ತುಳಸಿ ಹಾಲು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

First Published May 29, 2021, 12:12 PM IST

ತುಳಸಿ ಎಲೆಗಳಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಹಲವಾರು ರೀತಿಯ ಗಂಭೀರ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಜನರು ತುಳಸಿ ಎಲೆಗಳಿಂದ ಮಾಡಿದ ಕಷಾಯವನ್ನು ಕುಡಿಯುವ ಮೂಲಕ ತಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತಿದ್ದಾರೆ. ಆದರೆ ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಮತ್ತು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? 

ತುಳಸಿ ಮತ್ತು ಹಾಲು ಎರಡು ಆರೋಗ್ಯಕ್ಕೆ ಉತ್ತಮವಾದ ಆಹಾರ. ಎರಡನ್ನೂ ಜೊತೆಯಾಗಿ ಸೇವಿಸಿದರೆ ಆರೋಗ್ಯಕ್ಕೆ ಮತ್ತಷ್ಟು ಉತ್ತಮ. ತುಳಸಿ ಹಾಲು ಕುಡಿಯುವ ಮೂಲಕ ಯಾವ ರೋಗಗಳನ್ನು ತಪ್ಪಿಸಬಹುದು ಮತ್ತು ಅದನ್ನು ತಯಾರಿಸಲು ಸರಿಯಾದ ವಿಧಾನ ಮತ್ತು ಅದನ್ನು ಕುಡಿಯಲು ಸರಿಯಾದ ಸಮಯ ಯಾವುದು ಎಂದು ತಿಳಿಯಿರಿ..
undefined
ತುಳಸಿ ಹಾಲನ್ನು ಸೇವಿಸುವುದು ಹೇಗೆ?ತುಳಸಿ ಹಾಲು ತಯಾರಿಸಲು ಮೊದಲು ಒಂದೂವರೆ ಲೋಟ ಹಾಲನ್ನು ಕುದಿಸಬೇಕು. ಹಾಲು ಕುದಿಸಿದ ಮೇಲೆ 8 ರಿಂದ 10 ತುಳಸಿ ಎಲೆಗಳನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿ. ಹಾಲು ಒಂದು ಲೋಟ ಉಳಿದಿರುವಾಗ ಗ್ಯಾಸ್ ಆಫ್ ಮಾಡಿ. ಹಾಲು ಉಗುರು ಬೆಚ್ಚಗಿದ್ದಾಗ ಸೇವಿಸಿ.
undefined
ಈ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಹೆಚ್ಚಾಗುತ್ತದೆ.ಜೊತೆಗೆ ನೀವು ನಿಮ್ಮನ್ನು ವಿವಿಧ ರೋಗಗಳಿಂದ ದೂರವಿರಿಸುತ್ತದೆ.
undefined
ಮೈಗ್ರೇನ್‌‌‌ಗೆಪರಿಹಾರತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿಕುಡಿದರೆ ತಲೆನೋವು ಅಥವಾ ಮೈಗ್ರೇನ್‌ನಂತಹ ರೋಗಗಳಲ್ಲಿ ಪರಿಹಾರ ಒದಗಿಸುತ್ತದೆ. ಈ ಸಮಸ್ಯೆಯಿಂದ ಬಹಳ ದಿನಗಳಿಂದ ಬಳಲುತ್ತಿದ್ದರೆ, ಚಹಾಬದಲು ತುಳಸಿ ಎಲೆಗಳನ್ನು ಹಾಲಿನಲ್ಲಿ ಪ್ರತಿದಿನ ಕುಡಿಯಬಹುದು.
undefined
ಒತ್ತಡ ನಿವಾರಣೆತುಳಸಿ ಎಲೆಗಳು ಔಷಧೀಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲದೆ ರೋಗ ಗುಣಪಡಿಸುವ ಗುಣಗಳನ್ನು ಒಳಗೊಂಡಿವೆ. ಕಚೇರಿ ಕೆಲಸದ ಬಗ್ಗೆಯೂ ಉದ್ವಿಗ್ನರಾಗಿದ್ದರೆ ಅಥವಾ ಕೌಟುಂಬಿಕ ವಿರಸದಿಂದಾಗಿ ಖಿನ್ನತೆಯಿಂದ ಬಳಲುತ್ತಿದ್ದರೆ, ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಖಿನ್ನತೆಯನ್ನು ನಿವಾರಿಸಲು ನೆರವಾಗುತ್ತದೆ.
undefined
ರೋಗನಿರೋಧಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮ ರೋಗ ನಿರೋಧಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಯಾವುದೇ ರೋಗವು ರೋಗ ನಿರೋಧಕ ಶಕ್ತಿ ದುರ್ಬಲವಾದಾಗ ಮಾತ್ರ ನಿಮ್ಮನ್ನು ಸುತ್ತುವರೆಯಬಹುದು.
undefined
ಇಂತಹ ಸಂದರ್ಭಗಳಲ್ಲಿ ತುಳಸಿ ಎಲೆಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಸ್ ನಿರೋಧಕ ಗುಣಗಳು ಶೀತ, ಕೆಮ್ಮು ಮತ್ತು ನೆಗಡಿಗಳಿಂದ ದೂರವಿರಿಸುತ್ತದೆ.
undefined
ಹೃದಯದ ಬಗ್ಗೆ ಕಾಳಜಿ ವಹಿಸುತ್ತದೆತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಲನ್ನು ಕುಡಿಯುವುದರಿಂದ ಹೃದ್ರೋಗಿಗಳಿಗೆ ಅಪಾರ ಪ್ರಯೋಜನವಾಗುತ್ತದೆ.
undefined
ಆಸ್ತಮಾದಲ್ಲಿ ಪ್ರಯೋಜನಗಳುಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ತುಳಸಿ ಹಾಲನ್ನು ಕುಡಿಯಿರಿ. ಈ ಮನೆಯ ಪಾಕವಿಧಾನವು ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ತೊಂದರೆಗಳಿಂದ ದೂರವಿಡುತ್ತದೆ.
undefined
ತಾಜಾತನ ನೀಡುತ್ತದೆಚಹಾ, ಕಾಫಿ ಬದಲಾಗಿ ತುಳಸಿ ಹಾಲು ಕುಡಿದರೆ ತಾಜಾತನದ ಅನುಭವ ಉಂಟಾಗುತ್ತದೆ. ಇದರಿಂದ ಮನಸ್ಸು ಉಲ್ಲಾಸವಾಗುತ್ತದೆ. ಜೊತೆಗೆ ಆರೋಗ್ಯವೂ ಉತ್ತಮವಾಗುತ್ತದೆ.
undefined
click me!