ಬೈಪೋಲಾರ್ ಡಿಸಾರ್ಡರ್ ... ಈ ಮಾನಸಿಕ ಕಾಯಿಲೆ ಬಗ್ಗೆ ಇಲ್ಲಿದೆ ಮಾಹಿತಿ

First Published | Feb 22, 2021, 3:41 PM IST

ಪದೇ ಪದೇ ಮೂಡ್ ಸ್ವಿಂಗ್‌ನಿಂದ ಬಳಲುತ್ತಿದ್ದೀರಾ? ಇದು ಬೈಪೋಲಾರ್ ಡಿಸಾರ್ಡರ್. ಇದು ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು, ಅಸಾಮಾನ್ಯ ಮನಸ್ಥಿತಿಗಳಿಂದ ಕೂಡಿದೆ. ಬೈಪೋಲಾರ್ ಕಾಯಿಲೆ ಅಥವಾ ಉನ್ಮಾದ ಖಿನ್ನತೆ ಎಂದೂ ಕರೆಯಲ್ಪಡುವ ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ಖಿನ್ನತೆಯ ಪ್ರಸಂಗಗಳನ್ನು ಪ್ರಚೋದಿಸುತ್ತದೆ.

ಈ ಸ್ಥಿತಿಯಿಂದ ಬಳಲುತ್ತಿರುವ ಜನರು ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಇದು ಜೀವಿತಾವಧಿಯ ಸ್ಥಿತಿ, ಆದರೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಮನಸ್ಥಿತಿ ಬದಲಾವಣೆಗಳನ್ನು ಮತ್ತು ಇತರೆರೋಗ ಲಕ್ಷಣಗಳನ್ನು ನಿರ್ವಹಿಸಬಹುದು. ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳನ್ನು ನಿವಾರಿಸಲು ಕೆಲವು ನೈಸರ್ಗಿಕ ವಿಧಾನಗಳು ಇಲ್ಲಿವೆ.
undefined
ಪ್ರತಿದಿನ ಒಂದೇ ರೀತಿಯ ದಿನಚರಿಯನ್ನು ಪಾಲಿಸಿ, ಅದು ಆರೋಗ್ಯ ಮತ್ತು ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಊಟವನ್ನು ತಿನ್ನುವ ಮೂಲಕ, ಅಂದರೆ ತರಕಾರಿ ಸೇವನೆ, ಪ್ರೋಟೀನ್‌ಗಳು ಮತ್ತು ಧಾನ್ಯಗಳನ್ನು ಹೆಚ್ಚಿಸುವ ಮೂಲಕ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
undefined
Tap to resize

ಈ ಸಮಸ್ಯೆಯನ್ನು ನಿವಾರಿಸಲಸು ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ಮಲಗಬೇಕು ಮತ್ತು ಸಮಯಕ್ಕೆ ಸರಿಯಾಗಿ ಮಲಗಬೇಕು.
undefined
ವ್ಯಾಯಾಮವ್ಯಾಯಾಮವು ಆರೋಗ್ಯಕರ ದೇಹದ ಪ್ರಮುಖ ಭಾಗ. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ವ್ಯಾಯಾಮವು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ವಾಕಿಂಗ್, ಜಾಗಿಂಗ್ ಅಥವಾ ಬೈಕಿಂಗ್‌ನಂತಹ ಮಧ್ಯಮ ವ್ಯಾಯಾಮ ಕೂಡ ಸಹಾಯ ಮಾಡುತ್ತದೆ.
undefined
ಐಸೋಲೇಷನ್ರೋಗಲಕ್ಷಣಗಳನ್ನು ಹೆಚ್ಚುತ್ತಿರುವಾಗ ಎಲ್ಲರಿಂದ ದೂರ ಹೋಗಿ ಒಬ್ಬಂಟಿಯಾಗಬೇಡಿ. ಖಿನ್ನತೆಗೆ ಒಳಗಾದಾಗ, ಸಾಮಾಜಿಕ ಸನ್ನಿವೇಶಗಳು ಮನಸ್ಸಿಗೆ ಕಿರಿಕಿರಿ ಉಂಟು ಮಾಡಬಹುದು. ಆದರೆ ಒಬ್ಬಂಟಿಯಾಗಿರುವ ಬದಲು ಸಾಧ್ಯವಾದಷ್ಟು ನಿಮ್ಮ ಪ್ರೀತಿಪಾತ್ರರ ಜೊತೆ ಇರುವುದು ಉತ್ತಮ.
undefined
ಒಮೇಗಾ 3ಬೈಪೋಲಾರ್ ಡಿಸಾರ್ಡರ್ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸಿ. ಪೋಷಕಾಂಶಗಳ ಕೆಲವು ಉತ್ತಮ ಮೂಲಗಳು ಮೀನು, ನಟ್ಸ್ ಮತ್ತು ಸಸ್ಯ ತೈಲಗಳು.
undefined
ಜೀವಸತ್ವಗಳುಸೈಕ್ಲಿಂಗ್ ಬೈಪೋಲಾರ್ ಡಿಸಾರ್ಡರ್ ಹೊಂದಿರುವ ಜನರಲ್ಲಿ ಉನ್ಮಾದದ ಲಕ್ಷಣಗಳಿಗೆ ಕೋಲೀನ್ ಸೇರಿದಂತೆ ನೀರಿನಲ್ಲಿ ಕರಗುವ ವಿಟಮಿನ್ ಪರಿಣಾಮಕಾರಿಯಾಗಬಹುದು.
undefined
ಅಕ್ಯುಪಂಕ್ಚರ್ಮಸಾಜ್ ಥೆರಪಿ, ಯೋಗ, ಅಕ್ಯುಪಂಕ್ಚರ್ ಮತ್ತು ಧ್ಯಾನದಂತಹ ಶಾಂತಗೊಳಿಸುವ ತಂತ್ರಗಳು ಮಾನಸಿಕ ಅಸ್ವಸ್ಥತೆಯಿಂದ ಉಂಟಾಗುವ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
undefined

Latest Videos

click me!