ಗೊಂಗುರ ಪಚ್ಚಡಿ ಇದು ಹೆಚ್ಚಾಗಿ ಆಂಧ್ರ ಪ್ರದೇಶದಲ್ಲಿ ಎಲ್ಲಕಡೆ ತಯಾರಿಸುವ ಪ್ರಸಿದ್ಧ ಆಹಾರ. ಒಡಿಸ್ಸಾ, ಅರುಣಾಚಲ ಪ್ರದೇಶ , ತ್ರಿಪುರ, ಬಾಂಗ್ಲಾದೇಶದ ಕೆಲವೆಡೆಗೊಂಗುರವನ್ನು ಬೆಳೆಸುತ್ತಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇದನ್ನು ಪುಂಡಿಪಲ್ಲೆ ಎನ್ನುತ್ತಾರೆ. ಇದನ್ನು ಜೋಳದ ರೊಟ್ಟಿ, ರಾಗಿಮುದ್ದೆ ಜೊತೆ ಪಲ್ಯ, ಗೊಜ್ಜು, ಸಾಂಬಾರ್ ಮಾಡಿ ತಿನ್ನುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಕೆಂಪುದಂಟು ಮತ್ತು ಹಸಿರು ದಂಟು ಎಂಬುದಾಗಿ ವಿಂಗಡಿಸಲಾಗಿದೆ.
ಇದರ ಆರೋಗ್ಯಕರ ಉಪಯೋಗಗಳು ಇಲ್ಲಿವೆ.ಗೊಂಗುರ ಇದರ ಎಲೆ ಮತ್ತು ಹೂವು ದೇಹಕ್ಕೆ ತಂಪನ್ನು ನೀಡುತ್ತದೆ. ಇದು ಮೂತ್ರಕೋಶದ ಬೇಡದ ಕಲ್ಮಷಗಳನ್ನು ಹೊರ ಹಾಕುತ್ತದೆ. ಅಲ್ಲದೆ ದಿನನಿತ್ಯಸೇವನೆಯು ರಕ್ತದಕೆಂಪುಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ರಕ್ತವನ್ನು ಶುದ್ಧಿಕರಿಸುತ್ತದೆ.
ಪುಂಡಿಪಲ್ಲೆ (ಗೊಂಗುರ ಎಲೆ ) ಇದರಲ್ಲಿ ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಅಂಶಗಳಿದ್ದು, ರಕ್ತದೊತ್ತಡ ಕಡಿಮೆ ಮಾಡುತ್ತದೆ. ಅಲ್ಲದೆ ಕೆಟ್ಟ ಬೊಜ್ಜನ್ನು ಕರಗಿಸುತ್ತದೆ.
ಈ ಎಲೆಯನ್ನು ದಿನ ನಿತ್ಯ ಸೇವಿಸಿದಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಬೊಕ್ಕ ತಲೆ ಆಗದಂತೆ ತಡೆಯುತ್ತದೆ . ಕೂದಲಿಗೆ ಹೊಳಪನ್ನು ನೀಡುತ್ತದೆ.
ಎದೆ ಹಾಲು ಉತ್ಪತ್ತಿ ನಿಲ್ಲಬೇಕೆಂದರೆ ಗೊಂಗುರ ಎಲೆಯನ್ನು ನಿಯಮಿತವಾಗಿ ತಿಂದರೆ ಎದೆ ಹಾಲು ಉತ್ಪತ್ತಿಯಾಗುವುದು ನಿಲ್ಲುತ್ತದೆ. ಮಗುವಿಗೆ ಎದೆಹಾಲು ಕೊಡುತ್ತಿದ್ದರೆ ಈ ಸೊಪ್ಪಿನ ಸೇವನೆ ಮಾಡಲೇಬಾರದು.
ಗೊಂಗುರ ಎಲೆಯ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು. ವೈಜ್ಞಾನಿಕವಾಗಿ ತಿಳಿದಪ್ರಕಾರ ಗೊಂಗರು ಎಲೆಯಲ್ಲಿ ಇರುವ ಆ್ಯಂಟಿಆ್ಯಕ್ಸಿಡೆಂಟ್ ಕ್ಯಾನ್ಸರ್ ಅನ್ನು ಉಂಟು ಮಾಡುವ ಮಲಿಗ್ನಾನ್ಟ್ ಕೋಶವನ್ನು ಬೆಳೆಯದಂತೆ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಗೊಂಗುರ ಎಲೆಯು ಬಾಯಿ ಹುಣ್ಣು ಬರದಂತೆ ತಡೆಯುತ್ತದೆ. ಉಗುರು ಸುತ್ತು ಹಾಗೆ ಚರ್ಮದ ಖಾಯಿಲೆಗಳಿಗೆ ರಾಮ ಬಾಣ.
ಗೊಂಗುರ ಎಲೆಯಲ್ಲಿನ ವಿಟಮಿನ್ ಎ ಇದು ಕಣ್ಣಿನ ದೃಷ್ಟಿಗೆ ಬಹಳ ಒಳ್ಳೆಯದು ಇರುಳುಗಣ್ಣು ಬರದಂತೆ ತಡೆಯುತ್ತದೆ.
ಗೊಂಗುರ ಎಲೆಯಲ್ಲಿನ ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಶಿಯಂ ಮೂಳೆಗಳನ್ನು ಸದೃಢವಾಗಿಡುತ್ತದೆ.
ಗೊಂಗುರ ಎಲೆಯಲ್ಲಿನ ಖನಿಜಾಂಶ ಮತ್ತು ವಿಟಮಿನ್ ಸಿ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮುಟ್ಟಿನ ಸಂದರ್ಭ ಆಗುವ ಅಧಿಕ ರಕ್ತ ಸ್ರಾವ ಆಗದಂತೆ ತಡೆಯುತ್ತದೆ. ಅಲ್ಲದೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಗೊಂಗುರ ಎಲೆ (ಪುಂಡಿ ಪಲ್ಲೆ ) ಸೇವಿಸಿ ಆರೋಗ್ಯವಂತರಾಗಿರಿ.