ಇದೇ ನೋಡಿ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು! ನಿರ್ಲಕ್ಷ್ಯ ಬೇಡ

Suvarna News   | Asianet News
Published : May 16, 2021, 01:07 PM ISTUpdated : May 16, 2021, 01:12 PM IST

ಕೋವಿಡ್-19 ವೈರಸ್ ನೊಂದಿಗೆ ಈಗ ಬ್ಲ್ಯಾಕ್ ಫಂಗಸ್ ಜತೆಗೆ ಕೂಡ ಹೋರಾಡುವಂತಹ ಪರಿಸ್ಥಿತಿಯು ವೈದ್ಯಕೀಯ ವಯಲಕ್ಕೆ ಬಂದಿದೆ. ಅದರಲ್ಲೂ ಭಾರತದಲ್ಲಿ ಇದರ ಸಮಸ್ಯೆಯು ದಿನೇ ದಿನೇ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಬ್ಲ್ಯಾಕ್ ಫಂಗಸ್ ನಿಂದ ತೊಂದರೆಗೆ ಒಳಗಾಗುತ್ತಲಿದ್ದಾರೆ.

PREV
110
ಇದೇ ನೋಡಿ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು! ನಿರ್ಲಕ್ಷ್ಯ ಬೇಡ

ಅದರಲ್ಲೂ ಇದು ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ದೊಡ್ಡ ಸವಾಲು. ಈಗಾಗಲೇ ಬ್ಲ್ಯಾಕ್ ಫಂಗಸ್ ಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೆಲವು ಜನರು ಪ್ರಾಣ ಕಳೆದುಕೊಂಡಿರುವುದು ಇದೆ. ವೈದ್ಯಕೀಯವಾಗಿ ಇದನ್ನು ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಇನ್ನಷ್ಟು ವಿವರ ತಿಳಿಯಲು ಈ ಲೇಖನ ಓದಿಕೊಳ್ಳಿ.

210

ಮ್ಯೂಕೋರ್ಮೈಕೋಸಿಸ್ ಎಂದರೇನು? ಇದು ಹೇಗೆ ಕೋವಿಡ್ ಗೆ ಸಂಬಂಧಿಸಿದೆ?: ಮ್ಯೂಕೋರ್ಮೈಕೋಸಿಸ್ ಈಗ ತುಂಬಾ ಗಂಭೀರ ಮತ್ತು ಅತೀ ದೊಡ್ಡ ಅಪಾಯ ಎಂದು ಪರಿಗಣಿಸಲಾಗಿದೆ. ಇದು ಕೋವಿಡ್-19ನಿಂದ ಚೇತರಿಸಿಕೊಂಡವರ ಚೇತರಿಕೆಗೆ ಸಮಸ್ಯೆಯಾಗುವುದು ಮಾತ್ರವಲ್ಲದೆ, ಸರಿಯಾಗಿ ಚಿಕಿತ್ಸೆ ಸಿಗದೆ ಇದ್ದರೆ ಆಗ ಪ್ರಾಣಕ್ಕೂ ಕುತ್ತು ಉಂಟು ಮಾಡಬಹುದು ಎಂದು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಹೇಳಿದೆ.
 
310

ಮ್ಯೂಕೋರ್ಮೈಕೋಸಿಸ್ ಎನ್ನುವ ಒಂದು ಗುಂಪಿನ ಶಿಲೀಂಧ್ರಗಳಿಂದ ಇದು ಬರುವುದು. ಇದು ಗಾಳಿಯಲ್ಲಿ ಹರಿದಾಡುತ್ತಲಿರುವುದು ಮತ್ತು ಈ ಗಾಳಿಯನ್ನು ಉಸಿರಾಡಿದ ವೇಳೆ ಅದು ಹೋಗಿ ರೋಗಿಯ ದೇಹ ಸೇರುವುದು.

410

ಇದು ಸೈನಸ್ ಕುಳಿಗಳು, ಶ್ವಾಸಕೋಶ ಮತ್ತು ಎದೆಯ ಕುಳಿಗಳಲ್ಲಿ ಹೋಗಿ ಸೇರಿಕೊಳ್ಳುವುದು. ಆದರೆ ಇದಕ್ಕೆ ಮತ್ತು ಕೋವಿಡ್ ಗೆ ಸಂಬಂಧವೇನು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಕೋವಿಡ್-19 ವೇಳೆ ತೆಗೆದುಕೊಳ್ಳುವಂತಹ ಸ್ಟಿರಾಯ್ಡ್ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಹೇಳಿರುವರು.

510

ಇದರ ಲಕ್ಷಣಗಳನ್ನು ತಿಳಿಯುವುದು ಹೇಗೆ?: ಶಿಲೀಂಧ್ರ ಸೋಂಕು ಹಬ್ಬಿದರೆ, ಆಗ ಮುಖದಲ್ಲಿ ಬದಲಾವಣೆಗಳು ಕಂಡುಬರುವುದು. ಕೆಲವೊಂದು ಸಲ ಇದು ಒಳಗಿನ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಲವೊಂದು ತೀವ್ರ ರೀತಿಯ ಲಕ್ಷಣಗಳು ಇದರಿಂದ ಕಂಡುಬರುವುದು.

610

ಅತಿಯಾದ ತಲೆನೋವು: ಶಿಲೀಂಧ್ರ ಸೋಂಕು ಬಂದರೆ ಅದು ಸೈನಸ್ ಕುಳಿಗಳು ಮತ್ತು ನರಗಳ ಮೇಲೆ ದಾಳಿ ಮಾಡುವುದು. ಇದರಿಂದಾಗಿ ಈ ಸಮಸ್ಯೆಗೆ ಒಳಗಾದವರಿಗೆ ತೀವ್ರ ಹಾಗೂ ನಿರಂತರ ತಲೆನೋವು ಕಾಡುವುದು.

710

ದೃಷ್ಟಿ ಮಂದವಾಗುವುದು: ಕಣ್ಣಿನ ದೃಷ್ಟಿಯಲ್ಲಿ ಆಗುವಂತಹ ಬದಲಾವಣೆಗಳನ್ನು ಕೂಡ ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು ಎಂದು ತಿಳಿಯಬಹುದು. ಶಿಲೀಂಧ್ರವು ಬೆಳೆದಂತೆ ಅದು ಬೆಳೆದು ಹರಡಲು ಆರಂಭಿಸುವುದು, ಇದರಿಂದ ಕಣ್ಣುಗಳ ದೃಷ್ಟಿ ಮೇಲೆ ಪರಿಣಾಮವಾಗುವುದು. ಕಣ್ಣುಗಳಲ್ಲಿ ಊತ, ದೃಷ್ಟಿ ಮಂದ ಮತ್ತು ಕಣ್ಣುಗಳು ಕೆಂಪಾಗುವುದನ್ನು ಕಾಣಬಹುದು.

810

ದವಡೆ ಮತ್ತು ಮುಖದ ಭಾಗಗಳಲ್ಲಿ ಊತ: ಊತ, ಮುಖದ ಎಲುಬುಗಳಲ್ಲಿ ನೋವು ಮತ್ತು ದವಡೆ ಭಾಗದಲ್ಲಿ ನೋವು ಕೂಡ ಇದರ ಲಕ್ಷಣಗಳು. ಊತದ ಜತೆಗೆ ಶಿಲೀಂಧ್ರ ಸೋಂಕಿನಿಂದ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುವುದು ಮತ್ತು ಇದು ಚರ್ಮದಲ್ಲಿ ಕೆಲವು ಸಮಸ್ಯೆಗಳನ್ನು ಉಂಟು ಮಾಡುವುದು.

910

ಮಾನಸಿಕ ಗೊಂದಲ: ಶಿಲೀಂಧ್ರವು ನರಗಳು ಹಾಗೂ ಮೆದುಳಿನ ಮೇಲೆ  ಕೂಡ ಪರಿಣಾಮ ಬೀರುವ ಪರಿಣಾಮವಾಗಿ, ಇದರ ಸೋಂಕಿಗೆ ಒಳಗಾದವರು ನೆನಪಿನ ಕೊರತೆ, ನರಗಳ ಅಸಾಮಾನ್ಯತೆಯಿಂದಾಗಿ ಗೊಂದಲ ಹಾಗೂ ಮಾನಸಿಕ ಸಮಸ್ಯೆಗಳನ್ನು ಅನುಭವಿಸುವರು.

1010

ಮೂಗಿನ ಸೇತುವೆ ಬಳಿಕ ಕಪ್ಪು ಬಣ್ಣ: ಮೂಗಿನ ಸೇತುವೆ ಬಳಿಕ ಬ್ಲ್ಯಾಕ್ ಫಂಗಲ್ ನಿಂದಾಗಿ ಚರ್ಮವು ಕಪ್ಪಾಗುವುದು. ಇದರಿಂದಾಗಿ ಕಣ್ಣುಗಳು, ಮೂಗಿನ ಭಾಗದಲ್ಲಿ ಕೂಡ ಕಪ್ಪು ಕಲೆಗಳು ಮೂಡಬಹುದು. ಇದು ಬಾಯಿಗೆ ಹಬ್ಬಿದರೆ ಅದರಿಂದ ಹಲ್ಲುಗಳು ಮತ್ತು ದವಡೆ ಮೇಲೆ ಕೂಡ ಪರಿಣಾಮವಾಗಬಹುದು.

click me!

Recommended Stories