FIFA ವಿಶ್ವಕಪ್ 2026ರಲ್ಲಿ ಹೊಸ ದಾಖಲೆ ಬರೆದ ಫ್ಯಾನ್ಸ್, ಅಭಿಮಾನಿಗಳ ಹಾಜರಾತಿ ಏಷ್ಟಾಗಿದೆ ಗೊತ್ತಾ?

Published : Jun 26, 2026, 12:58 PM IST

ಫಿಫಾ ವಿಶ್ವಕಪ್ 2026 ಟೂರ್ನಿಯಲ್ಲಿ ತಂಡಗಳು, ಫುಟ್ಬಾಲ್ ಪಟುಗಳು ದಾಖಲೆ ಬರೆಯುವುದು ಸಾಮಾನ್ಯ ಆದರೆ ಈ ಬಾರಿ ಅಭಿಮಾನಿಗಳು ಹೊಸ ದಾಖಲೆ ಬರೆದಿದ್ದಾರೆ. ವಿಶೇಷ ಅಂದರೆ ಆರಂಭಿಕ 56 ಪಂದ್ಯದಲ್ಲಿ ಫ್ಯಾನ್ಸ್ ಬರೆದ ದಾಖಲೆ ಏನು?

PREV
15
ಅಭಿಮಾನಿಗಳಿಂದ ಹೊಸ ದಾಖಲೆ

ಫುಟ್ಬಾಲ್ FIFA World cup 2026 ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಲಿಯೋನಲ್ ಮೆಸ್ಸಿ ಹ್ಯಾಟ್ರಿಕ್ ಗೋಲು ಸೇರಿದಂತೆ ಐತಿಹಾಸಿಕ ಕ್ಷಣಗಳಲ್ಲಿ ಅಭಿಮಾನಿಗಳು ಮಿಂದೆದ್ದಿದ್ದಾರೆ. ಇದೀಗ ಅಭಿಮಾನಿಗಳು ಹೊಸ ದಾಖಲೆ ಬರೆದಿದ್ದಾರೆ. ಅಮೆರಿಕದ ಆಯೋಜಿಸಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಗರಿಷ್ಠ ಹಾಜರಾತಿ ದಾಖಲೆಯನ್ನು ಫ್ಯಾನ್ಸ್ ಸೃಷ್ಟಿಸಿದ್ದಾರೆ.

25
3.60 ಕೋಟಿ ಅಭಿಮಾನಿಗಳಿಂದ ಪಂದ್ಯ ವೀಕ್ಷಣೆ

ಈ ಬಾಯಿ ಫಿಫಾ ವಿಶ್ವಕಪ್ ಟೂರ್ನಿಯನ್ನು ಅಮೆರಿಕ ಆಯೋಜಿಸುತ್ತಿದೆ. ಹಲವು ಅಭಿಮಾನಿಗಳು ಅಮೆರಿಕ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಮುಖವಾಗಿ ಪ್ರಯಾಣದ ನಿರ್ಬಂಧ, ಆಯೋಜನೆ ಸಮಸ್ಯೆ, ಬಲು ದುಬಾರಿ ಟೆಕೆಟ್ ಬೆಲೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದೆ ಇದರ ನಡುವೆಯೂ ಅಮೆರಿಕಗೆ ತೆರಳಿ ಅಭಿಮಾನಿಗಳು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಿದ್ದಾರೆ. ಆರಂಭಿಕ 56 ಪಂದ್ಯಗಳಲ್ಲಿ ಒಟ್ಟು 3.60 ಕೋಟಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದಾರೆ.

35
1994ರ ಫಿಫಾ ವಿಶ್ವಕಪ್‌ಗೆ ಹೋಲಿಸಿದರೆ ದಾಖಲೆ

1994ರಲ್ಲಿ ಅಮೆರಿಕ ಫಿಫಾ ವಿಶ್ವಕಪ್ ಟೂರ್ನಿ ಆಯೋಜಿಸಿತ್ತು. ಈ ವೇಳೆ ಆರಂಭಿಕ 56 ಪಂದ್ಯಗಳಲ್ಲಿ 3.587 ಮಿಲಿಯನ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದರು. ಇದೀಗ ಈ ದಾಖಲೆಯನ್ನು ಈ ಬಾರಿ ಅಮೆರಿಕ ಆಯೋಜಿಸಿದ ಫಿಫಾ ವಿಶ್ವಕಪ್ ಟೂರ್ನಿ ಬ್ರೇಕ್ ಮಾಡಿದೆ.

45
ಒಂದೇ ದಿನ 2.81 ಲಕ್ಷ ಅಭಿಮಾನಿಗಳು

ಜೂನ್ 16ರಂದು ಒಂದೇ ದಿನ ಮೂರು ಪಂದ್ಯ ನಡೆದಿತ್ತು. ಈ ಮೂರು ಪಂದ್ಯಗಳ ಒಟ್ಟು ಅಭಿಮಾನಿಗಳ ಸಂಖ್ಯೆ 2.81 ಲಕ್ಷ. ಈ ಮೂಲಕ ಒಂದೇ ದಿನ ಗರಿಷ್ಠ ಮಂದಿ ಫುಟ್ಬಾಲ್ ಪಂದ್ಯ ವೀಕ್ಷಣೆ ಮಾಡಿದ ದಾಖಲೆಯೂ ಸೃಷ್ಟಿಯಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರತಿ ಪಂದ್ಯಕ್ಕೆ ಹಾಜರಾಗುತ್ತಿದ್ದಾರೆ.

55
ಅಮೆರಿಕ ವಿರುದ್ದ ಆಕ್ರೋಶ

ಫಿಫಾ ಫುಟ್ಬಾಲ್ ಅಭಿಮಾನಿಗಳು ಅಮೆರಿಕ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಫುಟ್ಬಾಲ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಹಲವು ನಿರ್ಬಂಧ ಹೇರುತ್ತಿದ್ದಾರೆ. ಅಮೆರಿಕ ಪ್ರಯಾಣ ತೀವ್ರ ಸಂಕಷ್ಟ ತರುತ್ತಿದೆ ಎಂದಿದ್ದಾರೆ. ಇತ್ತ ಅಮೆರಿಕದಲ್ಲಿ ಫುಟ್ಬಾಲ್ ಪಂದ್ಯದ ಟಿಕೆಟ್ ಬೆಲೆ ಬಲು ದುಬಾರಿಯಾಗಿದೆ. ಇತರ ಯಾವುದೇ ದೇಶಗಳು ಆಯೋಜನೆ ಮಾಡುವಾಗ ಈ ಸಮಸ್ಯೆಗಳು ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories