ಮೊದಲು ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ (Diabetes), ಇದೀಗ ಹೆಚ್ಚಾಗಿ ಎಲ್ಲಾ ಜನರನ್ನು ಕಾಡುತ್ತಿರುವ ರೋಗವಾಗಿ ಬದಲಾಗಿದೆ. ಮಧುಮೇಹ ರೋಗಿಗಳಿಗೆ, ರಾತ್ರಿಯಲ್ಲಿ ಸಕ್ಕರೆ ಮಟ್ಟವು ನಾರ್ಮಲ್ ಆಗಿರೋದು ತುಂಬಾನೆ ಮುಖ್ಯವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಇದು 140 ಕ್ಕಿಂತ ಹೆಚ್ಚಿರಬಾರದು.
ಆದರೆ ರಾತ್ರಿಯಲ್ಲಿ ಕೆಟ್ಟ ಆಹಾರ ಪದ್ಧತಿ (bad food habits), ಅಥವಾ ಬೇಡವಾದ, ಸಕ್ಕರೆ ಹೆಚ್ಚಿರುವ ಆಹಾರ ಸೇವನೆ ಮಾಡಿದ್ರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಯಾವ ತಪ್ಪುಗಳನ್ನು ಮಾಡೋದ್ರಿಂದ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತೆ ಅನ್ನೋದನ್ನು ತಿಳಿಯೋಣ.
ನಿಮಗೆ ಶುಗರ್ (sugar) ಇದ್ರೆ, ರಾತ್ರಿ ಯಾವತ್ತೂ ಊಟವನ್ನು ತಡವಾಗಿ ಮಾಡಬಾರದು. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಬೇಗನೆ ಅಂದರೆ 8 ಗಂಟೆಗೆ ಊಟ ಮಾಡೋದನ್ನು ಅಭ್ಯಾಸ ಮಾಡಿಕೊಳ್ಳೋದು ಮುಖ್ಯ.
ರಾತ್ರಿಯಲ್ಲಿ ಕಾರ್ಬೋಹೈಡ್ರೇಟ್ ಗಳ (carbohydrates) ಅತಿಯಾದ ಸೇವನೆಯನ್ನು ಸಹ ತಪ್ಪಿಸಬೇಕು. ಅಂದ್ರೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸೋದು, ಡೈರಿ ಉತ್ಪನ್ನಗಳು, ತರಕಾರಿಗಳು ಧಾನ್ಯಗಳ ಸೇವನೆ ಮಾಡಬಾರದು.
ರಾತ್ರಿಯಲ್ಲಿ ಸಿಗರೇಟ್ (smoking) ಸೇದುವುದರಿಂದ ಸಕ್ಕರೆ ಮಟ್ಟವು ಆತಂಕಕಾರಿ ಮಟ್ಟಕ್ಕೆ ಹೆಚ್ಚಾಗುತ್ತದೆ. ಸ್ಮೋಕಿಂಗ್ ಮಾಡೋದು ಆರೋಗ್ಯಕ್ಕೂ ಒಳ್ಳೆಯದಲ್ಲ, ಹಾಗಾಗಿ ತಪ್ಪಿಯೂ ರಾತ್ರಿ ಹೊತ್ತು ಸ್ಮೋಕ್ ಮಾಡೋ ತಪ್ಪು ಮಾಡ್ಬೇಡಿ.
ರಾತ್ರಿ ಮಲಗುವ ಮೊದಲು ಕೆಫೀನ್ (caffeine) ಅನ್ನು ಹೆಚ್ಚು ಸೇವಿಸಬಾರದು. ಕೆಲವರಿಗೆ ರಾತ್ರಿ ಹೊತ್ತು ಕಾಫಿ ಕುಡಿಯುವ ಅಭ್ಯಾಸ ಇರುತ್ತೆ.. ಆದರೆ ಇದು ಮಧುಮೇಹ ರೋಗಿಗಳಿಗೆ ಮಾರಕವಾಗಿರುತ್ತೆ. ಹಾಗಾಗಿ ಇದನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಡಿ.
ರಾತ್ರಿ ಪದೇ ಪದೇ ಎದ್ದೇಳುವುದು ರಾತ್ರಿಯಲ್ಲಿ ಹೆಚ್ಚಿನ ಸಕ್ಕರೆ ಮಟ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಮನಸ್ಸನ್ನು ಫ್ರೀ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ಚೆನ್ನಾಗಿ ನಿದ್ರೆ ಮಾಡೋದಕ್ಕೆ ಸಾಧ್ಯ ಆಗುತ್ತೆ.