ಮೀನು ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರ. ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ. ಇದು ಉರಿಯೂತ ಕಡಿಮೆ ಮಾಡುತ್ತದೆ. ಹೃದಯ ಸಮಸ್ಯೆಯಿಂದ ದೂರವಿರುತ್ತೀರಿ.
ಪ್ರತಿ ದಿನ ಮೀನನ್ನು ಆಹಾರದ ಜೊತೆ ಸೇವಿಸಿದರೆ ಹೃದಯದ ಅರೋಗ್ಯ ಚೆನ್ನಾಗಿರುತ್ತದೆ. ವಿವಿಧ ರೀತಿಯ ಖಾದ್ಯಗಳನ್ನಾಗಿ ಇದನ್ನು ಸೇವಿಸಬಹುದು.
ಒಮೆಗಾ-3 ಕೊಬ್ಬಿನಾಮ್ಲ ಮತ್ತು ಸೆಲೆನಿಯಂಬಂಗುಡೆ ಮೀನಿನಲ್ಲಿದೆ. ಇದನ್ನು ಸೇವಿಸಿದರೆ ಚರ್ಮ, ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ.
ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರ. ಪ್ರತಿದಿನವೂ ಮೀನು ಸೇವಿಸಿದರೆ ಅದರಿಂದ ಅಲ್ಝೆಮರ್ ಕಾಯಿಲೆಯ ಅಪಾಯ ತಗ್ಗಿಸಬಹುದು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಿದೆ. ಇದು ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ದೇಹವು ಗಟ್ಟಿಮುಟ್ಟಾಗಿರಿಸುತ್ತದೆ.
ಪಿರಿಯಡ್ಸ್ಸಮಸ್ಯೆಗೂ ಮೀನು ರಾಮಬಾಣ. ಮೀನೆಣ್ಣೆಯಲ್ಲಿರುವ ವಿಟಮಿನ್ ಬಿ12 ಮಹಿಳೆಯರ ಋತುಸ್ರಾವದ ಸಮಸ್ಯೆ ನಿವಾರಿಸುತ್ತದೆ.
ಮೀನು ಮತ್ತು ಮೀನಿನ ಎಣ್ಣೆಯು ಖಿನ್ನತೆ ದೂರ ಮಾಡಬಲ್ಲದು.ಇದರಿಂದ ಮಾನಸಿಕ ಆರೋಗ್ಯವು ಉತ್ತಮವಾಗುತ್ತದೆ. ಆತಂಕ, ಒತ್ತಡ ಮೊದಲಾದ ಸಮಸ್ಯೆಗಳು ಸಹ ದೂರವಾಗುತ್ತವೆ.
ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲವು ದೃಷ್ಟಿ ಸಮಸ್ಯೆ ನಿವಾರಿಸುತ್ತದೆ.ಇದರಿಂದ ಉತ್ತಮ ಕಣ್ಣಿನ ಅರೋಗ್ಯ ಪಡೆದುಕೊಳ್ಳಬಹುದು.
ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಿಂದ ದೇಹದ ಅರೋಗ್ಯ ಉತ್ತಮವಾಗಿರುತ್ತದೆ.
ಬಂಗುಡೆ ಮೀನಿನಲ್ಲಿ ಖನಿಜಾಂಶಗಳಾಗಿರುವ ಸೆಲೆನಿಯಂ, ತಾಮ್ರ, ರಂಜಕ, ಮೆಗ್ನಿಶಿಯಂ ಮತ್ತು ಕಬ್ಬಿನಾಂಶವಿದೆ. ಇವು ದೇಹವನ್ನು ಸ್ಟ್ರಾಂಗ್ ಆಗಿರುವಂತೆ ಮಾಡುತ್ತವೆ.