ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ಸೂಕ್ತ ಆಹಾರವನ್ನು ಸೇವಿಸುವುದಕ್ಕಿಂದ ಉತ್ತಮವಾದದ್ದೇನೂ ಇಲ್ಲ. ಕಂಫರ್ಟ್ ಫುಡ್ಸ್ ನಮ್ಮ ಆತ್ಮವನ್ನು ಹಿತಗೊಳಿಸಲು ಮತ್ತು ನಮ್ಮ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಇಷ್ಟದ ಆಹಾರಗಳು ರೋಗ ಹೆಚ್ಚಿಸಿ ಆರೋಗ್ಯ ಇನ್ನಷ್ಟು ಹದಗೆಡಿಸಬಹುದು.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ ವಿಟಮಿನ್ ಡಿ ಮತ್ತು ಸಿ ಮತ್ತು ವಿಟಮಿನ್ ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ತ್ವರಿತವಾಗಿ ತಿನ್ನಬೇಕು. ನೀವು COVID-19 ಸೋಂಕಿತರಾಗಿದ್ದರೆ ಈ ನಿರ್ದಿಷ್ಟ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಸೇವಿಸುವುದು ಇನ್ನೂ ಮುಖ್ಯವಾಗಿದೆ.
ವೇಗವಾಗಿ ಚೇತರಿಸಿಕೊಳ್ಳಲು, ತಪ್ಪಿಸಬೇಕಾದ ಆಹಾರಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಉರಿಯೂತವನ್ನು ಉತ್ತೇಜಿಸುತ್ತವೆ ಮತ್ತು ಗುಣಪಡಿಸುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ.
ಸಂಸ್ಕರಿಸಿದ ಪ್ಯಾಕ್ಡ್ ಆಹಾರಗಳು:ನೀವು COVID-19 ಸೋಂಕಿತರಾಗಿದ್ದರೆ, ಸೋಡಿಯಂ ಅಧಿಕವಾಗಿರುವ ಆಹಾರಗಳು, ಸಕ್ಕರೆ, ಪ್ರಿಸರ್ವೇಟಿವ್ ಇರೋ ಆಹಾರ ತಿನ್ನಲೇಬೇಡಿ. ಈ ಎಲ್ಲಾ ಆಹಾರಗಳು ಉರಿಯೂತವನ್ನು ಉಂಟುಮಾಡುತ್ತವೆ. ಇದು ರೋಗ ಗುಣವಾಗಲು ಬಿಡುವುದಿಲ್ಲ.
ಹೆಚ್ಚಿನ ಉರಿಯೂತವು ರೋಗ ನಿರೋಧ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಬಹುದು. ಆಲೂಗೆಡ್ಡೆ ಚಿಪ್ಸ್ ಮತ್ತು ಇತರ ರೀತಿಯ ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳನ್ನು ತಿನ್ನಬಾರದು.
ರೆಡ್‌ಮೀಟ್:ಕೆಂಪು ಮಾಂಸವನ್ನು ಆಗಾಗ ಸೇವಿಸಬಾರದು, ಕೊರೋನಾ ವೈರಸ್ ಇದ್ದರೂ ಇಲ್ಲದಿದ್ದರೂ ರೆಡ್ ಮೀಟ್ ಅವಾಯ್ಡ್ ಮಾಡಿ. ಇದು ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದೆ. ಉರಿಯೂತವನ್ನು ಉತ್ತೇಜಿಸುತ್ತದೆ. ಬದಲಾಗಿ ಆಲಿವ್ ಎಣ್ಣೆ ಮತ್ತು ಸಾಲ್ಮನ್ ನಂತಹ ಒಮೆಗಾ 3 ಸಮೃದ್ಧವಾಗಿರುವ ಮೀನುಗಳ ಬದಲಿ ಪ್ರೋಟೀನ್‌ಗಾಗಿ ಬೀನ್ಸ್ ನಂತಹ ಸಸ್ಯಾಧರಿತ ಆಹಾರ ಸೇವಿಸಬಹುದು.
ಫ್ರೈಡ್ ಫುಡ್: ಡೀಪ್ ಫ್ರೈ ಮಾಡಿದ ಆಹಾರ ಸೇವಿಸಬೇಡಿ. ಇದರಲ್ಲಿ ಫ್ಯಾಟ್ ಹೆಚ್ಚಿರುತ್ತದೆ. ಇದು ಇಮ್ಯುನಿಟಿ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ. ಇದು ಕೊಲೆಸ್ಟ್ರಾಲ್ ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಯನ್ನು ಹೆಚ್ಚಿಸುತ್ತದೆ.
ಸಿಹಿ ಪಾನಿಯ: ಸಕ್ಕರೆ ಸೇರಿಸಲಾದ ಸಿಹಿ ಪಾನೀಯಗಳನ್ನು ಸೇವಿಸಬೇಡಿ. ಕಾರ್ಬೊನೇಟೆಡ್ ಡ್ರಿಂಕ್ಸ್ ಮತ್ತು ಸೋಡಾಗೆ ಮೊದಲು ಬಾಯ್ ಹೇಳಿ.
ಸ್ಪೈಸಿ ಆಹಾರ: ಕೆಮ್ಮು. ಜ್ವರ, ಶೀತ ಇದ್ದಾಗ ಸ್ಪೈಸಿ ಆಹಾರ ಸೇವಿಸಲೇಬೇಡಿ. ಕರಿದ ಸ್ಪೈಸಿ ಪದಾರ್ಥಗಳು ಗಂಟಲಿಗೆ ಕಿರಿಕಿರಿ ಮಾಡುತ್ತದೆ. ಬಿಸಿಯಾದ ತರಕಾರಿ ಸೂಪ್, ಕಷಾಯ ಸೇವಿಸಬಹುದು.