ಮಗುವಿನ ಪ್ರಾಣ ಉಳಿಸಲು ಕೊನೆಗೆ ತನ್ನ ಶೂ, ಜರ್ಸಿ ಹರಾಜು ಹಾಕಿದ್ದ ಗಿಲ್ ಈಗ ಫಿಫಾ ವಿಶ್ವಕಪ್‌ ಹೀರೋ

Published : Jun 30, 2026, 07:54 PM IST

ಮಗು ಹುಟ್ಟಿದ ಸಂಭ್ರಮ ಗಿಲ್‌ಗೆ ಇರಲಿಲ್ಲ. ಕಾರಣ ಮಾರಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲಿದ ತನ್ನ ಕಂದನ ಉಳಿಸಲು ಹೋರಾಡಿದ್ದ. ಮನೆ, ಕಾರು, ಆಸ್ತಿ ಎಲ್ಲಾ ಮಾರಾಟ ಮಾಡಿದರೂ ಆಸ್ಪತ್ರೆ ಬಿಲ್ ಭರಿಸಲಾಗಲಿಲ್ಲ, ಕೊನೆಗೆ ತನ್ನ ಫುಟ್ಬಾಲ್ ಕಿಟ್, ಶೂಟ, ಜರ್ಸಿ ಹರಾಜು ಹಾಕಿದ್ದ ಈಗ ಫಿಫಾ ಹೀರೋ.

PREV
16
ಮಗುವಿನ ಹೋರಾಟಕ್ಕಿಳಿದು ಬರಿಗೈಯಲ್ಲಿ ನಿಂತ ಗಿಲ್

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದೀಗ ಪರಾಗ್ವೆಯದ್ದೇ ಸದ್ದು. ಟ್ರೋಫಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಜರ್ಮನಿ ತಂಡವನ್ನೇ ಟೂರ್ನಿಯಿಂದ ಹೊರದಬ್ಬಿದ ಪರಾಗ್ವೆ ಹೊಸ ಇತಿಹಾಸ ರಚಿಸಿದೆ. ಜರ್ಮನಿ ವಿರುದ್ದ ಪರಾಗ್ವೆ ಗೆಲುವಿನ ಹೀರೋ ಎಂದರೆ ಅದು ಒರ್ಲಾಂಡೋ ಗಿಲ್. ಪೆನಾಲ್ಟಿಯಲ್ಲಿ ಜರ್ಮನಿ ಗೋಲು ತಡೆದು ಪರಾಗ್ವೆ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಒರ್ಲಾಂಡೋ ಗಿಲ್, ಕೆಲ ತಿಂಗಳ ಹಿಂದೆ ತನ್ನ ಮಗುವಿನ ಪ್ರಾಣ ಉಳಿಸಲು ಹೋರಾಟ ಮಾಡಿ ಬರಿಗೈಯಲ್ಲಿ ನಿಂತಿದ್ದ.

26
ನನ್ನ ಕಂದನ ಉಳಿಸಿಕೊಡಿ

ಕಳೆದ ವರ್ಷ ಒರ್ಲಾಂಡೋ ಗಿಲ್ ತಂದೆಯಾಗಿ ಬಡ್ತಿ ಪಡೆದಿದ್ದ.ಆದರೆ ಗಿಲ್‌ಗೆ ಖುಷಿಗಿಂತ ಆತಂಕ ಹೆಚ್ಚಾಗಿತ್ತು. ಕಾರಣ ವೈದ್ಯರು ಮಗುವಿನ ಮಾರಣಾಂತಿಕ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ಶಸ್ತ್ರಚಿಕಿತ್ಸೆ, ಚಿಕಿತ್ಸೆಗಳು ಅನಿವಾರ್ಯ ಎಂದಿದ್ದರು. ವೈದ್ಯರ ಬಳಿ ಗಿಲ್ ಹೇಳಿದ್ದು ಒಂದೇ ಮಾತು, ನನಗೆ ಕಂದನ ಉಳಿಸಿಕೊಡಿ ಎಂದಿದ್ದರು.

36
ಮಗುವಿನ ಪ್ರಾಣ ಉಳಿಸಲು ಗಿಲ್ ಹೋರಾಟ

ಪರಾಗ್ವೆ ಫುಟ್ಬಾಲ್ ಗೋಲ್‌ಕೀಪರ್ ಒರ್ಲಾಂಡೋ ಗಿಲ್ ಮಗುವಿನ ಸರ್ಜರಿ, ಚಿಕಿತ್ಸೆಗೆ ಕೋಟಿ ಕೋಟಿ ಖರ್ಚಾಗಿತ್ತು. ಖಾತೆಯಲ್ಲಿದ್ದ ಉಳಿತಾಯ, ಕಾರು, ಬಂಗಲೆ ಎಲ್ಲವೂ ಮಾರಾಟ ಮಾಡಿದ್ದ ಗಿಲ್, ಕೊನೆಗೆ ತನ್ನ ಜರ್ಸಿ, ಶೂ, ಫುಟ್ಬಾಲ್ ಕಿಟ್ ಹರಾಜು ಹಾಕಿದ್ದ. ಆಪ್ತ ಗೆಳೆಯರ ಬಳಿ ಸಾಲ ಮಾಡಿ ಮಗುವಿನ ಆಸ್ಪತ್ರೆ ಬಿಲ್ ಕಟ್ಟಿದ್ದ ಗಿಲ್ ಇದೀಗ ಫಿಫಾ ವಿಶ್ವಕಪ್‌ನ ಹೀರೋ ಆಗಿ ಮಿಂಚಿದ್ದಾರೆ.

46
ಜರ್ಮನಿ ಹೊರಕಳುಹಿಸಿದ ಹೀರೋ

ಪರಾಗ್ವೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 16ರ ಘಟ್ಟ ತಲುಪಿದೆ. ಇದಕ್ಕೆ ಕಾರಣ ಒರ್ಲಾಂಡೋ ಗಿಲ್. ಜರ್ಮನಿ ಹಾಗೂ ಪರಾಗ್ವೆ ನಡುವಿನ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡು ಪೆನಾಲ್ಟಿ ಹಂತಕ್ಕೆ ತಲುಪಿತ್ತು. ಫಿಫಾ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ತಂಡ ಜರ್ಮನಿ. ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವುದು ಜರ್ಮನಿಗೆ ಗೊತ್ತಿತ್ತು. ಆದರೆ ಈ ಆಟ ಗಿಲ್ ಮುಂದೆ ನಡೆಯಲಿಲ್ಲ.

56
4-3 ಅಂತರದಿಂದ ಗೆದ್ದ ಪರಾಗ್ವೆ

ಪೆನಾಲ್ಟಿ ಶೂಟೌಟ್‌ನಲ್ಲಿ ಒರ್ಲಾಂಡೋ ಗಿಲ್ ತನ್ನ ಅದ್ಭುತ ಕೈಚಳಕ ತೋರಿದ್ದಾರೆ. ಜರ್ಮನಿ ಪೆನಾಲ್ಟಿ ತಡೆದು 4-3 ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 26ರ ಹರೆಯದ ಒರ್ಲಾಂಡೋ ಗಿಲ್ ಪರಾಗ್ವೆ ಪರ 10ನೇ ಪಂದ್ಯ ಆಡುತ್ತಿದ್ದಾರೆ. ಈ ಹತ್ತೂ ಪಂದ್ಯದಲ್ಲೂ ಗಿಲ್ ಕೊಡುಗೆ ಮುಖ್ಯ. ಇದೇ ಕಾರಣದಿಂದ ಪರಾಗ್ವೆ ಇದೀಗ ಫಿಫಾ ವಿಶ್ವಕಪ್ ಟೂರ್ನಿಯ 16ರ ಹಂತಕ್ಕೆ ಪ್ರವೇಶ ಪಡೆದಿದೆ.

66
ಮೈದಾನದಲ್ಲಿ ಕಣ್ಣೀರಿಟ್ಟ ಜರ್ಮನಿ

ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಜರ್ಮನಿ ಪರಾಗ್ವೆ ಮಣಿಸಿ 16ರ ಘಟ್ಟ ತಲುಪುವ ವಿಶ್ವಾಸದಲ್ಲಿತ್ತು. ಆದರೆ ಒರ್ಲಾಂಡೋ ಗಿಲ್ ಗೋಲ್‌ಕೀಪಿಂಗ್ ಮುಂದೆ ಜರ್ಮನಿಗೆ ಮಾತೇ ಬರದಾಯಿತು. ಸೋಲಿನಿಂದ ಟೂರ್ನಯಿಂದಲೇ ಹೊರಬಿತ್ತು. ಮೈದಾನದಲ್ಲಿ ಜರ್ಮನಿ ಕಣ್ಣೀರಿಟ್ಟಿತು. ಇದೀಗ ಒರ್ಲಾಂಡೋ ಗಿಲ್ ಫಿಫಾ 2026ರ ವಿಶ್ವಕಪ್ ಹೀರೋ ಆಗಿ ಮಿಂಚಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories