ಫ್ಯಾಷನ್‌ನ ಈ ಯುಗದಲ್ಲಿ ಮೈಕೈ ತುಂಬಿಕೊಂಡು ಬಬ್ಲಿಯಾಗಿರಲು ಯಾರೂ ಬಯಸೋದಿಲ್ಲ. ಇದೇನಿದ್ದರೂ ಸ್ಲಿಮ್ ಬ್ಯೂಟಿಯಾಗಿರುವ ಕಾಲ. ಈಗಿನ ಹುಡುಗಿಯರು ಎಂದಿಗೂ ಹೆಚ್ಚಿನ ತೂಕವನ್ನು ಪಡೆಯಲು ಬಯಸುವುದಿಲ್ಲ, ಯಾಕೆಂದರೆ ಹೆಚ್ಚು ದಪ್ಪಗಾಗಿದ್ದರೆ ಜನ ತನ್ನನ್ನು ಇಷ್ಟ ಪಡೋದಿಲ್ಲ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ದರಿಂದ 10 ದಿನಗಳಲ್ಲಿ ಅತಿಯಾದ ತೂಕವನ್ನು ಸಡಿಲಗೊಳಿಸಲು ಕೆಲವು ವಿಶೇಷ ಟ್ರಿಕ್ ಇಲ್ಲಿವೆ,
ಸಮತೋಲಿತ ಆಹಾರ
ಕಡಿಮೆ ದಿನಗಳಲ್ಲಿ ತೂಕವನ್ನು ಸಡಿಲಗೊಳಿಸಲು ಇದು ಅತ್ಯುತ್ತಮ ಮಾರ್ಗ. ಊಟವನ್ನು ಕಡಿಮೆ ಪ್ರಮಾಣದೊಂದಿಗೆ ದಿನದಲ್ಲಿ 6 ಬಾರಿ ತೆಗೆದುಕೊಳ್ಳಲು ಪ್ರಯತ್ನಿಸಿ. ಏಕೆಂದರೆ 2 ಬಾರಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಏಕೆಂದರೆ 2 ಬಾರಿ ಊಟದಲ್ಲಿ 6 ಸಮಯದ ಊಟದ ಪ್ರಕಾರ ಹೆಚ್ಚು ಊಟ ಮಾಡುತ್ತೀರಿ, ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚುತ್ತದೆ.
28
ಅದರ ಬದಲಾಗಿ ದಿನಕ್ಕೆ ಆರು ಸಲ ಊಟ ಮಾಡಬೇಕು. ಅಂದರೆ ಕೊಂಚ ಕೊಂಚವಾಗಿ, ಹಾಲು, ಹಣ್ಣುಗಳನ್ನು ಸೇರಿಸಿ ಎರಡು ಗಂಟೆಗಳ ಅಂತರದಲ್ಲಿ ಆರು ಬಾರಿ ಊಟ ಮಾಡಬೇಕು. ಇದರಿಂದ ತೂಕ ಬೇಗ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ.
38
ನಿಮ್ಮ ವೇಸ್ಟ್ ಲೈನ್ ಇಳಿಸಿ
ಭಾರವಾದ ಆಹಾರವು ಹೊಟ್ಟೆ ಬರುವಂತೆ ಮಾಡುತ್ತದೆ, ಇದು ದೊಡ್ಡ ವೇಸ್ಟ್ ಲೈನ್ ಅನ್ನು ಮಾಡುತ್ತದೆ, ಕ್ರಂಚಸ್‌ನಂತಹ ಕೆಲವು ಉತ್ತಮ ವ್ಯಾಯಾಮದೊಂದಿಗೆ ಈ ದೊಡ್ಡ ವೇಸ್ಟ್ ಲೈನ್ ಅನ್ನು ಕಡಿಮೆ ಮಾಡುವುದು ಉತ್ತಮ, ಇದು ನಿಮ್ಮ ಪ್ರಮುಖ ಸ್ನಾಯುವನ್ನು ಬಲಪಡಿಸುತ್ತದೆ ಮತ್ತು ಸ್ಲಿಮ್ ಆಗಲು ಸಹಾಯ ಮಾಡುತ್ತದೆ.
48
ಕಾರ್ಡಿಯೋ ವ್ಯಾಯಾಮ
ಕಾರ್ಡಿಯೋ ವ್ಯಾಯಾಮವು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ, ನಿಯಮಿತ ಓಡುವುದು ದೇಹವನ್ನು ಶಕ್ತಿಯುತವಾಗಿ ಮಾಡುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯವನ್ನು ನಿರ್ವಹಿಸುತ್ತದೆ. ಪ್ರತಿದಿನ ಮುಂಜಾನೆ 30 ರಿಂದ 60 ನಿಮಿಷಗಳ ಕಾಲ ಕಾರ್ಡಿಯೋ ವ್ಯಾಯಾಮ ಮಾಡುವುದು ಉತ್ತಮ.
58
ಧ್ಯಾನ
ಧ್ಯಾನವು ಎಲ್ಲಾ ಸಮಸ್ಯೆಗೆ ದೊಡ್ಡ ಔಷಧಿಗಳಲ್ಲಿ ಒಂದಾಗಿದೆ, ನಿಯಮಿತ ಧ್ಯಾನವು ಮನಸ್ಸನ್ನು ತಾಜಾಗೊಳಿಸುತ್ತದೆ ಮತ್ತು ಆರೋಗ್ಯದ ಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿದಿನ ತಪ್ಪದೆ ಅರ್ಧ ಗಂಟೆಗಳ ಕಾಲ ಧ್ಯಾನ ಮಾಡಿ, ಇದರಿಂದ ಮನಸ್ಸಿಗೆ ಏಕಾಗ್ರತೆ ಸಿಗುತ್ತದೆ. ನಿಮ್ಮನ್ನು ನೀವು ನಿಗ್ರಹಿಸಲು ಸಾಧ್ಯವಾಗುತ್ತದೆ.
68
ಜ್ಯೂಸ್ ಸೇವಿಸಿ :
ತೂಕ ಇಳಿಸಿಕೊಳ್ಳಲು ಇದು ಸಹ ಉತ್ತಮ ಪರಿಹಾರ. ಒಂದು ಹೊತ್ತು ಯಾವುದೇ ಆಹಾರಗಳಿಲ್ಲದೆ ಕೇವಲ ಹಣ್ಣಿನ ರಸ ಸೇವಿಸಿ. ಇದರಲ್ಲಿ ವಿವಿಧ ಹಣ್ಣು, ತರಕಾರಿಗಳನ್ನು ಸೇರಿಸಬಹುದು. ಇದನ್ನು ನಿರಂತರವಾಗಿ ಮಾಡುತ್ತಾ ಬಂದರೆ ತೂಕ ಇಳಿಕೆಯಾಗುತ್ತದೆ. ಜೊತೆಗೆ ಚರ್ಮ ಗ್ಲೋ ಕೂಡ ಆಗುತ್ತದೆ.
78
ನಿಂಬೆ ನೀರು :
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಬಿಸಿನೀರಿಗೆ ನಿಂಬೆ ರಸ ಮತ್ತು ಜೇನು ತುಪ್ಪ ಹಾಕಿ ಸೇವನೆ ಮಾಡುವುದು ಉತ್ತಮ. ಇದರಿಂದ ಹೊಟ್ಟೆಯ ಕೊಬ್ಬು ನಿವಾರಣೆಯಾಗುತ್ತದೆ. ತೂಕ ಇಳಿಕೆ ಮಾಡಲು ಇದನ್ನು ಉತ್ತಮ ಮಾರ್ಗ ಎಂದು ಹೆಚ್ಚಿನ ಜನರು ಇದನ್ನೇ ಪಾಲಿಸುತ್ತಾರೆ.
88
ಸಲಾಡ್
ದಿನದಲ್ಲಿ ಒಂದು ಹೊತ್ತು ಅನ್ನ, ಆಹಾರದ ಬದಲಾಗಿ ಒಂದು ಬೌಲ್ ತರಕಾರಿ ಸೇವಿಸಬೇಕು. ಅದರಲ್ಲಿ ಮುಳ್ಳು ಸೌತೆ, ಕ್ಯಾರೆಟ್, ಬೀಟ್ರೂಟ್ ಮೊದಲಾದ ತರಕಾರಿಗಳನ್ನು ಸೇರಿಸಬೇಕು. ಇದನ್ನು ಪ್ರತಿದಿನ ಒಂದು ಹೊತ್ತು ಸೇವಿಸುತ್ತಾ ಬಂದರೆ ನೀವು ಸೇವಿಸುವ ಕ್ಯಾಲರಿಗಳ ಪ್ರಮಾಣ ಕೊಂಚ ಕಡಿಮೆಯಾಗುತ್ತದೆ. ಇದರಿಂದ ತೂಕವೂ ಇಳಿಕೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.