ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದು, ಕಣ್ಣುಗಳನ್ನು ರೋಸ್ ವಾಟರ್ನಿಂದ ತೊಳೆದುಕೊಳ್ಳುವುದು ಮತ್ತು ಪ್ರತಿದಿನ ಬೆಳಗ್ಗೆ ನಿಂಬೆನೀರು ಸೇವಿಸುವುದು, ಉಗುರು ಬೆಚ್ಚಗಿನ ನೀರು ಕುಡಿಯುವುದು ಆಯುರ್ವೇದದ ಉತ್ಪನ್ನಗಳನ್ನು ಬಳಸುವುದುಎಲ್ಲವೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಜೀವನಶೈಲಿಯನ್ನು ಸುಧಾರಿಸಬೇಕೆಂದರೆ ಆಯುರ್ವೇದದ ಈ 8 ಅಂಶಗಳನ್ನು ಇಂದಿನಿಂದ ಪಾಲಿಸಿ
undefined
ತುಪ್ಪಆಯುರ್ವೇದ ಔಷಧದ ಪ್ರಮುಖ ಔಷಧಗಳಲ್ಲಿ ತುಪ್ಪವೂ ಒಂದು. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೊಬ್ಬಿನ ಆಮ್ಲಗಳಿವೆ ಇದರಲ್ಲಿ.ಆಯುರ್ವೇದ ಔಷಧಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ತುಪ್ಪದಲ್ಲಿ ಹಾಲಿನ ಸೇವನೆಯಿಂದ ಉಂಟಾಗುವಂತಹ ಅಲರ್ಜಿಗಳು ಮತ್ತು ತೂಕ ಹೆಚ್ಚಳವಾಗುವ ಅಂಶಗಳು ಇರುವುದಿಲ್ಲ.
undefined
ಧ್ಯಾನಧ್ಯಾನದ ಕ್ರಿಯೆ ಸಾವಿರಾರು ವರ್ಷಗಳಷ್ಟು ಹಳೆಯದು.ಹೃದಯದ ಆರೋಗ್ಯ, ರಕ್ತದ ಸಕ್ಕರೆ ಮಟ್ಟ ಇಳಿಕೆ, ಕ್ರೀಡಾ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದು ಇವು ಧ್ಯಾನದ ವಿವಿಧ ಆರೋಗ್ಯ ಪ್ರಯೋಜನಗಳು.
undefined
ಲೈಫ್ ಸ್ಟೈಲ್ಸಿರ್ಕಾಡಿಯನ್ ಜೀವನಶೈಲಿ ಎಂದರೆ ದೇಹದ ನೈಸರ್ಗಿಕ ಚಕ್ರದೊಂದಿಗೆ ಸಾಮರಸ್ಯದಿಂದ ಜೀವಿಸುವುದು, ಅಂದರೆ ಬೆಳಗ್ಗೆ ಬೇಗನೆ ಏಳುವುದು, ಮತ್ತು ರಾತ್ರಿ ಬೇಗಮಲಗುವುದು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
undefined
ಪ್ರಾಣಾಯಾಮಈ ಉಸಿರಾಟದ ವ್ಯಾಯಾಮವನ್ನು ಆಯುರ್ವೇದದಲ್ಲಿ ಯೋಗ ಎಂದು ಕರೆಯಲಾಗುತ್ತದೆ.ಪ್ರಾಣಾಯಾಮ ಎಂದರೆ ದೇಹದ ಪ್ರತಿಯೊಂದು ಜೀವಕೋಶದಲ್ಲಿ ಚೈತನ್ಯವನ್ನು ವಿಸ್ತರಿಸುವುದು.
undefined
ಅಶ್ವಗಂಧಒತ್ತಡ, ಅಸೌಖ್ಯ ಮತ್ತು ನಿದ್ರೆಗೆ ಅಶ್ವಗಂಧವು ತುಂಬಾ ಸಹಾಯಕಾರಿ. ಇದೊಂದು ಗಿಡ ಮೂಲಿಕೆಯಾಗಿದ್ದು ದೇಹಕ್ಕೆ ಬಿಡುವಿಲ್ಲದ ದಿನದಲ್ಲಿ ಶಕ್ತಿಯನ್ನು ನೀಡುತ್ತದೆ.
undefined
ಅರಿಶಿನಅರಿಶಿನವು ದೇಹದ ಪ್ರತಿಯೊಂದೂ ಭಾಗದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಂದು ಭಾಗ ಕಾಳು ಮೆಣಸಿನ ಪುಡಿಗೆ, ಅರಿಶಿನ ಪುಡಿ ಬೆರೆಸಿ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.
undefined
ಜೀರ್ಣಕ್ರಿಯೆಗೆ ಮಸಾಲೆಶುಂಠಿ, ಜೀರಿಗೆ, ಏಲಕ್ಕಿ, ಕೊತ್ತಂಬರಿ, ಮತ್ತು ಸೋಂಪುನಂತಹ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ ಮತ್ತು ದೈನಂದಿನ ಆಹಾರದಲ್ಲಿ ಇದನ್ನು ಸುಲಭವಾಗಿ ಸೇರಿಸಬಹುದು.
undefined
ಎಣ್ಣೆ ಮಸಾಜ್ಎಣ್ಣೆ ಮಸಾಜ್ ಮಾಡುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಆಕ್ಸಿಟೋಸಿನ್‌ನಂತಹ ಆರೋಗ್ಯಕರ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ.
undefined