ಬಿಸಿ ಹಾಲಿನ ಜೊತೆ ಮಖಾನಾ ಸೇವನೆಯಿಂದ ವೀರ್ಯಾಣು ವೃದ್ಧಿ

First Published | Jul 28, 2021, 4:58 PM IST

ಸಾವಯವ ಗಿಡಮೂಲಿಕೆ ಎಂದೂ ಕರೆಯಲ್ಪಡುವ ಮಖಾನಾ ಎಂಬ ಹೆಸರನ್ನು ಕೇಳಿರಬಹುದು. ಮಖಾನಾ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಅದರಲ್ಲಿರುವ ಪ್ರೋಟೀನ್ ಸದೃಢ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಹಾಲಿನೊಂದಿಗೆ ಬೆರೆಸಿ ಸರಿಯಾಗಿ ಸೇವಿಸಿದರೆ, ಅದು ದೇಹದಿಂದ ಅನೇಕ ರೋಗಗಳನ್ನು ತೆಗೆದು ಹಾಕುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಾಗಿದೆ. 

ಬಿಸಿ ಹಾಲಿನೊಂದಿಗೆ ಬೆರೆಸಿದ ಮಖಾನಾವನ್ನು ತಿನ್ನುವುದರಿಂದ ಪುರುಷರಲ್ಲಿ ದುರ್ಬಲತೆ ಮತ್ತು ಕಡಿಮೆ ವೀರ್ಯಾಣು ಸಮಸ್ಯೆಯನ್ನು ನಿವಾರಿಸಬಹುದು ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದಲ್ಲದೆ ಹಾಲಿನೊಂದಿಗೆ ಮಖಾನಾ ಸೇವಿಸುವುದರಿಂದ ಇರೋ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ..
ಬಿಸಿ ಹಾಲಿನೊಂದಿಗೆ ಬೆರೆಸಿದ ಮಖಾನಾ ತಿನ್ನುವ ಪ್ರಯೋಜನಗಳುಬಿಸಿ ಹಾಲಿನೊಂದಿಗೆ ಬೆರೆಸಿದ ಮಖಾನಾ ತಿನ್ನುವುದರಿಂದ, ಕೆಲವೇ ತಿಂಗಳಲ್ಲಿ, ದೈಹಿಕ ದೌರ್ಬಲ್ಯ ಶಾಶ್ವತವಾಗಿ ಕೊನೆಗೊಳ್ಳುತ್ತದೆ. ರಾತ್ರಿಯಲ್ಲಿ ಹಾಲಿನಲ್ಲಿ ಬೇಯಿಸಿದ ಮಖಾನಾವನ್ನು ಸೇವಿಸುವುದರಿಂದ, ಒತ್ತಡ ಕಡಿಮೆಯಾಗುವುದಲ್ಲದೇ ನಿದ್ರೆಯೂ ಉತ್ತಮವಾಗಿರುತ್ತದೆ.
Tap to resize

ಪ್ರತಿದಿನ ಬೆಳಿಗ್ಗೆ ಉಪಾಹಾರದಲ್ಲಿ ಹಾಲಿನೊಂದಿಗೆ 6-7 ಮಖಾನಾ ತಿಂದರೆ, ಮಧುಮೇಹವನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು.
ಕಬ್ಬಿಣ, ಪ್ರೋಟೀನ್, ಮೆಗ್ನೀಷಿಯಮ್ ಮತ್ತು ಪೊಟ್ಯಾಷಿಯಮ್‌ನಂಥ ಪೋಷಕಾಂಶಗಳು ಮಖಾನಾದಲ್ಲಿ ಕಂಡುಬರುತ್ತವೆ, ಇದು ಗರ್ಭಾವಸ್ಥೆಯಲ್ಲಿ ಮಹಿಳೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಹಾಲಿನಲ್ಲಿ ಮಖಾನಾವನ್ನು ಕುದಿಸಿ ಮತ್ತು ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳಿಂದ ತ್ವರಿತ ಪರಿಹಾರ ನೀಡಬಲ್ಲದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಪ್ರತಿ ರಾತ್ರಿಯೂ ಹಾಲಿನಲ್ಲಿ ಬೇಯಿಸಿದ ಮಖಾನಾ ಸೇವಿಸುವುದರಿಂದ ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ ಏಕೆಂದರೆ ಮಖಾನಾ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಹಾಲಿನ ಹೊರತಾಗಿ, ಮಖಾನಾ ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಕೀಲು ನೋವು, ಸಂಧಿವಾತದಂತಹ ಕಾಯಿಲೆಗಳಲ್ಲಿ ಇದರ ಸೇವನೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಮಖಾನಾ ಉತ್ಕರ್ಷಣ ನಿರೋಧಕ ಗುಣಗಳಿಗೆ ಹೆಸರುವಾಸಿ.
ಮಖಾನಾದ ವಿಶೇಷ ಗುಣಲಕ್ಷಣಗಳಿಂದಾಗಿ, ಚರ್ಮದ ಮೇಲಿನ ಸುಕ್ಕುಗಳನ್ನು ತೆಗೆದುಹಾಕುತ್ತದೆ. ತ್ತು ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ಮಖಾನಾದಲ್ಲಿ ಫೈಬರ್ ಪ್ರಮಾಣವೂ ಹೆಚ್ಚಿದೆ. ಅದನ್ನು ಹೆಚ್ಚು ಸೇವಿಸಿದರೆ ಅಲರ್ಜಿ ಕೂಡ ಉಂಟಾಗಬಹುದು, ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಮಖಾನಾವನ್ನು ಸೇವಿಸಬೇಡಿ ಮತ್ತು ಅಂತಹ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಮಖಾನಾವನ್ನು ಫ್ರೈ ಮಾಡಿ ಲಘು ಆಹಾರವಾಗಿ ಸೇವಿಸಬಹುದು. ಮಖಾನಾ ಖೀರ್ ತಯಾರಿಸಬಹುದು ಮತ್ತು ತಿನ್ನಬಹುದು. 6-7 ಮಖಾನಗಳನ್ನು ಮಾತ್ರ ಬಿಸಿ ಹಾಲಿನಲ್ಲಿ ಸೇವಿಸಿ ಈ ಪ್ರಮಾಣ ಅರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.

Latest Videos

click me!