ಮೈ ಬಿಸಿಯಾಗುತ್ತಿದ್ಯಾ? ಸುಳ್ಳು ಹೇಳಿದರೂ ಹೆಚ್ಚುತ್ತೆ ದೇಹದ ತಾಪಮಾನ!

Suvarna News   | Asianet News
Published : Aug 28, 2021, 02:49 PM IST

ಈ ಪ್ರಪಂಚದಲ್ಲಿ ಏನೇನೋ ಅದ್ಭತ, ವಿಚಿತ್ರ ಅಂಶಗಳು ನಡೆಯುತ್ತವೆ. ಅವುಗಳ ಬಗ್ಗೆ ತಿಳಿದರೆ, ಅಯ್ಯೋ ಹೀಗೂ ಉಂಟೆ ಎಂದು ಅನಿಸುತ್ತದೆ. ಬೇರೆ ವಿಷಯ ಬಿಡಿ ನಮ್ಮ ದೇಹದ ಕೆಲವು ಬದಲಾವಣೆ, ಕ್ರಿಯೆಯೆ ಬಗ್ಗೆಯೇ ನಮಗೆ ತಿಳಿದಿರುವುದಿಲ್ಲ. ಅದು ಗೊತ್ತಾದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಅದರಲ್ಲಿ ದೇಹದ ತಾಪಮಾನವೂ ಒಂದು. ದೇಹದ ತಾಪಮಾನದ ಬಗ್ಗೆ  ತಿಳಿದುಕೊಳ್ಳಬೇಕಾದ ವಿಜ್ಞಾನದಿಂದ ಸಾಬೀತಾಗಿರುವ 6 ಸಂಗತಿಗಳು ಇಲ್ಲಿವೆ.

PREV
110
ಮೈ ಬಿಸಿಯಾಗುತ್ತಿದ್ಯಾ? ಸುಳ್ಳು ಹೇಳಿದರೂ ಹೆಚ್ಚುತ್ತೆ ದೇಹದ ತಾಪಮಾನ!

ಕಡಿಮೆ vs  ಹೆಚ್ಚಿನ ದೇಹದ ತಾಪಮಾನ
ಸಾಮಾನ್ಯ ದೇಹದ ತಾಪಮಾನವು 98.6 ಡಿಗ್ರಿ ಫ್ಯಾರನ್ ಹೀಟ್ ಆಗಿದೆ. ಆದಾಗ್ಯೂ, ಇದು 97 ರಿಂದ 99 ಡಿಗ್ರಿಎಫ್ ಗೆ ಬದಲಾಗಬಹುದು. 100 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ದೇಹದ ತಾಪಮಾನವನ್ನು ಜ್ವರವೆಂದು ಪರಿಗಣಿಸಲಾಗುತ್ತದೆ. ಆದರೆ ಪರಿಸರದ ಅಂಶಗಳಿಗೆ ಪ್ರತಿಕ್ರಿಯೆಯಾಗಿ ದೇಹದ ತಾಪಮಾನ ಬದಲಾಗಬಹುದು ಎಂದು ತಿಳಿದಿದೆಯೇ? ಉದಾಹರಣೆಗೆ, ವ್ಯಾಯಾಮ ಮಾಡಿದಾಗ ಅದು ಹೆಚ್ಚಾಗಬಹುದು.

210

ಜ್ವರವು ಸೋಂಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ
ಜ್ವರವು ಕಳವಳಕ್ಕೆ ಕಾರಣವಾಗಿದೆ ಮತ್ತು ಅದನ್ನು ನಿರ್ಲಕ್ಷಿಸಬಾರದು, ಆದರೆ ಇದು ಕೆಲವು ರೀತಿಯಲ್ಲಿ ಪ್ರಯೋಜನಕಾರಿ. ಜ್ವರವು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ - ದೇಹದ ಮೇಲೆ ಅಥವಾ ಒಳಗೆ ಹಾನಿಕಾರಕ ಬ್ಯಾಕ್ಟೀರಿಯಾದ ಪ್ರಸರಣವನ್ನು ತಡೆಯನ್ನು ದೇಹದ ತಾಪಮಾನ ಸಹಾಯ ಮಾಡುತ್ತದೆ. 

310

ವಯಸ್ಸಾದಂತೆ ತಂಪು ಹೆಚ್ಚಾಗುತ್ತದೆ 
ಸಾಮಾನ್ಯವಾಗಿ ಯುವಕರನ್ನು ನೋಡಿದರೆ ಹಿರಿಯರು ಹೆಚ್ಚಾಗಿ ಇನ್ನೂ ಯುವಕರು ಬಿಸಿರಕ್ತ ಎಂದು ಹೇಳುತ್ತಾರೆ. ಇದು ಸತ್ಯ. ಯುವಕರ ದೇಹ ಹೆಚ್ಚು ಬಿಸಿಯಾಗಿರುತ್ತದೆ. ಜರ್ನಲ್ ಆಫ್ ಕ್ಲಿನಿಕಲ್ ನರ್ಸಿಂಗ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವ್ಯಕ್ತಿಯ ಸರಾಸರಿ ದೇಹದ ತಾಪಮಾನವು ವಯಸ್ಸಾದಂತೆ ಕಡಿಮೆಯಾಗುತ್ತದೆ. ಇದು ಅರ್ಥ ಮಾಡಿಕೊಳ್ಳಲು ನಿರ್ಣಾಯಕವಾಗಿದೆ ಏಕೆಂದರೆ ಹಿರಿಯರಿಗೆ ಕಿರಿಯರಿಗಿಂತ ಕಡಿಮೆ ತಾಪಮಾನದಲ್ಲಿ ಜ್ವರ ಇರಬಹುದು.

410

100.4 ಕ್ಕಿಂತ ಹೆಚ್ಚಿನ ದೇಹದ ತಾಪಮಾನವು ಕೋವಿಡ್ ಅನ್ನು ಸೂಚಿಸಬಹುದು
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಪ್ರಕಾರ, ಜ್ವರವು ಕೋವಿಡ್-19 ರ ಲಕ್ಷಣಗಳಲ್ಲಿ ಒಂದಾಗಿದೆ. ಆದ್ದರಿಂದ,  ದೇಹದ ತಾಪಮಾನವು 100.4 ಅಥವಾ ಅದಕ್ಕಿಂತ ಹೆಚ್ಚು ಇದ್ದ ಸಂದರ್ಭದಲ್ಲಿ, ಒಂದು ಪರೀಕ್ಷೆಯನ್ನು ಪಡೆಯಿರಿ. ಮಕ್ಕಳ ಬಗ್ಗೆ ಹೇಳುವುದಾದರೆ, ಮಗುವಿನ ತೋಳಿನ ಕೆಳಗೆ ಥರ್ಮಾಮೀಟರ್ ಅನ್ನು ಇರಿಸುವ ಮೂಲಕ ಅವರ ಕಂಕುಳ ತಾಪಮಾನವನ್ನು ಪರಿಶೀಲಿಸಿ. 99.4 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅವರಿಗೆ ಜ್ವರ ಇದೆ ಎಂದರ್ಥ.

510

ಸುಳ್ಳನ್ನು ಹೇಳುವುದು ದೇಹದ ತಾಪಮಾನವನ್ನು ಬದಲಾಯಿಸುತ್ತದೆ
ಥರ್ಮಲ್ ಇಮೇಜಿಂಗ್ ಅನ್ನು ಬಳಸಿದ 2018 ರ ಅಧ್ಯಯನವು ಸುಳ್ಳು ಚಿಂತೆಯನ್ನು ಉಂಟುಮಾಡುತ್ತದೆ, ಇದು ಮೂಗಿನ ತಾಪಮಾನವನ್ನು ಕಡಿಮೆ ಮಾಡಲು ಮತ್ತು ಹಣೆಯ ಸುತ್ತಲಿನ ಪ್ರದೇಶಗಳ ತಾಪಮಾನವನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಕಂಡುಹಿಡಿದಿದೆ. ಆದ್ದರಿಂದ, ಮುಂದಿನ ಬಾರಿ ಸುಳ್ಳು ಹೇಳುವಾಗ ಜಾಗರೂಕರಾಗಿರಿ! ನಿಮ್ಮ ದೇಹ ಹೆಚ್ಚು ಬಿಸಿಯಾದರೆ ಆವಾಗ ಬೆವರಲು ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ನೀವು ಸುಳ್ಳು ಹೇಳುವುದು ತಿಳಿಯುತ್ತದೆ. 

610


ಮಸಾಲೆಯುಕ್ತ ಆಹಾರವು ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ
ಸೈಕಾಲಜಿ ಅಂಡ್ ಬಿಹೇವಿಯರ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಸಾಲೆಯುಕ್ತ ಆಹಾರವು  ದೇಹದ ತಾಪಮಾನ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಬಹುದು. ಅಧ್ಯಯನದ ಲೇಖಕರು ಕಡಿಮೆ ಹಸಿವಿನ ಭಾವನೆಗಳೊಂದಿಗೆ ವರ್ಧಿತ ಶಾಖ ಉತ್ಪಾದನೆಯು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ, ವಿಶೇಷವಾಗಿ ಮಸಾಲೆಯುಕ್ತ ಊಟವನ್ನು ತಿನ್ನದವರಿಗೆ ಕೆಂಪು ಮೆಣಸು ಸೇವನೆಯ ಸಂಭಾವ್ಯ ಪ್ರಯೋಜನವನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ.

710


ಸ್ಮೋಕ್ ಮಾಡಿದಾಗ ದೇಹ ಬಿಸಿಯಾಗುತ್ತದೆ
ಸಿಗರೇಟಿನ ಕೊನೆಯಲ್ಲಿ ತಾಪಮಾನವು 203 ಡಿಗ್ರಿ ಫ್ಯಾರನ್ ಹೀಟ್ ಆಗಿದೆ.  ಬಿಸಿಯಾದ ಹೊಗೆಯಲ್ಲಿ ಉಸಿರಾಡುವಾಗ,  ದೇಹವು ಹಗುರವಾಗಿ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಸ್ಮೋಕಿಂಗ್ ಮಾಡುವಾಗ ದೇಹದ ತಾಪಮಾನವನ್ನು ಹೆಚ್ಚಿಸುತ್ತೀರಿ. ಆಗಾಗ್ಗೆ, ಧೂಮಪಾನವು ದೇಹದ ತಾಪಮಾನವನ್ನು ತಂಪಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಒಮ್ಮೆ ಧೂಮಪಾನವನ್ನು ನಿಲ್ಲಿಸಿದ ನಂತರ, ತಾಪಮಾನವು ಸಾಮಾನ್ಯವಾಗಿ ಸಾಮಾನ್ಯ ಸ್ಥಿತಿಗೆ ಮರಳಲು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

810


ಪುರುಷರು ಮತ್ತು ಮಹಿಳೆಯರು ಭಿನ್ನರಾಗಿದ್ದಾರೆ.
ಪುರುಷರೇ ಮಹಿಳೆಯರಿಗಿಂತ ಹೆಚ್ಚು ತಂಪಾಗಿರುತ್ತಾರೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಬದಲಾಗುತ್ತಿರುವ ಹಾರ್ಮೋನ್ ಮಟ್ಟಗಳಿಗೆ ತಾಪಮಾನವು ಪ್ರತಿಕ್ರಿಯಿಸುತ್ತದೆ. ಮಹಿಳೆಯರಲ್ಲಿ ದೇಹದ ತಾಪಮಾನವು ಅವರ ಋತುಚಕ್ರದ ಹಂತವನ್ನು ಅವಲಂಬಿಸಿ ಬದಲಾಗುತ್ತದೆ. ಪುರುಷರಲ್ಲಿ ದೇಹದ ತಾಪಮಾನವು ಅವನ ವೃಷಣಗಳ ಬಳಿ ಆಗಾಗ್ಗೆ ಬಿಸಿಯಾಗಿರುತ್ತದೆ. ಒಟ್ಟಲ್ಲಿ ಹೇಳುವುದಾದರೆ ಪುರುಷರಿಗಿಂತ ಮಹಿಳೆಯರ ದೇಹದ ತಾಪಮಾನ ಹೆಚ್ಚಾಗಿರುತ್ತದೆ. 

910

ದೇಹದ ಉಷ್ಣತೆ ಹೆಚ್ಚುವುದು ನಿದ್ರೆಗೆ ಅಡ್ಡಿ
ದೇಹದ ತಾಪಮಾನವು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆಮ್ ಸ್ಟರ್ ಡ್ಯಾಮ್ ನ ನೆದರ್ಲ್ಯಾಂಡ್ಸ್ ಇನ್ಸ್ಟಿಟ್ಯೂಟ್ ಫಾರ್ ನ್ಯೂರೋಸೈನ್ಸ್ ನ ವಿಜ್ಞಾನಿಗಳು ಚರ್ಮವು ತಂಪಾಗಿದ್ದಾಗ ಜನರು ಉತ್ತಮವಾಗಿ ನಿದ್ರೆ ಮಾಡುತ್ತದೆ ಎಂದು ಕಂಡುಕೊಂಡರು. ಸಮೀಕ್ಷೆಯ ಸ್ಪರ್ಧಿಗಳಿಗೆ ಚರ್ಮದ ತಾಪಮಾನವನ್ನು ಕಡಿಮೆ ಮಾಡುವ ವಿಶೇಷ ಸೂಟ್ ಗಳನ್ನು ನೀಡಲಾಯಿತು. ಸ್ಪರ್ಧಿಗಳು ಹೆಚ್ಚು ಆಳವಾಗಿ ಮಲಗಿದರು. ವಿಶೇಷವಾಗಿ ನಿದ್ರಾಹೀನತೆಯ ಬಗ್ಗೆ ದೂರು ನೀಡಿದ ವಯಸ್ಸಾದ ಸ್ಪರ್ಧಿಗಳಲ್ಲಿ ಉತ್ತಮ ಫಲಿತಾಂಶಗಳು ತೋರಿಸಿವೆ.

1010

ಕೆಂಪು ಮೆಣಸಿನಕಾಯಿ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚುತ್ತದೆ 
ಮಸಾಲೆಯುಕ್ತ ಆಹಾರ ಸೇವಿಸಿದರೆ ದೇಹದ ತಾಪಮಾನವನ್ನು ಹೆಚ್ಚಿಸಬಹುದು - ಮತ್ತು  ಚಯಾಪಚಯ. ಶರೀರಶಾಸ್ತ್ರ ಮತ್ತು ನಡವಳಿಕೆಯಲ್ಲಿ ಪ್ರಕಟವಾದ ಅಧ್ಯಯನವು ಸ್ಪರ್ಧಿಗಳು ತಮ್ಮ ಆಹಾರಕ್ಕೆ ಸುಮಾರು 1 ಗ್ರಾಂ ಕೆಂಪು ಮೆಣಸು ಸೇರಿಸಿದ್ದರು. ಅವರ ಪ್ರಮುಖ ದೇಹದ ತಾಪಮಾನವು ಏರಿತು, ಆದರೆ  ಚರ್ಮದ ತಾಪಮಾನವು ಕಡಿಮೆಯಾಗಿತ್ತು. ಈ ಹೆಚ್ಚಿದ ಶಾಖಉತ್ಪಾದನೆಯು ಹಸಿವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ತೂಕ ಇಳಿಕೆಗೆ ಸಹಾಯಕ. 
 

click me!

Recommended Stories