ರಾತ್ರಿ ವೇಳೆ ಏಲಕ್ಕಿ ಬಾಯಲ್ಲಿಟ್ಟು ಮಲಗಿದ್ರೆ ಏನಾಗತ್ತೆ?

First Published | Jan 8, 2021, 2:17 PM IST

ಸಾಂಬಾರ ಪದಾರ್ಥಗಳಲ್ಲಿ ಏಲಕ್ಕಿಯನ್ನು ಮಸಾಲೆಗಳ ರಾಜ ಎಂದು ಕರೆಯಲಾಗುತ್ತದೆ. ಇದು ಚಿಕ್ಕದಾದರೂ ತನ್ನ ಸ್ವಾದಿಷ್ಟ ಗುಣ ಮತ್ತು ಪರಿಮಳದಿಂದ ಕೆಲವೊಂದು ಆಹಾರ ಪದಾರ್ಥ ತಯಾರಿಸುವಾಗ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಮನೆಯಲ್ಲೂ  ಏಲಕ್ಕಿ ಸಿಗುತ್ತದೆ. ಆಹಾರದಿಂದ ಚಹಾದವರೆಗೆ ಏಲಕ್ಕಿಯನ್ನು ಸ್ವಾದಕ್ಕೆ ಸೇರಿಸಲಾಗುತ್ತದೆ. 

ಈ ಏಲಕ್ಕಿ ಕೇವಲ ರುಚಿಯನ್ನು ಹೆಚ್ಚಿಸಲು ಮಾತ್ರ ಕೆಲಸ ಮಾಡುವುದಿಲ್ಲ. ಏಲಕ್ಕಿ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಬಾಯಿ ವಾಸನೆ ನಿವಾರಿಸುವುದರಿಂದ ಹಿಡಿದು ತೂಕ ಇಳಿಕೆ ಮಾಡುವವರೆಗೆ ಇದರಿಂದ ಹಲವು ಪ್ರಯೋಜನಗಳಿವೆ. ರಾತ್ರಿ ಮಲಗುವ ಮುನ್ನ ಹಲ್ಲಿನ ಕೆಳಗೆ ಒಂದು ಸಣ್ಣ ಏಲಕ್ಕಿಯನ್ನು ಒತ್ತಿದರೆ ನಿಮ್ಮ ದೇಹವು ಅದ್ಭುತ 7 ಪರಿಣಾಮ ಬೀರುತ್ತದೆ.
ರಾತ್ರಿ ಹಲ್ಲಿನಲ್ಲಿ ಹಸಿರು ಏಲಕ್ಕಿಯನ್ನು ಒತ್ತಿದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಬಾಯಿಯ ವಾಸನೆ ಇದ್ದರೆ ರಾತ್ರಿ ವೇಳೆ ಒಂದು ಚಿಕ್ಕ ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿ ಕೊಳ್ಳಬೇಕು.
Tap to resize

ಏಲಕ್ಕಿಯು ಮಲಬದ್ಧತೆಗೆ ಹೆಚ್ಚಿನ ಪರಿಹಾರ ನೀಡುತ್ತದೆ. ಮಲಬದ್ಧತೆಯು ಮನುಷ್ಯರ ಅನೇಕ ಇತರ ಕಾಯಿಲೆಗಳನ್ನು ಸುತ್ತುವರೆಯುತ್ತದೆ. ಮಲಬದ್ಧತೆಯನ್ನು ಜಯಿಸಿದರೆ, ಅನೇಕ ರೋಗಗಳನ್ನು ಜಯಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಏಲಕ್ಕಿಯಿಂದ ಮಲಬದ್ಧತೆಯನ್ನು ನಿವಾರಿಸಬಹುದು.
ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿಯಾಗುತ್ತಿದೆಯೇ, ಹಾಗಾದರೆ ಏಲಕ್ಕಿಯ ಹೀಗೆ ಬಳಸಿ. ಪ್ರಯಾಣದ ದಿನಕ್ಕೂ ಮುನ್ನ ಏಲಕ್ಕಿಯನ್ನು ಬಾಯಿಯಲ್ಲಿಟ್ಟು ಮಲಗಿದಲ್ಲಿ, ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸಿದ ಅಥವಾ ವಾಂತಿಯ ಅನುಭವ ಉಂಟಾಗುವುದಿಲ್ಲ.
ಏಲಕ್ಕಿಯ ಒಳಗೆ ವಿಶೇಷ ಎಣ್ಣೆ ಇರುತ್ತದೆ. ಮಲಗುವಾಗ ಅದನ್ನು ಹಲ್ಲಿನ ಕೆಳಗೆ ಇಟ್ಟಾಗ, ಎಣ್ಣೆಯು ಬಾಯಿಯೊಳಗೆ ಬಿಡುಗಡೆಯಾಗುತ್ತದೆ ಮತ್ತು ದೇಹದ ಒಳಗೆ ಹೋಗುತ್ತದೆ. ಇದು ಆಮ್ಲೀಯತೆಯಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದು ಹೊಟ್ಟೆಯ ಒಳಭಾಗವನ್ನು ಬಲಪಡಿಸುತ್ತದೆ. ಅಲ್ಲದೇ ಕಿಬ್ಬೊಟ್ಟೆಯಲ್ಲಿ ಜಮೆಯಾದ ಆಮ್ಲವನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.
ಅಸ್ತಮಾಕ್ಕೂ ಏಲಕ್ಕಿ ತುಂಬಾ ಪರಿಣಾಮಕಾರಿ. ಉಸಿರಾಡಲು ಕಷ್ಟವಿರುವವರು ಏಲಕ್ಕಿಯನ್ನು ತಿನ್ನಬಹುದು. ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಲೇಬೇಕು.
ತೂಕ ಇಳಿಕೆಗೆ ಏಲಕ್ಕಿ ಸಹಕಾರಿ. ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು. ಇದರಲ್ಲಿ ಇರುವಂತಹ ಪೋಷಕಾಂಶಗಳು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿದಿನ ಏಲಕ್ಕಿಯನ್ನು ತಿನ್ನುವಮೂಲಕ ನೀವು ಒತ್ತಡವನ್ನು ದೂರವಿಡುತ್ತೀರಿ. ಹೌದು, ಸಂಶೋಧನೆಗಳ ಪ್ರಕಾರ ಏಲಕ್ಕಿಯಲ್ಲಿ ಒತ್ತಡ ನಿವಾರಣೆ ಮಾಡುವ ಗುಣಗಳಿವೆ. ಏಲಕ್ಕಿಯನ್ನು ಬಾಯಿಯಲ್ಲಿ ಒತ್ತಿದರೆ ಒತ್ತಡ ಕಡಿಮೆಯಾಗುತ್ತದೆ.

Latest Videos

click me!