Diabetes Diet: ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಮೆಂತ್ಯೆ ಸೊಪ್ಪು

Published : Dec 08, 2022, 11:40 AM IST

ಡಯಾಬಿಟಿಸ್ ಇರುವವರು ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಎಂಬ ಬಗ್ಗೆ ಯಾವಾಗಲೂ ಗೊಂದಲಕ್ಕೆ ಒಳಗಾಗುತ್ತಾರೆ. ಆದ್ರೆ ಡಯಾಬಿಟಿಸ್ ರೋಗಿಗಳಿಗೆ ಮೆಂತ್ಯೆ ಸೊಪ್ಪು ಒಳ್ಳೇದು ಅನ್ನೋದು ನಿಮ್ಗೆ ಗೊತ್ತಿದ್ಯಾ ? ಚಳಿಗಾಲದಲ್ಲಿ,  ಮಧುಮೇಹ ರೋಗಿಗಳು ಮೆಂತ್ಯ ಎಲೆಗಳನ್ನು ಸೇವಿಸಬೇಕು, ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮೆಂತ್ಯ ಎಲೆಗಳು ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗುತ್ತವೆ ಎಂದು ತಿಳಿಯೋಣ…  

PREV
16
Diabetes Diet: ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಮೆಂತ್ಯೆ ಸೊಪ್ಪು

ಮೆಂತ್ಯ ಎಲೆಗಳು ಟೈಪ್ 1 ಮತ್ತು ಟೈಪ್ 2 ಮಧುಮೇಹ (type 1 and type 2 diabetes) ಎರಡಕ್ಕೂ ತುಂಬಾ ಪ್ರಯೋಜನಕಾರಿ. ಮಧುಮೇಹಿ ರೋಗಿಗಳ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಅನ್ನು ತಯಾರಿಸಲಾಗುವುದಿಲ್ಲ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೆಂತ್ಯದ ಸೇವನೆಯು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಮೆಂತ್ಯ ಎಲೆ ಯಾಕೆ ಸೇವಿಸಬೇಕು ಅನ್ನೋದನ್ನು ನೋಡೋಣ.

26

ಮೆಂತ್ಯ ಸೇವನೆಯ ಪ್ರಯೋಜನಗಳು

ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ: ಮೆಂತ್ಯ ಎಲೆಗಳು ಫೈಬರ್ ಜೊತೆಗೆ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೆಂತ್ಯ ಎಲೆಯ ಚಹಾವು ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ. ಅವುಗಳನ್ನು ಸೇವಿಸುವುದರಿಂದ ಆಮ್ಲೀಯತೆಯ ಸಮಸ್ಯೆಯನ್ನು ಸಹ ನಿವಾರಿಸುತ್ತೆ.

36

ಕೊಲೆಸ್ಟ್ರಾಲ್ (cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ:ಕೆಲವು ಅಧ್ಯಯನಗಳ ಪ್ರಕಾರ, ಮೆಂತ್ಯವು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಮೆಂತ್ಯ ಎಲೆಗಳು ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ರೂಪುಗೊಳ್ಳುವುದನ್ನು ತಡೆಯುತ್ತದೆ. 

46

ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹೆಚ್ಚಿಸಲು ಸಹಾಯ ಮಾಡುತ್ತದೆ: ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸಲು ಮೆಂತ್ಯವು (fenugreek leaves) ಕೆಲಸ ಮಾಡುತ್ತದೆ. ಮೆಂತ್ಯವು ಫ್ಯುರೊಸ್ಟಾನೊಲಿಕ್ ಸಪೋನಿನ್ ಗಳನ್ನು ಹೊಂದಿರುತ್ತದೆ. ಇದು ಟೆಸ್ಟೋಸ್ಟೆರಾನ್ ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಮೆಂತ್ಯವು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.

56

ಹೃದ್ರೋಗಿಗಳಿಗೆ ಪ್ರಯೋಜನಕಾರಿ: ಮೆಂತ್ಯವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯ ರೋಗಿಗಳಿಗೆ ಅತ್ಯಗತ್ಯವಾಗಿದೆ. ಮೆಂತ್ಯದ ಎಲೆಗಳು ಗಿಡಮೂಲಿಕೆಗಳಂತೆ ಕೆಲಸ ಮಾಡುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾದಾಗ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. 

66

ತೂಕ ಇಳಿಸಿಕೊಳ್ಳಲು ಸಹಕಾರಿ: ಮೆಂತ್ಯವು ತೂಕ ಇಳಿಸಿಕೊಳ್ಳಲು (weight loss) ಸಹ ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಆಹಾರದಲ್ಲಿ ಮೆಂತ್ಯವನ್ನು ಸೇವಿಸಿ. ಏಕೆಂದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮೆಂತ್ಯಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಒಂದು ಕಪ್ ಮೆಂತ್ಯ ಸೊಪ್ಪಿನಲ್ಲಿ ಕೇವಲ 13 ಕ್ಯಾಲೋರಿಗಳಿವೆ. ಅದರ ಸ್ವಲ್ಪ ಪ್ರಮಾಣವನ್ನು ತಿನ್ನುವ ಮೂಲಕ, ನಿಮ್ಮ ಹೊಟ್ಟೆ ಚೆನ್ನಾಗಿ ತುಂಬಿದೆ ಎಂದು ನೀವು ಭಾವಿಸುತ್ತೀರಿ ಮತ್ತು ಇದರ ನಂತರ ನೀವು ಬೇಗನೆ ಹಸಿವಾಗುವುದಿಲ್ಲ. ಇದರಿಂದ ನೀವು ಹೆಚ್ಚು ತಿನ್ನುವುದನ್ನು ತಪ್ಪಿಸುವಿರಿ. ಆದ್ದರಿಂದ ತೂಕವು ಕಡಿಮೆಯಾಗುತ್ತದೆ.

Read more Photos on
click me!

Recommended Stories