಗಡಿ ,ಕೆಮ್ಮು, ಕಫ ಇದ್ದರೆ ಇದರ ರಸ ಬಳಸುತ್ತಾರೆ .
ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಬಿದ್ದಾಗ ಆ ಜಾಗಕ್ಕೆ ಹಸಿಯಾಗಿ ಸಾಂಬ್ರಾಣಿ ಎಲೆಗಳನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.ಚರ್ಮದ ತುರಿಕೆಗೆ ದೊಡ್ಡಪತ್ರೆ ರಸ ಹಚ್ಚಿದರೆ ಗುಣವಾಗುತ್ತದೆ . ಇಂತಹ ಔಷಧೀಯ ಗುಣವಿರುವ ಗಿಡ ಮೂಲಿಕೆಗಳು ನಮ್ಮ ಮನೆಗಳಲ್ಲಿ ಬೆಳೆಸಿ ಉಪಯೋಗಿಸಿ ಆರೋಗ್ಯ ಕಾಪಾಡಿ ಕೊಳ್ಳಿ .
ಶುಂಠಿ, ಕಾಳುಮೆಣಸು ,ದೊಡ್ಡಪತ್ರೆ ,ಬೆಲ್ಲ ಇವೆಲ್ಲವನ್ನು ನೀರಿನ ಜೊತೆ ಬೆರೆಸಿ ಕುದಿಸಿ ಕಷಾಯ ಮಾಡಿ ಕುಡಿದರೆ ಕೆಮ್ಮು ಗಂಟಲು ಕೆರೆತ ಗುಣವಾಗುತ್ತದೆ.
ಚಿಕ್ಕಮಕ್ಕಳಿಗೆ ಶೀತ ಕಫ ವಾದರೆ ದೊಡ್ಡಪತ್ರೆಯ ಒಂದುಚಮಚ ರಸದ ಜೊತೆ ಜೇನು ತುಪ್ಪ ಬೆರೆಸಿಕೊಟ್ಟರೆ ವಾಸಿಯಾಗುತ್ತದೆ .
ಒಂದು ವಾರದವರೆಗೆ ದೊಡ್ಡಪತ್ರೆ ಎಲೆಯ ರಸವನ್ನು ಸೇವಿಸುವುದರಿಂದ ಹಳದಿ ರೋಗ ನಿವಾರಣೆಯಗುತ್ತದೆ.