ಚಳಿಗಾಲದಲ್ಲಿ ಕಡಲೆಕಾಯಿ ಮತ್ತು ಬೆಲ್ಲವನ್ನು ಏಕೆ ತಿನ್ನಬೇಕು?
First Published Dec 16, 2020, 5:15 PM ISTಈಗ ಚಳಿಗಾಲ, ದೇಹವನ್ನು ಬೆಚ್ಚಗಿಡುವುದು ಮುಖ್ಯವಾಗಿದೆ. ನೀವು ಗಮನಿಸಿದರೆ, ಮಾರುಕಟ್ಟೆಯಲ್ಲಿ ನಾವು ಚಿಕ್ಕಿ, ಗೊಂದ್ ಲಡ್ಡೂ, ಕಡಲೆಕಾಯಿ ಲಡ್ಡೂಗಳನ್ನು ಹೆಚ್ಚಾಗಿ ಕಾಣಬಹುದು. ಇದನ್ನು ನಾವು ಹೆಚ್ಚಾಗಿ ಸೇವಿಸುವುದು ಉತ್ತಮ. ಏಕೆ ಎಂದು ಆಶ್ಚರ್ಯ ಆಗುತ್ತಿದ್ಯ? ಕಾರಣ, ಈ ಎಲ್ಲಾ ಪದಾರ್ಥಗಳು ಬೆಚ್ಚಗಿನ ಅಂಶವನ್ನು ಹೊಂದಿರುತ್ತವೆ ಮತ್ತು ಇದನ್ನು ಮಾನವ ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಚಳಿಗಾಲದ ಶೀತ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಕಡಲೆಕಾಯಿ ಮತ್ತು ಬೆಲ್ಲವನ್ನು ನೀವು ಲಡ್ಡು ಮತ್ತು ಚಿಕ್ಕಿ ರೂಪದಲ್ಲಿ ಸಾಧ್ಯವಾದಷ್ಟು ತಿನ್ನಿ. ಇದು ನಿಮ್ಮನ್ನು ಆರೋಗ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.