Chocolate Day: ಚಾಕೊಲೇಟ್ ಡೇ ವಿಶೇಷತೆಯೇನು ? ಹೆಚ್ಚು ಚಾಕೊಲೇಟ್ ತಿಂದ್ರೆ ಏನಾಗುತ್ತೆ ?

First Published | Feb 8, 2023, 6:12 PM IST

ವ್ಯಾಲೆಂಟೈನ್ಸ್ ವೀಕ್ (Valentine Week) ಆರಂಭವಾಗಿದೆ. ರೋಸ್ ಡೇ, ಪ್ರಪೋಸ್ ಡೇ ನಂತರ, ಚಾಕೊಲೇಟ್ ದಿನವನ್ನು  ಫೆಬ್ರವರಿ 9ರಂದು ಆಚರಿಸಲಾಗುತ್ತದೆ. ಈ ದಿನ, ಪ್ರತಿ ದಂಪತಿಗಳು ಪರಸ್ಪರ ಚಾಕೊಲೇಟ್ ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಚಾಕೊಲೇಟ್ ಡೇ ವಿಶೇಷತೆ ಬಗ್ಗೆ ಮತ್ತು ಹೆಚ್ಚು ಚಾಕೊಲೇಟ್ ತಿನ್ನೋದ್ರಿಂದ ಉಂಟಾಗೋ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ …

ಪ್ರೇಮಿಗಳ ವಾರದ (Valentine week) ಪ್ರತಿ ದಿನವೂ ಪ್ರೀತಿ ಮಾಡೋ ಜೋಡಿಗಳಿಗೆ ತುಂಬಾ ವಿಶೇಷವಾಗಿದೆ. ಚಾಕೊಲೇಟ್ ದಿನವನ್ನು (Chocolate Day) ಫೆಬ್ರವರಿ 9ರಂದು ಆಚರಿಸಲಾಗುತ್ತದೆ, ಇದು ಪ್ರಪೋಸ್ ದಿನದ ನಂತರದ ಮೂರನೇ ದಿನವಾಗಿದೆ. ಪ್ರತಿಯೊಂದು ಸಂಬಂಧಕ್ಕೂ ಮಾಧುರ್ಯವನ್ನು ಸೇರಿಸಲು ಚಾಕೊಲೇಟ್ ಬಹಳ ಮುಖ್ಯ, ಆದರೆ ಹೃದಯದಲ್ಲಿರುವ ಮಾತನ್ನು ವ್ಯಕ್ತಪಡಿಸುವಾಗ, ಚಾಕೊಲೇಟ್ ನ ಪ್ರಾಮುಖ್ಯತೆ ಇನ್ನೂ ಹೆಚ್ಚಾಗುತ್ತದೆ. 

ನೀವು ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಿದರೆ, ಹೂವುಗಳೊಂದಿಗೆ ಚಾಕೊಲೇಟ್ ಅಥವಾ ಈ ದಿನವನ್ನು ಸೆಲೆಬ್ರೇಟ್ ಮಾಡಲು ಬಯಸಿದರೆ, ಚಾಕೊಲೇಟ್ ನೀಡೋದು ಉತ್ತಮ ಆಯ್ಕೆಯಾಗಿದೆ. ಹಬ್ಬಗಳಲ್ಲಿಯೂ ಸಹ, ನಾವು ಸಂಬಂಧಿಕರು ಅಥವಾ ಸ್ನೇಹಿತರಿಗೆ ಚಾಕೊಲೇಟ್ಗಳನ್ನು ಉಡುಗೊರೆಯಾಗಿ (chocolate gift) ನೀಡುತ್ತೇವೆ. 

Tap to resize

ಚಾಕೊಲೇಟ್ ತಿನ್ನೋದ್ರಿಂದ ಅನೇಕ ಪ್ರಯೋಜನಗಳಿವೆ. ಇದು ಆಂಟಿ-ಆಕ್ಸಿಡೆಂಟ್ (anti oxidant) ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ನಿಜಾ. ಆದರೆ ಚಾಕೊಲೇಟ್ ತಿನ್ನೋದ್ರಿಂದ ಪ್ರಯೋಜನಗಳು ಮಾತ್ರವಲ್ಲದೆ ಕೆಲವು ಅನಾನುಕೂಲಗಳಿವೆ. ಅದನ್ನು ತಿಳಿದುಕೊಳ್ಳೋಣ…

ಮೂಳೆಗಳು ದುರ್ಬಲವಾಗುತ್ತೆ (weak bones)
ಅಗತ್ಯಕ್ಕಿಂತ ಹೆಚ್ಚು ಚಾಕೊಲೇಟ್ ಸೇವಿಸಿದರೆ ಮೂಳೆಗಳು ದುರ್ಬಲವಾಗಬಹುದು. ವರದಿಯ ಪ್ರಕಾರ, ಚಾಕೊಲೇಟ್ ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು. ನೀವು ಸೀಮಿತ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸಿದರೆ, ಅದರಿಂದ ಯಾವುದೇ ಹಾನಿ ಉಂಟಾಗೋದಿಲ್ಲ..

ತೂಕ ಹೆಚ್ಚಳ (weight gain)
ಹೌದು, ಚಾಕೊಲೇಟ್ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ಹೆಚ್ಚು ಚಾಕೊಲೇಟ್ ಸೇವಿಸಿದರೆ, ನೀವು ಬೊಜ್ಜಿನ ಸಮಸ್ಯೆಗೆ ಬಲಿಯಾಗಬಹುದು. ವಾಸ್ತವವಾಗಿ, ಇದು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ, ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ನಿದ್ರಾಹೀನತೆ  (sleeplessness)
ಅನೇಕ ಜನರು ಚಾಕೊಲೇಟ್ ಅನ್ನು ತುಂಬಾ ಇಷ್ಟಪಡುತ್ತಾರೆ, ಅವರು ರಾತ್ರಿ ಎದ್ದ ನಂತರವೂ ಚಾಕೊಲೇಟ್ ತಿನ್ನುತ್ತಾರೆ. ನೀವು ಸಹ ಇದನ್ನು ಮಾಡಿದರೆ, ಅದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಚಾಕೊಲೇಟ್ ಕೆಫೀನ್ ಅನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ತಿನ್ನೋದ್ರಿಂದ ನಿದ್ರೆಯ ಸಮಸ್ಯೆಗಳು ಉಂಟಾಗಬಹುದು.
 

ಗ್ಯಾಸ್ ಸಮಸ್ಯೆ (gas problem)
ನೀವು ಈಗಾಗಲೇ ಗ್ಯಾಸ್ ಸಮಸ್ಯೆಗಳನ್ನು ಹೊಂದಿದ್ದರೆ, ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ. ಗ್ಯಾಸ್ ಗೆ ಸಂಬಂಧಿಸಿದ ಸಮಸ್ಯೆ ಇದ್ರೆ ಚಾಕೊಲೇಟ್ ತಿನ್ನದಿರುವುದು ಒಳ್ಳೆಯದು. ಇದರಲ್ಲಿರುವ ಕೋಕೋ ಪುಡಿ ಗ್ಯಾಸ್ ನ್ನು ಉಂಟುಮಾಡುತ್ತದೆ. ಇದು ಎದೆಯುರಿಗೆ ಕಾರಣವಾಗಬಹುದು.

Latest Videos

click me!