ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಯಾಕಂದ್ರೆ ಅವುಗಳಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ಗಳು, ಮಿನರಲ್ಸ್ ಇರುತ್ತೆ. ಅವು ನಮ್ಮನ್ನ ಆರೋಗ್ಯವಾಗಿ ಇಡುತ್ತವೆ. ಇನ್ನೂ ತುಂಬಾ ರೋಗಗಳಿಂದ ಕಾಪಾಡುತ್ತವೆ. ಅದಕ್ಕೆ ಪ್ರತಿದಿನ ಒಂದಲ್ಲ ಒಂದು ಹಣ್ಣು ತಿನ್ನಿ ಅಂತ ಡಾಕ್ಟರ್ಗಳು ಹೇಳ್ತಾರೆ. ಆದ್ರೆ ಹಣ್ಣು ತಿನ್ನೋದಕ್ಕೆ ಸರಿಯಾದ ಸಮಯ ಕೂಡ ಇರುತ್ತೆ. ಅಂದ್ರೆ, ಬೆಳಗ್ಗೆ ಟಿಫಿನ್ ಆದ್ಮೇಲೆ, ಮಧ್ಯಾಹ್ನ ಊಟಕ್ಕೆ ಮೊದಲು ಹಣ್ಣು ತಿನ್ನೋದು ಒಳ್ಳೇದು. ಬೇಕಿದ್ರೆ ಮಧ್ಯಾಹ್ನ ಊಟ ಆದ್ಮೇಲೆ ಕೂಡ ತಿನ್ನಬಹುದು. ಆದ್ರೆ ರಾತ್ರಿ ಹೊತ್ತು.. ಅದು ಕೂಡ ಲೇಟಾಗಿ ಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೇದಲ್ಲ. ತುಂಬಾ ಜನ ರಾತ್ರಿ ಊಟ ಆದ್ಮೇಲೆ ಹಣ್ಣು ತಿನ್ನೋದಕ್ಕೆ ಇಷ್ಟಪಡ್ತಾರೆ. ಆದ್ರೆ ಕೆಲವು ಹಣ್ಣುಗಳು ರಾತ್ರಿ ತಿಂದ್ರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಯಾವ ಹಣ್ಣು ರಾತ್ರಿ ತಿನ್ನಬಾರ್ದು ತಿಳ್ಕೊಳ್ಳೋಣ.