ಮಾರಣಾಂತಿಕ ಕ್ಯಾನ್ಸರ್‌ ಭೀತಿಯೇ? ಈ 8 ಆಹಾರ ಸೇವಿಸಿ ನಿಶ್ಚಿಂತರಾಗಿರಿ..!

First Published | Sep 17, 2023, 5:57 PM IST

ಯಾವ ಆಹಾರದಿಂದ ಕ್ಯಾನ್ಸರ್‌ ತಡೆಯಬಹುದು ಅಂತೀರಾ..? 8 ಆಹಾರಗಳ ಪಟ್ಟಿ ಹೀಗಿದೆ ನೋಡಿ.. 

ಕ್ಯಾನ್ಸರ್‌ ಅನ್ನೋದು ಈಗಲೂ ಸಹ ಭೀಕರ ಮಾರಣಾಂತಿಕ ಕಾಯಿಲೆಯಾಗಿದೆ. ಹಲವು ಆಹಾರಗಳ ಸೇವನೆಯಿಂದ್ಲೇ ಕ್ಯಾನ್ಸರ್‌ ರೋಗ ಬೇಗ ಬರುತ್ತೆ ಎಂತ ಹೇಳಲಾಗುತ್ತದೆ. ಹಾಗಾದ್ರೆ, ಯಾವ ಆಹಾರದಿಂದ ಕ್ಯಾನ್ಸರ್‌ ತಡೆಯಬಹುದು ಅಂತೀರಾ..? ಇಲ್ನೋಡಿ..

ದಾಲ್ಚಿನ್ನಿ (ಚಕ್ಕೆ): ದಾಲ್ಚಿನ್ನಿ ಅಥವಾ ಚಕ್ಕೆ ದೇಹದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆ, ಉರಿಯೂತದಿಂದ್ಲೂ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲದೆ, ಕ್ಯಾನ್ಸರ್‌ ಸೆಲ್‌ಗಳು ಹರಡುವುದನ್ನು ಸಹ ದಾಲ್ಚಿನ್ನಿ ಸಾರಗಳು ಬ್ಲಾಕ್‌ ಮಾಡುತ್ತದೆ. 

Tap to resize

ಆಲಿವ್ ಎಣ್ಣೆ: ಆಲೀವ್‌ ಎಣ್ಣೆ ಹಾಕಿದ ಆಹಾರ ಸೇವಿಸಿದರೆ ಕ್ಯಾನ್ಸರ್‌ ತಡೆಯಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಈ ಪೈಕಿ ಸ್ತನ ಕ್ಯಾನ್ಸರ್‌ ಹಾಗೂ ಜೀರ್ಣಾಂಗ ವ್ಯವಸ್ಥೆ ಸಂಬಂಧಿತ ಕ್ಯಾನ್ಸರ್‌ ತಡೆಯುತ್ತದೆ ಎಂದೂ ತಿಳಿದುಬಂದಿದೆ. 
 

ಅರಿಶಿನ: ಕರ್ಕ್ಯುಮಿನ್‌ ಎಂಬ ಅಂಶವನ್ನು ಅರಿಶಿನ ಒಳಗೊಂಡಿದ್ದು, ಇದು ಕ್ಯಾನ್ಸರ್‌ ಅನ್ನು ತಡೆಯಲು ಸಹಾಯ ಮಾಡುತ್ತದೆ. ಕರ್ಕ್ಯುಮಿನ್‌ ಕ್ಯಾನ್ಸರ್‌ ವಿರೋಧಿ ಎಫೆಕ್ಟ್‌ ಅನ್ನು ಹೊಂದಿದೆ. 
 

ಟೊಮ್ಯಾಟೋ: ಟೊಮ್ಯಾಟೋ ತಿನ್ನೋದ್ರಿಂದ್ಲೂ ಕ್ಯಾನ್ಸರ್‌ ತಡೆಯಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಲೈಕೋಪೀನ್‌ ಎಂಬ ಅಂಶವಿದ್ದು, ಇದು ಕ್ಯಾನ್ಸರ್‌ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.

ಕ್ಯಾರಟ್‌: ಕ್ಯಾರಟ್‌ ಹೊಂದಿರುವ ಹೆಚ್ಚು ಆಹಾರ ಸೇವಿಸಿದ್ರೂ ಸಹ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಅದರಲ್ಲೂ, ಹೊಟ್ಟೆಯ ಕ್ಯಾನ್ಸರ್‌ ಹಾಗೂ ಶ್ವಾಸಕೋಶ ಕ್ಯಾನ್ಸರ್‌ ಅನ್ನು ತಡೆಯಬಹುದು.

ಬ್ರೊಕೋಲಿ: ಬ್ರೊಕೋಲಿಯಲ್ಲಿರೋ ಸಲ್ಫೋರಫೇನ್‌ ಎಂಬ ಅಂಶ ಹೊಂದಿದ್ದು, ಇದು ಕ್ಯಾನ್ಸರ್‌ ಉಂಟಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅದರಲ್ಲೂ ಕೊಲೊರೆಕ್ಟಲ್‌ ಕ್ಯಾನ್ಸರ್‌ ಅನ್ನು ತಡೆಯುತ್ತದೆ.

ಬೀನ್ಸ್‌: ಬ್ರೊಕೋಲಿಯಂತೆಯೇ ಬೀನ್ಸ್‌ ಸಹ ಹೆಚ್ಚು ಫೈಬರ್‌ ಅಂಶ ಹೊಂದಿದೆ. ಈ ಹಿನ್ನೆಲೆ ಈ ತರಕಾರಿ ಸಹ ಕ್ಯಾನ್ಸರ್‌ ತಡೆಯೋಕೆ ಸಹಾಯ ಮಾಡಬಹುದು.
 

ಸಿಟ್ರಸ್‌ ಹಣ್ಣುಗಳು: ನಿಂಬೆ ಹಣ್ಣು ಹಾಗೂ ಕಿತ್ತಳೆಯಂತಹ ಸಿಟ್ರಸ್‌ ಹಣ್ಣುಗಳನ್ನು ಸೇವಿಸಿದರೆ ಉಸಿರಾಟ ಕ್ಯಾನ್ಸರ್‌ ಹಾಗೂ ಜೀರ್ಣಕಾರಿ ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 

Latest Videos

click me!