ಬೆಳಗ್ಗೆ ಬೇಗ ಎದ್ದರೆ ಯಾವುದೇ ಅವಸರವಿಲ್ಲದೆ ಅನೇಕ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದಾದರೂ, ಇದು ವ್ಯಾಯಾಮಕ್ಕೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ. ಪ್ರತಿದಿನ ಮುಂಜಾನೆ ಎದ್ದು ವ್ಯಾಯಾಮ, ಯೋಗ, ನಡಿಗೆ ಮುಂತಾದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಮತ್ತು ಇದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅವಸರವಿಲ್ಲ ಮನೆ ಮತ್ತು ಶಾಲೆ, ಕಾಲೇಜು, ಕಚೇರಿಗೆ ಹೋಗಲು ಕೂಡ ತಯಾರಿ ನಡೆಸಬಹುದು.

ದಿನದ ಯೋಜನೆಗಳನ್ನು ರೂಪಿಸಬಹುದು
ಬೆಳಗ್ಗೆ ಬೇಗನೆ ಎದ್ದೇಳುವುದರಿಂದ ಒಬ್ಬ ವ್ಯಕ್ತಿ ಉಲ್ಲಾಸಗೊಳ್ಳುತ್ತಾನೆ ಮತ್ತು ನಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತಾನೆ. ಇದರಿಂದ ಯಾವುದಕ್ಕೂ ಧಾವಂತಪಡಬೇಕಾಗಿಲ್ಲ.

ಬೆಳಿಗ್ಗೆ ಎದ್ದರೆ ಯಾವುದೇ ಕಾರ್ಯಗಳನ್ನು ವಿಚಲಿತರಾಗದೆ ವೇಗವಾಗಿ ಪೂರ್ಣಗೊಳಿಸಬಹುದು. ಅದೇ ಸಮಯದಲ್ಲಿ ನಿಮ್ಮ ದಿನದ ಯೋಜನೆಯನ್ನು ರೂಪಿಸುವ ಬಗ್ಗೆ ಉತ್ತಮವಾಗಿ ಯೋಚಿಸಬಹುದು. ಜೊತೆಗೆ ಮಾನಸಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ.

ಬೆಳಿಗ್ಗೆಯ ಉಪಾಹಾರವನ್ನು ತಪ್ಪಿಸಿಕೊಳ್ಳಬೇಕಾಗಿಲ್ಲ
ಮುಂಜಾನೆ ಎದ್ದರೆ ಆರೋಗ್ಯಕರ ಉಪಾಹಾರ ತಯಾರಿಸಲು ಸಮಯ ಸಿಗುತ್ತದೆ. ಬೇಗ ಎಚ್ಚರಗೊಳ್ಳುವವರಿಗೆ ತಮ್ಮ ಕುಟುಂಬಕ್ಕೆ ಆರೋಗ್ಯಕರ ಉಪಾಹಾರವನ್ನು ಸುಲಭವಾಗಿ ತಯಾರಿಸಲು ಸಾಕಷ್ಟು ಸಮಯ ಸಿಗುತ್ತದೆ. ಬೆಳಗಿನ ಉಪಾಹಾರ ಉತ್ತಮ ಆರೋಗ್ಯಕ್ಕಾಗಿ ಬೇಕಾಗುವ ಒಂದು ಪ್ರಮುಖ ಆಹಾರ. ಇದು ದಿನವನ್ನು ಪ್ರಾರಂಭಿಸಲು ಶಕ್ತಿಯನ್ನು ಒದಗಿಸುತ್ತದೆ

ತಡವಾಗಿ ಎಚ್ಚರಗೊಳ್ಳುವುದರಿಂದ ನಾವು ಉಪಾಹಾರವನ್ನು ಕೆಲವೊಮ್ಮೆ ಸ್ಕಿಪ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ, ಹಗಲಿನಲ್ಲಿ ಹಸಿವನ್ನು ಅನುಭವಿಸುವಾಗ, ಸಕ್ಕರೆ ಅಥವಾ ಕೊಬ್ಬಿನ ಆಹಾರವನ್ನು ತಿನ್ನುವ ಮೂಲಕ ಹಸಿವನ್ನು ಶಾಂತಗೊಳಿಸುತ್ತೀರಿ. ಇದು ಆರೋಗ್ಯಕ್ಕೆ ಅಪಾಯಕಾರಿ. ಇದರಿಂದ ಬೊಜ್ಜು ಹೆಚ್ಚುತ್ತದೆ.

ಒತ್ತಡ ಮುಕ್ತ ಜೀವನ
ಬೇಗನೆ ಎದ್ದೇಳುವುದು ದಿನವನ್ನು ಯೋಜಿಸುವ ಅವಕಾಶವನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪೂರ್ವ ಯೋಜನೆ ಮಾಡಿ ಬೇಗ ಕೆಲಸವನ್ನು ಪೂರ್ಣಗೊಳಿಸಬಹುದು. ಮತ್ತು ಇದರಿಂದ ಒತ್ತಡಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ.

ಬೇಗನೆ ಎಚ್ಚರವಾದಾಗ, ಒತ್ತಡದಿಂದ ಮುಕ್ತರಾಗಲು ಈ ಸಮಯವನ್ನು ಬಳಸಲು ಸಾಕಷ್ಟು ಸಮಯ ದೊರೆಯುತ್ತದೆ. ಇದು ಶಾಂತ ಮನಸ್ಸಿನಿಂದ ಕೆಲಸ ಪ್ರಾರಂಭಿಸಲು ಸಹಾಯ ಮಾಡುತ್ತದೆ. ದಿನವಿಡೀ ಶಾಂತ ಮನಸ್ಸಿನಿಂದ ಇರಲು ಸಾಧ್ಯವಾಗುತ್ತದೆ.

ಉತ್ತಮ ನಿದ್ರೆ ಬರುತ್ತದೆ
ಬೇಗ ಎದ್ದು ಕಾರ್ಯ ಮಾಡುವವರು ಬೇಗನೆ ನಿದ್ರೆಗೆ ಜಾರುತ್ತಾರೆ. ಅಂದರೆ ರಾತ್ರಿ ಬೇಗನೆ ಮಲಗುತ್ತೀರಿ. ಬೇಗ ಏಳುವ ಅಭ್ಯಾಸವು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.

ಸಕಾರಾತ್ಮಕತೆಯ ಭಾವನೆ
ಬೇಗನೆ ಎದ್ದೇಳುವುದು ನಮ್ಮಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ. ಒಂದು ಸಂಶೋಧನೆಯು ಬೇಗನೆ ಎಚ್ಚರಗೊಳ್ಳುವ ಜನರು ಸ್ವಲ್ಪ ಸಮಯದವರೆಗೆ ಮಾತ್ರವಲ್ಲದೆ, ತಮ್ಮ ಜೀವನದುದ್ದಕ್ಕೂ ಸಂತೋಷವಾಗಿರುತ್ತಾರೆ ಎಂದು ಸೂಚಿಸಿದೆ.

ದೈನಂದಿನ ವ್ಯಾಯಾಮ
ಬೆಳಿಗ್ಗೆ ವ್ಯಾಯಾಮ ಮಾಡುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಅಡ್ರಿನಾಲಿನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ದಿ ಅಮೇರಿಕನ್ ಸ್ಲೀಪ್ ನ ವರದಿಯ ಪ್ರಕಾರ, ಅಡ್ರಿನಾಲಿನ್ ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ. ಇದು ನಿದ್ರೆಯನ್ನು ನಿವಾರಿಸುತ್ತದೆ. ಬೆಳಗ್ಗೆ ಬೇಗ ಎದ್ದರೆ ಬೇಗನೆ ವ್ಯಾಯಾಮ ಮಾಡಿ ದಿನವಿಡೀ ಆ್ಯಕ್ಟಿವ್ ಆಗಿರಬಹುದು.