ಖಿನ್ನತೆಯಿಂದ ಬಳಲುತ್ತಿದ್ದರೆ ಈ ಕೆಲಸ ಮಾಡಲೇಬೇಡಿ...

First Published | Jul 26, 2021, 11:16 AM IST

ಖಿನ್ನತೆಯಲ್ಲಿ ವ್ಯಕ್ತಿಯು ಅನೇಕ ಮಿತಿಗಳಲ್ಲಿ ತನ್ನನ್ನು ತಾನು ಮರೆಯುತ್ತಾನೆ, ಯಾವುದೋ ಒಂದು ಸಂಕಷ್ಟಕ್ಕೆ ಸಿಲುಕಿರುವಂತೆ ಇರುತ್ತಾನೆ, ಜೀವನದಲ್ಲಿ ವಿಷಯಗಳು ಎಂದಿಗೂ ಬದಲಾಗುವುದಿಲ್ಲ ಎಂದು ಅವನು ಭಾವಿಸಲು ಪ್ರಾರಂಭಿಸುತ್ತಾನೆ ಮತ್ತು ಅಲ್ಲಿಯೇ ಖಿನ್ನತೆ ಪ್ರಾರಂಭವಾಗುತ್ತದೆ. ಖಿನ್ನತೆಯಲ್ಲಿರುವ ವ್ಯಕ್ತಿಯ ಭಾವನೆಗಳು ಅನಿಯಂತ್ರಿತವಾಗುತ್ತವೆ ಎಂಬುವುದು ನಿಜ, ಆದರೆ ಅವನು ನಿಯಂತ್ರಿಸಬಹುದಾದ ಭಾವನೆಗಳು ಸಹ ನಿಜ. ಈ ನಿಯಂತ್ರಣವನ್ನು ಪಡೆಯಲು ಅವನು ಎಂದಿಗೂ ಖಿನ್ನತೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಇಲ್ಲದಿದ್ದರೆ ಖಿನ್ನತೆಯಿಂದ ಹೊರಬರುವ ಪ್ರಕ್ರಿಯೆ ನಿಧಾನವಾಗಿರಬಹುದು.

ಖಿನ್ನತೆಯಲ್ಲಿ ಏನು ಮಾಡಬಾರದು?ಖಿನ್ನತೆಯಲ್ಲಿರುವ ವ್ಯಕ್ತಿಯ ಮನ ಒಲಿಸುವುದು ಕಷ್ಟ, ಆದರೆ ನೀವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಖಿನ್ನತೆಯಿಂದ ಹೊರ ಬರಲು ಇದು ಅಗತ್ಯವಾಗಿದೆ. ಖಿನ್ನತೆಯ ಸಮಯದಲ್ಲಿ ಯಾವುದನ್ನು ಮಾಡುವುದು ತಪ್ಪು ಎನ್ನುವ ಮಾಹಿತಿ ಇಲ್ಲಿದೆ.
undefined
ಖಿನ್ನತೆಯಿಂದ ಹೊರ ಬರಲು ಹತ್ತಿರವಾಗಿರುವವರ ಬೆಂಬಲ ಬೇಕಾಗುತ್ತದೆ. ವಾಸ್ತವವಾಗಿ, ನಮಗೆ ಹತ್ತಿರವಿರುವ ಜನರು ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಆದರೆ ನಾವು ಅವರಿಂದ ದೂರವಿರುತ್ತೇವೆ. ಅದು ತಪ್ಪು.
undefined

Latest Videos


ಖಿನ್ನತೆಯಿಂದ ಬಳಲುತ್ತಿರುವ ಆ ಸಮಯದಲ್ಲಿ ಸ್ವಯಂ ನಿಯಂತ್ರಣದ ಮುಖ್ಯ ಜೊತೆಗೆ ನಿಕಟರನ್ನು ಭೇಟಿಯಾಗುವುದನ್ನು, ಮಾತನಾಡುವುದನ್ನು ನಿಲ್ಲಿಸಬೇಡಿ. ಇದನ್ನು ಮುಂದುವರಿಸಿದರೆ ಮನಸ್ಸಿಗೆ ಧೈರ್ಯ ಸಿಗುತ್ತದೆ.
undefined
ಖಿನ್ನತೆ ಅಥವಾ ಒತ್ತಡದಲ್ಲಿ ಆಲ್ಕೋಹಾಲ್ ಸೇವಿಸಲು ಪ್ರಾರಂಭಿಸುವುದು ತಪ್ಪು. ಇದು ಆಲ್ಕೋಹಾಲ್ ವ್ಯಸನಕ್ಕೆ ಕಾರಣವಾಗುತ್ತದೆ ಮತ್ತು ನಿಮ್ಮ ದೇಹಕ್ಕೆ ಹಾನಿಯಾಗುವುದು ಖಚಿತ.
undefined
ಸ್ವತಃ ಖಿನ್ನತೆಯಲ್ಲಿರುವಾಗ, ಖಿನ್ನತೆಯ ವಾತಾವರಣದಲ್ಲಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಬದುಕುವುದರಿಂದ ಮನಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಮನಸ್ಸಿಗೆ ತಪ್ಪು ಆಲೋಚನೆಗಳನ್ನು ತರುತ್ತದೆ.
undefined
ಖಿನ್ನತೆಯಿಂದ ಬಳಲುತ್ತಿದ್ದರೆ, ಸಾಧ್ಯವಾದಷ್ಟು ಆಹ್ಲಾದಕರ ವಾತಾವರಣದಲ್ಲಿ ಜೀವಿಸಲು ಕಲಿಯಬೇಕು.. ಇದು ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
undefined
ಖಿನ್ನತೆಯ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ. ಈ ಆಲೋಚನೆಗಳು ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಚಿಂತನೆ ಸೃಷ್ಟಿಸುವ ಪರಿಸರಗಳು, ವ್ಯಕ್ತಿಗಳು, ವಿಷಯಗಳು ಇತ್ಯಾದಿಗಳಿಂದ ನೀವು ದೂರ ಇರಬೇಕು.
undefined
ಸಕಾರಾತ್ಮಕ ಜನರು, ಪರಿಸರ ಮತ್ತು ವಿಷಯಗಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಬೇಗನೆ ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.
undefined
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಜನರೊಂದಿಗೆ ಬೇರ್ಪಟ್ಟು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾನೆ. ಇದು ಹೆಚ್ಚಿನ ನೆಮ್ಮದಿ ನೀಡುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಖಿನ್ನತೆಯಲ್ಲಿ ಹೀಗೆ ಮಾಡುವುದು ತಪ್ಪು.
undefined
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ನಕಾರಾತ್ಮಕ ಸನ್ನಿವೇಶಗಳು, ವಿಷಯಗಳು, ಜನರ ಹಾಸ್ಯಗಳು ಇತ್ಯಾದಿಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಖಿನ್ನತೆಗೆ ಕಾರಣವಾಗಬಹುದು.
undefined
click me!