ಬೆರ್ರಿ: ಸ್ಟ್ರಾಬೆರಿ, ಬ್ಲೂಬೆರ್ರಿ, ರಾಸ್‌ಬೇರಿ - ಬೆರ್ರಿ ಹಣ್ಣುಗಳು ಹಲವು ವಿಧಗಳಲ್ಲಿ ಬರುತ್ತವೆ. ಇವುಗಳು ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ. ಇದು ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತನಾಳಗಳಲ್ಲಿ ಪ್ಲೇಕ್ ಶೇಖರಣೆಯಾಗುವುದನ್ನು ತಡೆಯುತ್ತದೆ. ಆದ್ದರಿಂದ ನಿಮಗೆ ಅವಕಾಶವಿದ್ದರೆ, ಸಾಂದರ್ಭಿಕವಾಗಿ ಬೆರ್ರಿ ಹಣ್ಣುಗಳನ್ನು ಖರೀದಿಸಿ ತಿನ್ನಿರಿ.
ಪಪ್ಪಾಯಿ: ಪಪ್ಪಾಯಿ ಎಲ್ಲಾ ಕಾಲಗಳಲ್ಲಿಯೂ ಲಭ್ಯವಿದೆ. ಇದು ವಿಟಮಿನ್ ಸಿ ಮತ್ತು ಪಪೈನ್ ಅನ್ನು ಹೊಂದಿರುತ್ತದೆ. ಇವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವುದನ್ನು ತಡೆಯುತ್ತದೆ ಮತ್ತು ರಕ್ತನಾಳಗಳಲ್ಲಿ ಪ್ಲೇಕ್ ಶೇಖರಣೆಯಾಗುವುದನ್ನು ತಡೆಯುತ್ತದೆ. ಆದ್ದರಿಂದ ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.
ಎಚ್ಚರ: ಮೇಲೆ ತಿಳಿಸಿದ ಹಣ್ಣುಗಳಲ್ಲಿ ಯಾವುದಾದರೂ ಒಂದನ್ನು ನಿಯಮಿತವಾಗಿ ಸೇವಿಸಿದರೆ ನಿಮಗೆ ಹೃದಯಾಘಾತ ಬರುವುದಿಲ್ಲ!