ಸಾಮಾನ್ಯವಾಗಿ ಎಲ್ಲಾ ರೀ ತಿಯ ಬೇಳೆಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆಬೇಳೆ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವುದಲ್ಲದೆ ವಿವಿಧ ರೀತಿಯ ಪಾಕ ವಿಧಾನಗಳನ್ನು ತಯಾರಿಸಬಹುದು.
ವಾಸ್ತವವಾಗಿ ಕಡಲೆ ಬೇಳೆಯಿಂದ ಅನೇಕ ಲಾಭಗಳಿವೆ. ಇದು ಸಸ್ಯಾಹಾರಿಗಳಿಗೆ ಪ್ರೋಟೀನ್ ನ ಉತ್ತಮ ಮೂಲ. ಇದರಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ಸ್ ಅಧಿಕವಾಗಿದ್ದು, ಇದು ಗ್ಲುಕೋಸ್ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಇದು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ದೇಹದ ಭಾಗಗಳನ್ನು ಉರಿಯೂತದಿಂದ ರಕ್ಷಿಸುತ್ತದೆ.
29
ಆರೋಗ್ಯಕ್ಕಾಗಿ ಕಡಲೆ ಬೇಳೆಯ ಪ್ರಯೋಜನಗಳು
ತೂಕ ಇಳಿಸುತ್ತದೆ
ಕಡಲೆ ಬೇಳೆಯಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಕ್ಯಾಲೊರಿಗಳು ಕಡಿಮೆ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿಡುತ್ತದೆ. ಆದುದರಿಂದ ಇದನ್ನು ತಪ್ಪದೇ ಆಹಾರದಲ್ಲಿ ಸೇವಿಸಿ. ಇದು ಆರೋಗ್ಯಯುತವಾಗಿ ತೂಕ ಇಳಿಕೆ ಮಾಡುತ್ತದೆ.
39
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ
ಪ್ರತಿದಿನ 30 ಗ್ರಾಂ ಕಡಲೆಬೇಳೆ ಸೇವಿಸುವುದರಿಂದ 6 ರಿಂದ 7 ಗ್ರಾಂ ಪ್ರೋಟೀನ್ ಲಭ್ಯವಾಗುತ್ತದೆ. ಆದ್ದರಿಂದ ಇದನ್ನು ಆರೋಗ್ಯಕರ ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಈ ಬೇಳೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ.
49
ಕೂದಲು ಸ್ಪ್ಲಿಟ್ ಆಗುವುದನ್ನು ತಡೆಯುತ್ತದೆ
ಒಡೆದ ಕೂದಲು ಅಥವಾ ಕೂದಲು ಹಾನಿಯಿಂದ ಬಳಲುತ್ತಿದ್ದರೆ, ಕಡಲೆ ಬೇಳೆಯನ್ನು ನಿಯಮಿತವಾಗಿ ಸೇವಿಸಬೇಕು. ಇದರಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿದೆ, ಇದು ನೆತ್ತಿಯನ್ನು ಪೋಷಿಸುತ್ತದೆ ಮತ್ತು ಬೇರಿನಿಂದ ಕೂದಲನ್ನು ಬಲಪಡಿಸುತ್ತದೆ. ಇದರಿಂದ ಕೂದಲು ಒಡೆಯುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
59
ಮಧುಮೇಹ ನಿಯಂತ್ರಣಕ್ಕೆ
ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಮಧುಮೇಹಿಗಳಿಗೆ ಇದು ಪ್ರಯೋಜನಕಾರಿ. ಇದು ಫೈಬರ್ ಅಂಶವನ್ನು ಹೊಂದಿದ್ದು, ಗ್ಲುಕೋಸ್ ಅನ್ನು ರಕ್ತದ ಪ್ರವಾಹಕ್ಕೆ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.
69
ಭುರ್ಜಿ
ಸೋಯಾ ಕಣಕ ಮತ್ತು ಕ್ಯಾಪ್ಸಿಕಂನಿಂದ ಮಾಡಿದ ಕಡಲೆಬೇಳೆ ಭುರ್ಜಿಯಲ್ಲಿ ಮೊಟ್ಟೆ ಅಥವಾ ಚೀಸ್ ನಷ್ಟೇ ಪ್ರಮಾಣದ ಪ್ರೋಟೀನ್ ಇದೆ. ಇದು ಮೊಟ್ಟೆ ಮತ್ತು ಚೀಸ್ ಗಿಂತ ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಭುರ್ಜಿಯನ್ನು ರೋಟಿ ಅಥವಾ ಪರಾಟ ರೋಲ್ ಅಥವಾ ಸ್ಯಾಂಡ್ ವಿಚ್ ಆಗಿ ತಿನ್ನಬಹುದು.
ಕಡಲೆಬೇಳೆಯಲ್ಲಿ ಪ್ರೋಟೀನ್ ಸಮೃದ್ಧವಾಗಿರುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿ. ಆರೋಗ್ಯಕರ ದೇಹಕ್ಕಾಗಿ ನಿಯಮಿತವಾಗಿ ಆಹಾರದಲ್ಲಿ ಅದನ್ನು ಸೇರಿಸಬೇಕು.
79
ಸೂಪ್
ಸಂಜೆ ವೇಳೆ ಏನಾದರೂ ಹಗುರವಾದ ಆಹಾರ ಸೇವಿಸಬೇಕು ಎಂದುಕೊಂಡರೆ ಕಡಲೆ ಬೇಳೆ ಸೂಪ್ ಉತ್ತಮ ಆಯ್ಕೆ. ಇದು ಹಗುರವಾಗಿದೆ ಆದರೆ ಅದನ್ನು ತಿನ್ನುವುದರಿಂದ ಹೊಟ್ಟೆ ತುಂಬುತ್ತದೆ. ಇದು ದೇಹಕ್ಕೆ ಸಾಕಷ್ಟು ಪ್ರೋಟೀನ್ ಅನ್ನು ಸಹ ಒದಗಿಸುತ್ತದೆ. ಉತ್ತಮ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ.
89
ಹಮ್ಮಸ್
ಈ ತಿಂಡಿ ಸುಲಭವಾಗಿ ತಯಾರಾಗುತ್ತದೆ ಮತ್ತು ಯಾವಾಗ ಬೇಕಾದರೂ ತಿನ್ನಬಹುದು. ಕಡಲೆ ಬೇಳೆಯಿಂದ ತಯಾರಿಸಿದ ಹಮ್ಮಸ್ ನಿಮಗೆ ಫೈಬರ್ ಜೊತೆಗೆ ಪ್ರೋಟೀನ್ ಅನ್ನು ನೀಡುತ್ತದೆ. ಇದು ಕಡಿಮೆ ಕ್ಯಾಲೋರಿಯ ತಿಂಡಿಯಾಗಿದ್ದು ತೂಕ ಇಳಿಸಲು ನೆರವಾಗುತ್ತದೆ.
99
ಪ್ಯಾನ್‍ಕೇಕ್
ಕಡಲೆ ಬೇಳೆಯಿಂದ ತಯಾರಿಸಿರುವ ಇದು ಆರೋಗ್ಯಕರ ಮತ್ತು ಪೌಷ್ಟಿಕ ತಿಂಡಿ ಆಯ್ಕೆಯಾಗಿದೆ. ಬೇಳೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಅದನ್ನು ಬ್ಲೆಂಡ್ ಮಾಡಿ ಮತ್ತು ನಿಮ್ಮ ಆಯ್ಕೆಯ ಪದಾರ್ಥಗಳನ್ನು ಸೇರಿಸಿ ಮತ್ತು ಪ್ಯಾನ್ ಕೇಕ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.