ಉತ್ತಮ ಆರೋಗ್ಯಕ್ಕಾಗಿ ಕೀಟನಾಶಕಗಳು, ಸಂಸ್ಕರಿಸಿದ, ಪಾಶ್ಚರೀಕರಿಸಿದ ಅಥವಾ ಬೇರೆ ಯಾವುದೇ ರೀತಿಯಲ್ಲಿ ಸಂಸ್ಕರಿಸುವ ಆಹಾರಗಳನ್ನು ತಪ್ಪಿಸಬೇಕು. ಬದಲಾಗಿ, ಆಹಾರವನ್ನು ನೆನೆಸುವುದು, ರಸವನ್ನು ಹೊರತೆಗೆಯುವುದು, ಮೊಳಕೆಯೊಡೆಯುವುದು ಮುಂತಾದ ರೀತಿಯಲ್ಲಿ ಪೂರೈಸಬಹುದು. ಇಲ್ಲಿ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇದೆ. ಅದೇನೆಂದರೆ ಹೆಚ್ಚಿನ ಆಹಾರಗಳನ್ನು ಬೇಯಿಸುವ ಬದಲಾಗಿ ಹಸಿಯಾಗಿ ಸೇವಿಸಬೇಕು. ಆಗ ಅವುಗಳಲ್ಲಿರುವ ಪೋಷಕಾಂಶಗಳ ಪ್ರಯೋಜನ ಪಡೆಯಬಹುದು.